ದೇಶದಲ್ಲಿ ಇಂದು 38,079 ಜನರಲ್ಲಿ ಕೊರೊನಾ ಸೋಂಕು ದೃಢ; ಪಾಸಿಟಿವಿಟಿ ರೇಟ್ನಲ್ಲಿ ಇಳಿಕೆ
ದೇಶದಲ್ಲಿ ದಿನದ ಪಾಸಿಟಿವಿಟಿ ರೇಟ್ನಲ್ಲಿ ಇನ್ನಷ್ಟು ಇಳಿಕೆಯಾಗಿದ್ದು, ಸದ್ಯ 1.91ರಷ್ಟಿದೆ. ವಾರದ ಪಾಸಿಟಿವಿಟಿ ರೇಟ್ ಶೇ. 2.10ರಷ್ಟಿದೆ. ಇದುವರೆಗೂ ದೇಶದಲ್ಲಿ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 3,02,27,792ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 38,079 ಕೊರೊನಾ ವೈರಸ್ (Coronavirus) ಹೊಸ ಪ್ರಕರಣಗಳು ದಾಖಲಾಗಿದ್ದು, 560 ಮಂದಿ ಸಾವನ್ನಪ್ಪಿದ್ದಾರೆ. ಹಾಗೇ 24 ಗಂಟೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,397ರಷ್ಟು ಕಡಿಮೆಯಾಗಿದೆ. ದೇಶದಲ್ಲೀಗ ಕೊರೊನಾ ಸೋಂಕಿತರ ಸಂಖ್ಯೆ 3,10,64,908 ಏರಿಕೆಯಾಗಿದ್ದು, ಮೃತಪಟ್ಟವರ ಸಂಖ್ಯೆ 4,13,091ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಒಟ್ಟಾರೆ ಸೋಂಕಿತರ ಸಂಖ್ಯೆಯ 1.36ರಷ್ಟು ಮಾತ್ರ ಅಂದರೆ, ಒಟ್ಟು 3,10,64,908 ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಸಕ್ರಿಯ ಪ್ರಕರಣಗಳು 4,24,025 ಗಳಿಷ್ಟಿದ್ದು, ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.97.31ರಷ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇನ್ನು ಇದುವರೆಗೆ ಒಟ್ಟು 44,20,21,954 ಜನರಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ಶುಕ್ರವಾರ ಒಂದೇ ದಿನ 19,98,715 ಜನರಿಗೆ ತಪಾಸಣೆ ಮಾಡಲಾಗಿದೆ.
ದೇಶದಲ್ಲಿ ದಿನದ ಪಾಸಿಟಿವಿಟಿ ರೇಟ್ನಲ್ಲಿ ಇನ್ನಷ್ಟು ಇಳಿಕೆಯಾಗಿದ್ದು, ಸದ್ಯ 1.91ರಷ್ಟಿದೆ. ವಾರದ ಪಾಸಿಟಿವಿಟಿ ರೇಟ್ ಶೇ. 2.10ರಷ್ಟಿದೆ. ಇದುವರೆಗೂ ದೇಶದಲ್ಲಿ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 3,02,27,792ಕ್ಕೆ ಏರಿಕೆಯಾಗಿದ್ದು, ಸಾವಿನ ಪ್ರಮಾಣವೂ ಸಹ ಶೇ.1.33ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ. ಉಳಿದಂತೆ ಇಲ್ಲಿಯವರೆಗೆ 39.96 ಕೋಟಿ ಜನರಿಗೆ ಲಸಿಕೆ ಕೊಟ್ಟು ಪೂರ್ಣವಾಗಿದ್ದು, ಜುಲೈ ಅಂತ್ಯದೊಳಗೆ 50 ಕೋಟಿ ಜನರಿಗೆ ಕೊವಿಡ್ 19 ಲಸಿಕೆ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಇದನ್ನೂ ಓದಿ: ದರ್ಶನ್ ಗಲಾಟೆ: ಸಂದೇಶ್ ಹೋಟೆಲ್ನ ಸೆಕ್ಯುರಿಟಿ ಗಾರ್ಡ್ ತೆರೆದಿಟ್ಟರು ಸ್ಫೋಟಕ ವಿಚಾರ!
ndia records 38,079 fresh COVID 19 cases In 24 hours
Published On - 11:36 am, Sat, 17 July 21