Coronavirus cases in India: ದೇಶದಲ್ಲಿ 26,727 ಹೊಸ ಕೊವಿಡ್ ಪ್ರಕರಣ ಪತ್ತೆ, 277 ಮಂದಿ ಸಾವು

| Updated By: ರಶ್ಮಿ ಕಲ್ಲಕಟ್ಟ

Updated on: Oct 01, 2021 | 10:41 AM

Covid 19: ದೇಶದಲ್ಲಿ ನೀಡಲಾಗುವ ಒಟ್ಟು ಕೊವಿಡ್ -19 ಲಸಿಕೆ ಪ್ರಮಾಣಗಳು 89 ಕೋಟಿ ದಾಟಿದೆ. ದೇಶದ ವಯಸ್ಕ ಜನಸಂಖ್ಯೆಯ 69 ಪ್ರತಿಶತದಷ್ಟು ಜನರು ಈಗ ಕನಿಷ್ಠ ಒಂದು ಡೋಸ್ ಕೊವಿಡ್ -19 ಲಸಿಕೆಯನ್ನು ಪಡೆದಿದ್ದಾರೆ

Coronavirus cases in India: ದೇಶದಲ್ಲಿ 26,727 ಹೊಸ ಕೊವಿಡ್ ಪ್ರಕರಣ ಪತ್ತೆ, 277 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 26,727 ಹೊಸ ಕೊವಿಡ್ -19 (Covid-19) ಪ್ರಕರಣಗಳನ್ನು ವರದಿ ಆಗಿದ್ದು ಇದು ನಿನ್ನೆಗಿಂತ ಶೇಕಡಾ 13 ರಷ್ಟು ಹೆಚ್ಚು. ಹೊಸ ಸೋಂಕುಗಳೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 3,37,66,707 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ಕನಿಷ್ಠ 277 ಸಾವುಗಳು ವರದಿಯಾಗಿದ್ದು, ಒಟ್ಟು ಸಾವುಗಳು 4,48,339 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 0.82 ಶೇಕಡಾವನ್ನು ಒಳಗೊಂಡಿವೆ. ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 2,75,224 ರಷ್ಟಿದೆ, ಇದು 196 ದಿನಗಳಲ್ಲಿ ಕಡಿಮೆ.  ರಾಷ್ಟ್ರೀಯ ಕೊವಿಡ್ -19 ಚೇತರಿಕೆಯ ಪ್ರಮಾಣವು ಶೇಕಡಾ 97.86 ರಷ್ಟು ದಾಖಲಾಗಿದೆ, ಇದು ಮಾರ್ಚ್ 2020 ರಿಂದ ಗರಿಷ್ಠವಾಗಿದೆ. ಕಳೆದ 24 ಗಂಟೆಗಳಲ್ಲಿ ಕನಿಷ್ಠ 28,246 ಮಂದಿ ಚೇತರಿಸಿದ್ದು ಭಾರತದಲ್ಲಿ ಒಟ್ಟು ಚೇತರಿಕೆಯ ಸಂಖ್ಯೆ 3,30,43,144 ಆಗಿದೆ.

ದೇಶದಲ್ಲಿ ನೀಡಲಾಗುವ ಒಟ್ಟು ಕೊವಿಡ್ -19 ಲಸಿಕೆ ಪ್ರಮಾಣಗಳು 89 ಕೋಟಿ ದಾಟಿದೆ. ದೇಶದ ವಯಸ್ಕ ಜನಸಂಖ್ಯೆಯ 69 ಪ್ರತಿಶತದಷ್ಟು ಜನರು ಈಗ ಕನಿಷ್ಠ ಒಂದು ಡೋಸ್ ಕೊವಿಡ್ -19 ಲಸಿಕೆಯನ್ನು ಪಡೆದಿದ್ದಾರೆ ಮತ್ತು 25 ಪ್ರತಿಶತದಷ್ಟು ಜನರು ಎರಡೂ ಡೋಸ್ ತೆಗೆದುಕೊಂಡಿದ್ದಾರೆ ಎಂದು ಸರ್ಕಾರ ಹೇಳಿದೆ.


ಭಾರತದ ಸಕ್ರಿಯ ಕೊವಿಡ್ -19 ಪ್ರಕರಣಗಳ ಪೈಕಿ ಶೇಕಡಾ 52ರಷ್ಟು ಕೇರಳದಲ್ಲಿದೆ
1.44 ಲಕ್ಷ ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಕೇರಳವು ಅತ್ಯಧಿಕ ಸಕ್ರಿಯ ಪ್ರಕರಣಗಳನ್ನು ಹೊಂದಿದ್ದು, ದೇಶದ ಒಟ್ಟು ಸಕ್ರಿಯ ಸಕ್ರಿಯ ಕೊವಿಡ್ -19 ಪ್ರಕರಣಗಳಲ್ಲಿ ಶೇಕಡಾ 52 ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಕೇರಳದಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಆದರೆ ಕೇರಳದಲ್ಲಿಯೇ ಅತೀ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದೆ ಎಂದು ಸರ್ಕಾರ ಹೇಳಿದೆ.

ಗುಜರಾತ್ ನಲ್ಲಿ 20 ಕೊವಿಡ್ -19 ಪ್ರಕರಣ, ಸಾವು ವರದಿ ಆಗಿಲ್ಲ
ಕಳೆದ 24 ಗಂಟೆಗಳಲ್ಲಿ ಗುಜರಾತ್ ನಲ್ಲಿ 20 ಹೊಸ ಕೊರೊನಾವೈರಸ್ ಪ್ರಕರಣಗಳನ್ನು ದಾಖಲಿಸಿದ್ದು, ಇದು 8,25,936 ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಗುರುವಾರ ಸಂಜೆ ಹೇಳಿದೆ. ಸಾಂಕ್ರಾಮಿಕ ರೋಗದಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಸಾವಿನ ಸಂಖ್ಯೆ 10,082 ನಲ್ಲಿ ಬದಲಾಗದೆ ಉಳಿದಿದೆ. ವೆಂಟಿಲೇಟರ್‌ನಲ್ಲಿರುವ ನಾಲ್ಕು ರೋಗಿಗಳು ಸೇರಿದಂತೆ ರಾಜ್ಯದಲ್ಲಿ 158 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ: ಕೊವಿಡ್​ 19 ಲಸಿಕೆ ಸರ್ಟಿಫಿಕೆಟ್​​ನ್ನು ನವೀಕರಿಸಿದ ಭಾರತ; ಯುಕೆ ತಕರಾರಿನ ಬೆನ್ನಲ್ಲೇ ಹೊಸ ಆವೃತ್ತಿ ಬಿಡುಗಡೆ