ದೆಹಲಿ: ಭಾರತವು ಭಾನುವಾರ 25,072 ಹೊಸ ಕೊವಿಡ್ -19 ಪ್ರಕರಣಗಳು ಮತ್ತು 389ಸಾವುಗಳನ್ನು ವರದಿ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,33,924 ಆಗಿದ್ದು, ಭಾರತದ ಕೊವಿಡ್ -19 ಲಸಿಕೆ ವ್ಯಾಪ್ತಿಯು 58 ಕೋಟಿ ತಲುಪಿದೆ. ಕಳೆದ 24 ಗಂಟೆಗಳಲ್ಲಿ58,25,49,595 ಲಸಿಕೆ ಡೋಸ್ ನೀಡಲಾಗಿದೆ. ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 3,24,49,306 ಆಗಿದ್ದು 3,16,80,626 ಮಂದಿ ಚೇತರಿಸಿಕೊಂಡಿದ್ದಾರೆ.
India reports 25,072 new #COVID19 cases, 44,157 recoveries and 389 deaths in the last 24 hrs, as per Health Ministry.
Total cases: 3,24,49,306
Total recoveries: 3,16,80,626
Active cases: 3,33,924
Death toll: 4,34,756Total vaccinated: 58,25,49,595 (7,95,543 in last 24 hours) pic.twitter.com/jiyOwmadnx
— ANI (@ANI) August 23, 2021
ದೆಹಲಿಯಲ್ಲಿ ಸತತ ಮೂರನೇ ದಿನ ಕೊವಿಡ್ -19 ನಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ. 24 ಹೊಸ ಪ್ರಕರಣಗಳು ಇಲ್ಲಿ ವರದಿ ಆಗಿದ್ದು ಧನಾತ್ಮಕ ದರವು ಶೇಕಡಾ 0.04 ರಷ್ಟಿದೆ ಎಂದು ಆರೋಗ್ಯ ಇಲಾಖೆಯ ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮಹಾರಾಷ್ಟ್ರದಲ್ಲಿ ಭಾನುವಾರ 4,141 ಹೊಸ ಕೊವಿಡ್ ಪ್ರಕರಣಗಳು ವರದಿ ಆಗಿದೆ.
ಏತನ್ಮಧ್ಯೆ, 12 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು ಮತ್ತು ಮಕ್ಕಳಿಗೆ ಕೋವಿಡ್ ಲಸಿಕೆ ZyCoV-D ನಿನ್ನೆ ಅನುಮೋದನೆ ಪಡೆದ ಜೈಡಸ್ ಕ್ಯಾಡಿಲಾ ಅಕ್ಟೋಬರ್ ವೇಳೆಗೆ ತಿಂಗಳಿಗೆ ಒಂದು ಕೋಟಿ ಡೋಸ್ ಉತ್ಪಾದಿಸುವ ಭರವಸೆ ಇದೆ ಎಂದು ಶನಿವಾರ ಹೇಳಿದರು.
ಆಂಧ್ರಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,085 ಹೊಸ ಕೊರೊನಾವೈರಸ್ ಪ್ರಕರಣಗಳು, 1,541 ಚೇತರಿಕೆ ಮತ್ತು 8 ಸಾವುಗಳು ವರದಿ ಆಗಿವೆ. ರಾಜ್ಯದ ಕೊವಿಡ್ -19 ಚಾರ್ಟ್ ಈಗ ಒಟ್ಟು 20,02,340 ಪಾಸಿಟಿವ್, 19,73,940 ಚೇತರಿಕೆ ಮತ್ತು 13,723 ಸಾವುಗಳನ್ನು ತೋರಿಸಿದೆ. ಇತ್ತೀಚಿನ ಬುಲೆಟಿನ್ ಪ್ರಕಾರ, ಸಕ್ರಿಯ ಪ್ರಕರಣಗಳ ಸಂಖ್ಯೆ 14,677 ಕ್ಕೆ ಇಳಿದಿದೆ. 24 ಗಂಟೆಗಳಲ್ಲಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ 10 ರಿಂದ 137 ರಷ್ಟಿದೆ.
ಭಾರತದಲ್ಲಿ 58 ಕೋಟಿ ಲಸಿಕೆ ವಿತರಣೆ
ಭಾರತದ ಕೋವಿಡ್ -19 ಲಸಿಕೆ ವ್ಯಾಪ್ತಿಯು 58 ಕೋಟಿ ದಾಟಿದೆ ಮೀರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 52,23,612 ಲಸಿಕೆ ಡೋಸ್‌ಗಳ ವಿತರಣೆಯೊಂದಿಗೆ ಭಾರತದ ಕೋವಿಡ್ -19 ಲಸಿಕೆ ವ್ಯಾಪ್ತಿಯು ತಾತ್ಕಾಲಿಕ ವರದಿಗಳ ಪ್ರಕಾರ ಒಟ್ಟು ಅಂಕಿ ಅಂಶ 58.14 ಕೋಟಿ (58,14,89,377) ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
COVID-19 Testing Update. For more details visit: https://t.co/dI1pqvXAsZ @MoHFW_INDIA @DeptHealthRes @PIB_India @mygovindia @COVIDNewsByMIB #ICMRFIGHTSCOVID19 #IndiaFightsCOVID19 #CoronaUpdatesInIndia #COVID19 #Unite2FightCorona pic.twitter.com/KVXb0G7cmm
— ICMR (@ICMRDELHI) August 23, 2021
ಭಾರತವು ವಾರದಲ್ಲಿ ಶೇ 13.6ನಷ್ಟು ಕೊವಿಡ್ ಪ್ರಕರಣಗಳನ್ನು ವರದಿ ಮಾಡಿದೆ. ಹಬ್ಬಗಳ ಕಾರಣದಿಂದಾಗಿ ಈ ಅವಧಿಯಲ್ಲಿ ಪರೀಕ್ಷೆಯು ಉತ್ತುಂಗದಲ್ಲಿದ್ದರೂ ಕಳೆದ ವಾರದಲ್ಲಿ ಸೋಂಕುಗಳು ಶೇ 13.6ರಷ್ಟು ಕಡಿಮೆಯಾಗಿ ಸುಮಾರು ಎರಡು ತಿಂಗಳಲ್ಲಿ ಸಾಪ್ತಾಹಿಕ ಕೊವಿಡ್ -19 ಪ್ರಕರಣಗಳಲ್ಲಿ ಭಾರತವು ತೀವ್ರ ಕುಸಿತವನ್ನು ಕಂಡಿತು. ಜೂನ್ 28-ಜುಲೈ 4 ವಾರಗಳ ನಂತರ ಸಾಪ್ತಾಹಿಕ ಪ್ರಕರಣಗಳಲ್ಲಿ ಇದು ಮೊದಲ ಎರಡು-ಅಂಕಿಯ ಕುಸಿತವಾಗಿದೆ.
ಇದನ್ನೂ ಓದಿ: ಕರ್ನಾಟಕದ ಕೊರೊನಾ ಹಾಟ್ಸ್ಪಾಟ್ ಆಗುತ್ತಿದೆ ದಕ್ಷಿಣ ಕನ್ನಡ; ಕರಾವಳಿಯಲ್ಲಿ ಕೊವಿಡ್ ಹೆಚ್ಚಾಗಲು ಕಾರಣವೇನು?
(India records 25,072 new Covid-19 cases 389 deaths in last 24 hours as per health ministry)