Coronavirus cases in India: ದೇಶದಲ್ಲಿ 26,041 ಹೊಸ ಕೊವಿಡ್ ಪ್ರಕರಣ ಪತ್ತೆ, 267 ಮಂದಿ ಸಾವು

| Updated By: ರಶ್ಮಿ ಕಲ್ಲಕಟ್ಟ

Updated on: Sep 27, 2021 | 10:40 AM

Covid-19: ಕಳೆದ 24 ಗಂಟೆಗಳಲ್ಲಿ 11,65,006 ಕೊವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ.ಇಲ್ಲಿಯವರೆಗೆ ನಡೆಸಿದ ಒಟ್ಟು ಪರೀಕ್ಷೆಗಳು 56.44 ಕೋಟಿ. ಸಾಪ್ತಾಹಿಕ ಧನಾತ್ಮಕ ದರ 1.94 ಶೇಕಡಾ ಆಗಿದ್ದು ಕಳೆದ 94 ದಿನಗಳಲ್ಲಿ 3 ಶೇಕಡಾಕ್ಕಿಂತ ಕಡಿಮೆಯಿದೆ.

Coronavirus cases in India: ದೇಶದಲ್ಲಿ 26,041 ಹೊಸ ಕೊವಿಡ್ ಪ್ರಕರಣ ಪತ್ತೆ, 267 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 26,041 ಹೊಸ ಕೊವಿಡ್ -19 (Covid-19) ಪ್ರಕರಣಗಳು ಪತ್ತೆಯಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 2,99,620 ಕ್ಕೆ ತಲುಪಿದೆ. ಇದು 191 ದಿನಗಳಲ್ಲಿ ಕಡಿಮೆ. ಭಾರತದ ಒಟ್ಟು ಕೊವಿಡ್ ಪ್ರಕರಣಗಳಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳು ಕೇವಲ 0.89 ಪ್ರತಿಶತದಷ್ಟು ಮಾತ್ರ ಇವೆ.ಇದೇ ಅವಧಿಯಲ್ಲಿ ದೇಶದಲ್ಲಿ 276 ಹೊಸ ಸಾವುಗಳು ವರದಿ ಆಗಿದೆ. ಕಳೆದ 24 ಗಂಟೆಗಳಲ್ಲಿ 29,621 ಮಂದಿ ಚೇತರಿಸಿದ್ದು ಒಟ್ಟು ಚೇತರಿಕೆಸಂ ಖ್ಯೆ 3,29,31,972 ಕ್ಕೆ ಏರಿಕೆಯಾಗಿದೆ. ಚೇತರಿಕೆಯ ದರವು ಪ್ರಸ್ತುತ 97.78 ಶೇಕಡಾ ಆಗಿದೆ. ಕಳೆದ 24 ಗಂಟೆಗಳಲ್ಲಿ 38,18,362 ಲಸಿಕೆಗಳನ್ನು ನೀಡಲಾಗಿದೆ. ಇಲ್ಲಿಯವರೆಗೆ ಒಟ್ಟು 86.01 ಕೋಟಿ ಲಸಿಕೆ ಪ್ರಮಾಣವನ್ನು ನೀಡಲಾಗಿದೆ.

22,69,42,725 ಜನರು ಇದುವರೆಗೆ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಇದು ಅರ್ಹ ಜನಸಂಖ್ಯೆಯ ಶೇ 24 (94.4 ಕೋಟಿ) ಮತ್ತು ಒಟ್ಟು ಜನಸಂಖ್ಯೆಯ ಶೇ 16.3 (139 ಕೋಟಿ) ಗಳನ್ನು ಪ್ರತಿನಿಧಿಸುತ್ತದೆ.


