Coronavirus India Update: ಭಾರತದಲ್ಲಿ ಒಂದೇ ದಿನ 3,29,942 ಹೊಸ ಪ್ರಕರಣ ಪತ್ತೆ, ಕೊವಿಡ್ ರೋಗಿಗಳ ಸಂಖ್ಯೆ 2.29 ಕೋಟಿ

Covid 19: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,29,942 ಹೊಸ ಪ್ರಕರಣಗಳು ಪತ್ತೆಯಾಗಿದ್ದು 3,876 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

Coronavirus India Update: ಭಾರತದಲ್ಲಿ ಒಂದೇ ದಿನ 3,29,942 ಹೊಸ ಪ್ರಕರಣ ಪತ್ತೆ, ಕೊವಿಡ್ ರೋಗಿಗಳ  ಸಂಖ್ಯೆ 2.29 ಕೋಟಿ
ಕೊವಿಡ್ ರೋಗಿಯನ್ನು ಚಿಕಿತ್ಸೆಗಾ ಗಿ ಕರೆದೊಯ್ಯುತ್ತಿರುವುದು
Follow us
ರಶ್ಮಿ ಕಲ್ಲಕಟ್ಟ
|

Updated on:May 11, 2021 | 11:02 AM

ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,29,942 ಹೊಸ ಪ್ರಕರಣಗಳು ಪತ್ತೆಯಾಗಿದ್ದು 3,876 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಕಳೆದ ನಾಲ್ಕು ದಿನಗಳಲ್ಲಿ ಪ್ರತಿ ದಿನ 4 ಲಕ್ಷಕ್ಕಿಂತ ಹೆಚ್ಚು ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದವು. ಇದೀಗ 3,56,082 ಮಂದಿ ಚೇತರಿಸಿಕೊಂಡಿದ್ದು ಒಟ್ಟು ಸೋಂಕಿತರ ಸಂಖ್ಯೆ 2,29,92,517 (2.29 ಕೋಟಿ) ಆಗಿದೆ. ಈವರೆಗೆ 1,90,27,304 ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 37,15,221 ಆಗಿದ್ದು 2,49,992 ಮಂದಿ ಮೃತಪಟ್ಟಿದ್ದಾರೆ. ಲಸಿಕೆ ಪಡೆದವರ ಸಂಖ್ಯೆ 17,27,10,066 ಆಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕೇಂದ್ರ ಸರ್ಕಾರ 18 ಕೋಟಿಗಿಂತಲೂ ಹೆಚ್ಚು ಡೋಸ್ ಕೊವಿಡ್ ಲಸಿಕೆಗಳನ್ನು ಈವರೆಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡಿದೆ. 90ಲಕ್ಷಕ್ಕಿಂತೂ ಹೆಚ್ಚು ಡೋಸ್ ವಿತರಣೆಯಾಗದೆ ರಾಜ್ಯಗಳಲ್ಲಿ ಉಳಿದೆ. ಇನ್ನು ಮೂರು ದಿನಗಳಲ್ಲಿ7 ಲಕ್ಷಕ್ಕಿಂತಲೂ ಹೆಚ್ಚು ಡೋಸ್ ರಾಜ್ಯಗಳಿಗೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಪ್ರಕಾರ 2021 ಮೇ 10ರ ವರೆಗೆ 30,56,00,187 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇವುಗಳ ಪೈಕಿ 18,50,110 ಮಾದರಿಗಳನ್ನು ನಿನ್ನೆ ಪರೀಕ್ಷೆಗೊಳಪಡಿಸಲಾಗಿದೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 1,495 ಹೊಸ  ಪ್ರಕರಣಗಳು, 24 ಗಂಟೆಗಳಲ್ಲಿ 55 ಸಾವು

1,495  ಹೊಸ ಕೊರೊನಾವೈರಸ್ ಪ್ರಕರಣಗಳು ಸೇರ್ಪಡೆಯಾಗುವುದರೊಂದಿಗೆ, ಮುಂಬೈ ಬಳಿಯ ಥಾಣೆ ಜಿಲ್ಲೆಯಲ್ಲಿ  ಕೊವಿಡ್ ರೋಗಿಗಳ ಸಂಖ್ಯೆ  4,90,274 ಕ್ಕೆ ಏರಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  55 ರೋಗಿಗಳು ಸಾವಿಗೀಡಾಗಿದ್ದು, ಥಾಣೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 8,108 ಕ್ಕೆ ಏರಿದೆ.   ಸಾವಿನ ಪ್ರಮಾಣ ಈಗ 1.65 ರಷ್ಟಿದೆ ಎಂದು ಪಿಟಿಐ ವರದಿ ತಿಳಿಸಿದೆ

ಮುಂಬೈನ ಬಿಕೆಸಿ ಜಂಬೊ ಕೇಂದ್ರದಲ್ಲಿ ಲಸಿಕೆ

ಮುಂಬೈಯಲ್ಲಿ, ಜನರು ತಮ್ಮ COVID-19 ಲಸಿಕೆ ಡೋಸ್  ಪಡೆಯಲು BKC ಜಂಬೊ COVID-19 ವ್ಯಾಕ್ಸಿನೇಷನ್ ಕೇಂದ್ರಕ್ಕೆ ಬರಲು ಪ್ರಾರಂಭಿಸಿದ್ದಾರೆ   ಎಂದು ಎಎನ್ಐ  ವರದಿ ಮಾಡಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೆಬ್ ಸೈಟ್ ಮಾಹಿತಿ ಪ್ರಕಾರ ಆಂಧ್ರ ಪ್ರದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 189367 ಆಗಿದ್ದು ಸಾವಿನ ಸಂಖ್ಯೆ 8791ಕ್ಕೇರಿದೆ. ದೆಹಲಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 85258, ಸಾವಿನ ಸಂಖ್ಯೆ 19663, ಕೇರಳದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 420076, ಸಾವಿನ ಸಂಖ್ಯೆ 5879 ಆಗಿದೆ. ಮಹಾರಾಷ್ಟ್ರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 593150, ಸಾವಿನ ಸಂಖ್ಯೆ 76398, ತಮಿಳುನಾಡಿನಲ್ಲಿ 152389 ಸಕ್ರಿಯ ಪ್ರಕರಣಗಳಿದ್ದು 15880 ಮಂದಿ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: Sonu Sood: ಕೊರೊನಾ ಸೋಂಕಿತರ ನೆರವಿಗಾಗಿ ಮತ್ತೊಂದು ಸಾಹಸಕ್ಕೆ ಮುಂದಾದ ರಿಯಲ್​ ಹೀರೋ ಸೋನು ಸೂದ್​

(India Records 3,29,942 Fresh COVID19 Cases in last 24 hours Tally Over 2.29 Crore)

Published On - 10:44 am, Tue, 11 May 21