ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 30,570 ಹೊಸ ಕೊವಿಡ್ (Covid 19) ಪ್ರಕರಣಗಳು ದಾಖಲಾಗಿದ್ದು ಭಾರತದ ಒಟ್ಟಾರೆ ಸೋಂಕಿತರ ಸಂಖ್ಯೆ 3,33,47,325 ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,42,923 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಸಚಿವಾಲಯವು ನವೀಕರಿಸಿದ ಮಾಹಿತಿಯ ಪ್ರಕಾರ ಇದೇ ಅವಧಿಯಲ್ಲಿ 431 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 4,43,928 ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,42,923 ಕ್ಕೆ ಇಳಿದಿದೆ, ಇದು ಒಟ್ಟು ಸೋಂಕುಗಳ ಶೇಕಡಾ 1.03 ರಷ್ಟಿದೆ, ರಾಷ್ಟ್ರೀಯ ಕೊವಿಡ್ -19 ಚೇತರಿಕೆಯ ಪ್ರಮಾಣವು ಶೇಕಡಾ 97.64 ರಷ್ಟು ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
India reports 34,403 new #COVID19 cases and 37,950 recoveries in the last 24 hours, as per Union Health Ministry
Active cases: 3,39,056
Total recoveries: 3,25,98,42477.24 crore vaccine doses administered so far. pic.twitter.com/tws6zntYQ7
— ANI (@ANI) September 17, 2021
ವಿಶ್ವ ಆರೋಗ್ಯಸಂಸ್ಥೆ ಅನುದಾನಿತ ಆಗ್ನೇಯ ಏಷ್ಯಾದ ದೇಶಗಳಲ್ಲಿ 1 ಶತಕೋಟಿ ಕೊವಿಡ್ ಲಸಿಕೆ ಪ್ರಮಾಣವನ್ನು ನೀಡಲಾಗಿದೆ. ನಿನ್ನೆಯವರೆಗೆ ಭಾರತವು ಒಟ್ಟು 76,57,17,137 ಡೋಸ್‌ಗಳನ್ನು (ಮೊದಲ ಮತ್ತು ಎರಡನೆಯ ಡೋಸ್) ವಿತರಣೆ ಮಾಡಿದೆ ಎಂದು ವಿಶ್ವ ಆರೋಗ್ಯಸಂಸ್ಥೆ ಹೇಳಿದೆ.
Over 1 billion #COVID19 vaccine doses have been administered in WHO-affiliated South-East Asian countries. India has administered a total of 76,57,17,137 doses (first and second) as of yesterday: World Health Organization pic.twitter.com/xQ9I4CNxso
— ANI (@ANI) September 17, 2021
ಜಾರ್ಖಂಡ್‌ನಲ್ಲಿ 6 ರಿಂದ 8 ನೇ ತರಗತಿವರೆಗೆ ಶಾಲೆ ಶುರು
ಜಾರ್ಖಂಡ್‌ನಲ್ಲಿ ಕೊವಿಡ್ -19 ಪ್ರಕರಣಗಳ ನಿರಂತರ ಇಳಿಕೆಯೊಂದಿಗೆ, ರಾಜ್ಯ ಸರ್ಕಾರವು ಗುರುವಾರ ಸೆಪ್ಟೆಂಬರ್ 20 ರಿಂದ 6-8ನೇ ತರಗತಿಯವರೆಗೆ ಆಫ್‌ಲೈನ್ ತರಗತಿಗಳನ್ನು ನಡೆಸಲು ಶಾಲೆಗಳಿಗೆ ಅನುಮತಿ ನೀಡಿದೆ. ಎಲ್ಲಾ ಕೊವಿಡ್ -19 ಪ್ರೋಟೋಕಾಲ್‌ಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರವು ಶಾಲೆಗಳಿಗೆ ಪ್ರಮಾಣಿತ ಕಾರ್ಯಾಚರಣಾ ಪ್ರಕ್ರಿಯೆಗಳನ್ನು (ಎಸ್‌ಒಪಿ) ನೀಡಿದೆ.
ಜಾರ್ಖಂಡ್ ವಿಪತ್ತು ನಿರ್ವಹಣಾ ವಿಭಾಗವು ನೀಡಿರುವ ಸೂಚನೆಯ ಪ್ರಕಾರ, ಶಾಲೆಗಳು ಈಗ ರಾಜ್ಯದಲ್ಲಿ ಮಿಶ್ರಿತ ಶಿಕ್ಷಣ ಕ್ರಮವನ್ನು( ಅಂದರೆ ಆನ್‌ಲೈನ್ ಹಾಗೂ ಆಫ್‌ಲೈನ್ ತರಗತಿಗಳು) ನಿರ್ವಹಿಸುತ್ತವೆ.
ಇದನ್ನೂ ಓದಿ: ಅಕ್ಟೋಬರ್-ನವೆಂಬರ್ ಅತ್ಯಂತ ನಿರ್ಣಾಯಕ, ಕೊವಿಡ್ ಉಲ್ಬಣಕ್ಕೆ ಅವಕಾಶ ನೀಡಬಾರದು : ಕೇಂದ್ರ ಸರ್ಕಾರ
(India Records 30,570 COVID-19 Cases in last 24 hours count of active cases has dipped)