ಗೆದ್ದ ಖುಷಿ! ಪುರಸಭೆ ಕಚೇರಿ ಮೇಲೆ ಜೈ ಶ್ರೀರಾಮ್ ಬ್ಯಾನರ್ ಹಾಕಿದ್ದ ಬಿಜೆಪಿಗರ ವಿರುದ್ಧ ಕೇಸ್ ದಾಖಲು
ಒಂದೆಡೆ ಪುರಸಭೆ ಕಾರ್ಯದರ್ಶಿ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೆ, ಇನ್ನೊಂದೆಡೆ, ಅಲ್ಲಿನ ಎಡಪಂಥೀಯ ಸಂಘಟನೆ DYFI ಇಂದು ಪುರಸಭೆ ಕಚೇರಿ ಬಳಿ ತ್ರಿವರ್ಣ ಧ್ವಜ ಹಾರಿಸಿದೆ.
ಪಾಲಕ್ಕಡ್: ಕೇರಳದ ಪಾಲಕ್ಕಾಡ್ ಪುರಸಭೆ ಕಚೇರಿಯ ಟೆರೇಸ್ ಮೇಲೆ ಜೈ ಶ್ರೀರಾಮ್ ಎಂದು ಬರೆದ ದೊಡ್ಡದಾದ ಬ್ಯಾನರ್ ಹಾಕಿ, ಸಂಭ್ರಮಾಚರಣೆ ಮಾಡಿದ್ದ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚೆಗೆ ನಡೆದಿದ್ದ ಪಾಲಕ್ಕಾಡ್ ಪುರಸಭೆ ಚುನಾವಣೆಯಲ್ಲಿ 52 ವಾರ್ಡ್ಗಳಲ್ಲಿ 28 ಸೀಟ್ಗಳನ್ನು ಗೆಲ್ಲುವ ಮೂಲಕ ಬಿಜೆಪಿ ಗೆಲುವು ಸಾಧಿಸಿತ್ತು. ಅದಾದ ಬಳಿಕ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಭರ್ಜರಿಯಾಗಿ ಸಂಭ್ರಮ ಆಚರಿಸಿದ್ದರು. ಹಾಗೇ, ಕಚೇರಿಯ ಟೆರೇಸ್ನಿಂದ ಜೈ ಶ್ರೀರಾಮ್ ಎಂದು ಮಲೆಯಾಳಂನಲ್ಲಿ ಬರೆದುಕೊಂಡಿದ್ದ ದೊಡ್ಡ ಬ್ಯಾನರ್ನ್ನು ಇಳಿಯಬಿಟ್ಟಿದ್ದರು. ಅದರಲ್ಲಿ ಛತ್ರಪತಿ ಶಿವಾಜಿ ಚಿತ್ರವೂ ಇತ್ತು. ಇದರ ವಿರುದ್ಧ ಪುರಸಭೆಯ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದರು. ಇದು ಕೋಮು ಸೌಹಾರ್ದವನ್ನು ಕದಡುವ ಪ್ರಯತ್ನ ಎಂದು ಆರೋಪಿಸಿದ್ದರು.
ಅಷ್ಟೇ ಅಲ್ಲದೆ ಈ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಚಿತ್ರವನ್ನೊಳಗೊಂಡ ಇನ್ನೊಂದು ಬ್ಯಾನರ್ ಕೂಡ ಹಾಕಿದ್ದರು. ಒಂದೆಡೆ ಪುರಸಭೆ ಕಾರ್ಯದರ್ಶಿ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೆ, ಇನ್ನೊಂದೆಡೆ, ಅಲ್ಲಿನ ಎಡಪಂಥೀಯ ಸಂಘಟನೆ DYFI ಇಂದು ಪುರಸಭೆ ಕಚೇರಿ ಬಳಿ ತ್ರಿವರ್ಣ ಧ್ವಜ ಹಾರಿಸಿ, ಬಿಜೆಪಿ ಮತ್ತು ಆರ್ಎಸ್ಎಸ್ ವಿರೋಧಿ ಘೋಷಣೆಗಳನ್ನು ಕೂಗಿದೆ.
ಟಿಎಂಸಿ ತೊರೆದ ಸುವೇಂದು ಅಧಿಕಾರಿಗೆ Z ಶ್ರೇಣಿಯ ಭದ್ರತೆ ನೀಡಲು ಕೇಂದ್ರ ಸರ್ಕಾರದ ನಿರ್ಧಾರ