ಮತ್ತೊಂದು ಸರ್ಜಿಕಲ್​ ಸ್ಟ್ರೈಕ್​ಗೆ ಭಾರತದ ಪ್ಲಾನ್: ಪಾಕ್ ವಿದೇಶಾಂಗ ಸಚಿವ ಆರೋಪ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 18, 2020 | 7:27 PM

ಮತ್ತೊಂದು ಸರ್ಜಿಕಲ್​ ಸ್ಟ್ರೈಕ್​ ನಡೆಸಲು ಭಾರತ ಸಂಚು ರೂಪಿಸಿರುವ ಬಗ್ಗೆ ನಮ್ಮ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ಪಾಕಿಸ್ತಾನದಲ್ಲಿ ಭಯೋತ್ಪಾದನೆಯ ಅಲೆ ಸೃಷ್ಟಿಸೋಕೆ ಭಾರತ ಸಿದ್ಧತೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.

ಮತ್ತೊಂದು ಸರ್ಜಿಕಲ್​ ಸ್ಟ್ರೈಕ್​ಗೆ ಭಾರತದ ಪ್ಲಾನ್: ಪಾಕ್ ವಿದೇಶಾಂಗ ಸಚಿವ ಆರೋಪ
ಸಾಂದರ್ಭಿಕ ಚಿತ್ರ
Follow us on

ಅಬುಧಾಬಿ: ಪಾಕಿಸ್ತಾನದ ವಿರುದ್ಧ ಭಾರತ ಸರ್ಜಿಕಲ್​ ಸ್ಟ್ರೈಕ್​ ನಡೆಸೋಕೆ ಸಿದ್ಧತೆ ಮಾಡಿಕೊಂಡಿದೆ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮಹಮೂದ್​ ಖುರೇಷಿ ಆರೋಪಿಸಿದ್ದಾರೆ.

ಯುಎಇನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖುರೇಷಿ, ಮತ್ತೊಂದು ಸರ್ಜಿಕಲ್​ ಸ್ಟ್ರೈಕ್​ ನಡೆಸಲು ಭಾರತ ಸಂಚು ರೂಪಿಸಿರುವ ಬಗ್ಗೆ ನಮ್ಮ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ಪಾಕಿಸ್ತಾನದಲ್ಲಿ ಭಯೋತ್ಪಾದನೆಯ ಅಲೆ ಸೃಷ್ಟಿಸೋಕೆ ಭಾರತ ಸಿದ್ಧತೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.

ಭಾರತ ದಾಳಿ ಮಾಡಿದರೆ ಪಾಕಿಸ್ತಾನವು ತಕ್ಕ ಉತ್ತರ ನೀಡಲಿದೆ ಎಂದಿರುವ ಖುರೇಷಿ, ಭಾರತ ನಡೆಸುತ್ತಿರುವ ಸಂಚಿನ ಬಗ್ಗೆ ನಮಗೆ ಅರಿವಿದೆ. ಒಂದೊಮ್ಮೆ ಭಾರತ ಸರ್ಜಿಕಲ್​ ಸ್ಟ್ರೈಕ್​ ಮಾಡಿದರೆ ನಾವು ತಕ್ಕ ಉತ್ತರ ನೀಡೋಕೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಭಾರತವು ಆಂತರಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಜನರ ಕಣ್ಣು ಅದರ ಮೇಲೆ ಇದೆ. ಜನರ ಗಮನ ಬೇರೆಡೆ ಸೆಳೆಯಲು ಭಾರತ ಇಂಥ ದಾಳಿಗೆ ಮುಂದಾಗಬಹುದು ಎಂದು ಖುರೇಷಿ ಆರೋಪಿಸಿದ್ದಾರೆ. ಈ ಮೂಲಕ ಈಗ ನಡೆಯುತ್ತಿರುವ ರೈತರ ಪ್ರತಿಭಟನೆಯ ಗಮನ ಬೇರೆಡೆ ಸೆಳೆಯಲು ಭಾರತದ ನರೇಂದ್ರ ಮೋದಿ ಸರ್ಕಾರ ಈ ಪ್ಲಾನ್ ಮಾಡಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದ ಪಾಕ್ ಭಯೋತ್ಪಾದಕರು ಸೈನಿಕರನ್ನು ಹತ್ಯೆ ಮಾಡಿದ್ದರು. ಇದಕ್ಕೆ ತಕ್ಕ ಉತ್ತರ ನೀಡಿದ್ದ ಭಾರತೀಯ ಸೇನೆ ಸೆಪ್ಟೆಂಬರ್​ 29, 2016ರಂದು ಪಾಕ್​ ನೆಲದಲ್ಲಿದ್ದ ಭಯೋತ್ಪಾದಕ ಶಿಬಿರಗಳ ಮೇಲೆ ಸರ್ಜಿಕಲ್​ ಸ್ಟ್ರೈಕ್​ ನಡೆಸಿತ್ತು. 2019ರ ಫೆಬ್ರವರಿಯಲ್ಲಿ ಪಾಕಿಸ್ತಾನದ ಬಾಲಾಕೋಟ್​ನಲ್ಲಿದ್ದ ಭಯೋತ್ಪಾದಕರ ಶಿಬಿರದ ಮೇಲೆ  ಎರಡನೇ ಏರ್​ಸ್ಟ್ರೈಕ್​ ನಡೆದಿತ್ತು.

ಭಾರತದ ಡಿಜಿಟಲ್ ಸರ್ಜಿಕಲ್ ಸ್ಟ್ರೈಕ್.. ಚೀನಾಗೇ ತಿರುಗುಬಾಣವಾದ ಚೀನಾ ತಂತ್ರ!