ಕಳೆದ 24 ಗಂಟೆಗಳಲ್ಲಿ 11,65,006 ಕೊವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ.ಇಲ್ಲಿಯವರೆಗೆ ನಡೆಸಿದ ಒಟ್ಟು ಪರೀಕ್ಷೆಗಳು 56.44 ಕೋಟಿ. ಸಾಪ್ತಾಹಿಕ ಧನಾತ್ಮಕ ದರ 1.94 ಶೇಕಡಾ ಆಗಿದ್ದು ಕಳೆದ 94 ದಿನಗಳಲ್ಲಿ 3 ಶೇಕಡಾಕ್ಕಿಂತ ಕಡಿಮೆಯಿದೆ. ಆದರೆ ದೈನಂದಿನ ಧನಾತ್ಮಕ ದರವು 2.24 ಶೇಕಡಾ, ಕಳೆದ 28 ದಿನಗಳಲ್ಲಿ 3 ಶೇಕಡಕ್ಕಿಂತ ಕಡಿಮೆಯಿದೆ.

ದೆಹಲಿಯಲ್ಲಿ ಕೊವಿಡ್ ಸಾವುಗಳು ಇಲ್ಲ, 29 ಹೊಸ ಪ್ರಕರಣಗಳು
ರಾಷ್ಟ್ರ ರಾಜಧಾನಿ ಭಾನುವಾರ 29 ಕೊರೊನಾವೈರಸ್ ಪ್ರಕರಣ ದಾಖಲಿಸಿದ್ದು ಯಾವುದೇ ಸಾವು ಪ್ರಕರಣಗಳನ್ನು ವರದಿ ಮಾಡಿಲ್ಲ. ಆರೋಗ್ಯ ಇಲಾಖೆ ಹಂಚಿಕೊಂಡ ದತ್ತಾಂಶದ ಪ್ರಕಾರ, ಧನಾತ್ಮಕ ದರವು ಶೇಕಡಾ 0.05 ರಷ್ಟಿದೆ.

ಮಹಾರಾಷ್ಟ್ರದಲ್ಲಿ 3,206 ಕೊವಿಡ್ -19 ಪ್ರಕರಣಗಳು, 36 ಸಾವುಗಳು, 3,292 ಚೇತರಿಕೆ
ಮಹಾರಾಷ್ಟ್ರದಲ್ಲಿ ಭಾನುವಾರ 3,206 ಹೊಸ ಕೊರೊನಾವೈರಸ್ ಪ್ರಕರಣಗಳು ಮತ್ತು 36 ಸಾವುಗಳು ಸಂಭವಿಸಿದ್ದು, 3,292 ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಸೋಂಕಿನ ಸಂಖ್ಯೆಯನ್ನು 65,44,325 ಕ್ಕೆ ಮತ್ತು ಸಾವಿನ ಸಂಖ್ಯೆ 1,38,870ರಷ್ಟಿದೆ. ಮಹಾರಾಷ್ಟ್ರದಲ್ಲಿ ಒಟ್ಟು ಚೇತರಿಕೆಯ ಸಂಖ್ಯೆ 63,64,027 ಆಗಿದ್ದು, ಇದು ಅಧಿಕೃತ ಹೇಳಿಕೆಯ ಪ್ರಕಾರ ರಾಜ್ಯದಲ್ಲಿ 37,860 ಸಕ್ರಿಯ ಪ್ರಕರಣಗಳಿವೆ.

ಕೇರಳದಲ್ಲಿ ಭಾನುವಾರ 15, 951 ಹೊಸ ಕೊವಿಡ್ -19 ಪ್ರಕರಣಗಳನ್ನು ದಾಖಲಾಗಿದೆ ಎಂದು ಆರೋಗ್ಯ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 165 ಹೊಸ ಸಾವುನೋವುಗಳೊಂದಿಗೆ, ಸಾವಿನ ಸಂಖ್ಯೆ 24,603 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 1,03,484 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಇದನ್ನೂ ಓದಿ: Covid 19 Karnataka Update: ಕರ್ನಾಟಕದಲ್ಲಿ 787 ಮಂದಿಗೆ ಕೊವಿಡ್, 11 ಸಾವು

(India records 26,041 fresh COVID-19 cases and 276 Deaths in the last 24 hours)