Video: ನವದಂಪತಿಯನ್ನು ರಸ್ತೆಯಲ್ಲಿ ತಡೆದ ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಛನ್ನಿ; ನಿಯಮ ಉಲ್ಲಂಘನೆ
ಪಂಜಾಬ್ನಲ್ಲಿ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬದಲಾವಣೆಯಾಗಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ರನ್ನು ಕೆಳಗಿಳಿಸಿ ಛನ್ನಿ ಅವರನ್ನು ಸಿಎಂ ಮಾಡಲಾಗಿದೆ. ನಿನ್ನೆ ಸಂಪುಟ ವಿಸ್ತರಣೆಯೂ ಕೂಡ ಆಗಿದೆ.
ಪಂಜಾಬ್ನ ನೂತನ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಛನ್ನಿ(Charanjit Singh Channi) ನಿನ್ನೆ ಬಟಿಂಡಾಕ್ಕೆ ಭೇಟಿ ನೀಡಿದ ವೇಳೆ, ಹೊಸದಾಗಿ ಮದುವೆಯಾಗಿದ್ದ ಜೋಡಿ (newly wed couple) ಯೊಂದಕ್ಕೆ ಸರ್ಪ್ರೈಸ್ ನೀಡಿದ್ದಾರೆ. ನೂತನ ಮುಖ್ಯಮಂತ್ರಿ, ನವವಿವಾಹಿತರಿಗೆ ಸರ್ಪ್ರೈಸ್ ನೀಡಿದ ವಿಡಿಯೋವನ್ನು ಪಂಜಾಬ್ ಸರ್ಕಾರ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ. ಆದರೆ ಒಂದೆಂದರೆ, ಇಂಥ ಕೊವಿಡ್ 19 ಕಾಲದಲ್ಲೂ ಮುಖ್ಯಮಂತ್ರಿಯಿಂದ ಹಿಡಿದು ಪೊಲೀಸರು, ನವವಿವಾಹಿತರು, ಅವರ ಸಂಬಂಧಿಕರೆಲ್ಲ ಮಾಸ್ಕ್ ಇಲ್ಲದೆ ಗುಂಪಾಗಿ ನಿಂತಿದ್ದಾರೆ. ಹಾಗಾಗಿ ವಿಡಿಯೋ ನೋಡಿದ ಜನರು ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಕೊವಿಡ್ 19 ನಿಯಮ ಉಲ್ಲಂಘನೆ ಎಂದಿದ್ದಾರೆ.
ಚರಣಜಿತ್ ಸಿಂಗ್ ಛನ್ನಿ ನಿನ್ನೆ ಬಟಿಂಡಾಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಂಡಿ ಕಲನ್ ಗ್ರಾಮದ ಬಳಿ ನವವಿವಾಹಿತರು ಮತ್ತು ಅವರ ಸಂಬಂಧಿಕರು ಬರುತ್ತಿರುವುದನ್ನು ನೋಡಿದ ಛನ್ನಿ, ತಮ್ಮ ಗಾಡಿಯನ್ನು ನಿಲ್ಲಿಸಿ, ದಂಪತಿಗೆ ಶುಭಕೋರಿದ್ದಾರೆ. ಸಿಹಿಯನ್ನೂ ತಿಂದಿದ್ದಾರೆ. ಮುಖ್ಯಮಂತ್ರಿ ತಮಗೆ ಹಾರೈಸಿದ್ದಕ್ಕೆ ಆ ಹೊಸ ಜೋಡಿ ಫುಲ್ ಖುಷಿಯಾಗಿದ್ದು ವಿಡಿಯೋದಲ್ಲಿ ಕಾಣುತ್ತದೆ.
During his visit to Bathinda today, Chief Minister @CHARANJITCHANNI spotted a newly married couple at village Mandi Kalan and suddenly stopped his vehicle to convey his best wishes. pic.twitter.com/kws6XBAZGf
— Government of Punjab (@PunjabGovtIndia) September 26, 2021
ಪಂಜಾಬ್ನಲ್ಲಿ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬದಲಾವಣೆಯಾಗಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ರನ್ನು ಕೆಳಗಿಳಿಸಿ ಛನ್ನಿ ಅವರನ್ನು ಸಿಎಂ ಮಾಡಲಾಗಿದೆ. ನಿನ್ನೆ ಸಂಪುಟ ವಿಸ್ತರಣೆಯೂ ಕೂಡ ಆಗಿದ್ದು, ಈ ಹಿಂದೆ ಇದ್ದ ಕೆಲವು ಸಚಿವರನ್ನು ಕೈಬಿಡಲಾಗಿದೆ. ಆರು ಮಂದಿ ಹೊಸ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಛನ್ನಿ ತಮ್ಮನ್ನು ತಾವು ಸಾಮಾನ್ಯ ಜನರ ಪ್ರತಿನಿಧಿ ಎಂದು ಕರೆದುಕೊಂಡಿದ್ದಾರೆ. ಸದ್ಯ ಅವರ ಕ್ಯಾಬಿನೆಟ್ನಲ್ಲಿ 15 ಮಂದಿ ಸಚಿವರು ಇದ್ದಾರೆ.
ಇದನ್ನೂ ಓದಿ: ದಿಗಂತ್ ಬಾಯಿಂದ ಕೊಟ್ಟ ಹೂವನ್ನು ತುಟಿಯಿಂದಲೇ ಸ್ವೀಕರಿಸಿದ ಐಂದ್ರಿತಾ ರೇ; ಇಲ್ಲಿದೆ ವಿಡಿಯೋ
Bharat Bandh: ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆ ಶುರು; ಹೆದ್ದಾರಿಗಳೆಲ್ಲ ಬಂದ್
(Chief Minister Charanjit Singh Channi stopped his vehicle to greet newly wed couple in Punjab)