Coronavirus cases in India: ಭಾರತದಲ್ಲಿ 38,164 ಹೊಸ ಕೊವಿಡ್ ಪ್ರಕರಣ ಪತ್ತೆ, 499 ಸಾವು

| Updated By: ರಶ್ಮಿ ಕಲ್ಲಕಟ್ಟ

Updated on: Jul 19, 2021 | 10:36 AM

Covid 19: ಸಕ್ರಿಯ ಪ್ರಕರಣಗಳು ಭಾನುವಾರದ ಅಂಕಿ ಅಂಶಗಳಿಂದ 995 ರಷ್ಟು ಕುಸಿದಿದ್ದು ಒಟ್ಟು ಪ್ರಕರಣದ ಶೇಕಡಾ 1.36 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಭಾನುವಾರದ ಅಂಕಿಅಂಶಗಳ ನಂತರ, ಸಕ್ರಿಯ ಪ್ರಕರಣಗಳ ಸಂಖ್ಯೆ 422,660 ರಷ್ಟಿದೆ.

Coronavirus cases in India: ಭಾರತದಲ್ಲಿ 38,164 ಹೊಸ ಕೊವಿಡ್ ಪ್ರಕರಣ ಪತ್ತೆ, 499 ಸಾವು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 38,164 ಹೊಸ ಕೊವಿಡ್ -19 ಪ್ರಕರಣಗಳನ್ನು ದಾಖಲಾಗಿ ದ್ದು ಒಟ್ಟು ಮೊತ್ತ 3.11 ಕೋಟಿಗೆ ತಲುಪಿದೆ. ಈ ಪೈಕಿ ಸಕ್ರಿಯ ಪ್ರಕರಣಗಳು 4.21 ಲಕ್ಷಕ್ಕೆ ಇಳಿದಿದ್ದರೆ, ಚೇತರಿಸಿಕೊಂಡವರ ಸಂಖ್ಯೆ 3.03 ಕೋಟಿಗೆ ತಲುಪಿದೆ. 499 ಹೊಸ ಸಾವು ಪ್ರಕರಣಗಳೊಂದಿಗೆ, ಸಾವಿನ ಸಂಖ್ಯೆ ಈಗ 4.14 ಲಕ್ಷ ಮೀರಿದೆ. ಏಪ್ರಿಲ್ 6 ರ ನಂತರ ಮೊದಲ ಬಾರಿಗೆ ದೈನಂದಿನ ಸಾವಿನ ಸಂಖ್ಯೆ 500 ಕ್ಕಿಂತ ಕಡಿಮೆಯಾಗಿದೆ.

4 ತಿಂಗಳುಗಳಲ್ಲಿ ಮೊದಲ ಬಾರಿಗೆ, ರಾಷ್ಟ್ರ ರಾಜಧಾನಿ ಭಾನುವಾರ ಒಂದೇ ಒಂದು ಸಾವಿನ ವರದಿಯನ್ನು ವರದಿ ಮಾಡಿಲ್ಲ. ದೆಹಲಿಯ ಸಕಾರಾತ್ಮಕ ದರವು ಶೇಕಡಾ 0.07 ಕ್ಕೆ ಇಳಿದಿದೆ. ಎರಡನೇ ಅಲೆಯ ಉತ್ತುಂಗದಲ್ಲಿದ್ದ ನಗರವು ಒಂದೇ ದಿನದಲ್ಲಿ (ಮೇ 3) 448 ಸಾವುಗಳನ್ನು ಕಂಡಿದೆ, ಕಳೆದ ಒಂದು ತಿಂಗಳಿನಿಂದ ಪ್ರಕರಣಗಳು ಮತ್ತು ಸಾವುಗಳಲ್ಲಿ ತೀವ್ರ ಕುಸಿತ ಕಂಡುಬಂದಿದೆ.

ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ನಗರದಲ್ಲಿ ವಾರ್ಷಿಕ ಕನ್ವರ್ ಯಾತ್ರೆಯನ್ನು “ಆಚರಣೆಗಳು, ಮೆರವಣಿಗೆಗಳು, ಕೂಟಗಳು” ನಿಷೇಧಿಸುವ ಮೂಲಕ ನಿಷೇಧಿಸಿದೆ. ಉತ್ತರಪ್ರದೇಶದಲ್ಲಿ ಯಾತ್ರೆ ರದ್ದುಗೊಂಡ ಬೆನ್ನಲ್ಲೇ ಈ ನಿರ್ದೇಶನ ಬಂದಿದೆ.


ಕೇರಳದಲ್ಲಿ 1.25 ಲಕ್ಷ ಸಕ್ರಿಯ ಪ್ರಕರಣಗಳಿರುವಾಗ ಜುಲೈ 21 ರಂದು ಬರುವ ಬಕ್ರೀದ್ ಗೆ ಮೂರು ದಿನಗಳವರೆಗೆ ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದುಹಾಕಲು ಪಿಣರಾಯಿ ವಿಜಯನ್ ಸರ್ಕಾರ ನಿರ್ಧರಿಸಿದೆ. ಆದರೆ ಭಾರತೀಯ ವೈದ್ಯಕೀಯ ಸಂಘವು ಸರ್ಕಾರದ ನಿರ್ಧಾರವನ್ನು ” ವೈದ್ಯಕೀಯ ತುರ್ತುಸ್ಥಿತಿ ಸಮಯದಲ್ಲಿ ಅನಗತ್ಯ ಮತ್ತು ಸೂಕ್ತವಲ್ಲ” ಎಂದು ಟೀಕಿಸಿದೆ. ಇಂದು ಪ್ರಾರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ, ಕೊವಿಡ್ -19 ರ ಮಾರಕ ಎರಡನೇ ಅಲೆ ನಿಭಾಯಿಸುವ ಬಗ್ಗೆ ವಿರೋಧ ಪಕ್ಷವು ಕೇಂದ್ರ ಸರ್ಕಾರವನ್ನು ಮೂಲೆಗುಂಪು ಮಾಡಲು ಸಜ್ಜಾಗಿದೆ.

ಸಕ್ರಿಯ ಪ್ರಕರಣಗಳು ಭಾನುವಾರದ ಅಂಕಿ ಅಂಶಗಳಿಂದ 995 ರಷ್ಟು ಕುಸಿದಿದ್ದು ಒಟ್ಟು ಪ್ರಕರಣದ ಶೇಕಡಾ 1.36 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಭಾನುವಾರದ ಅಂಕಿಅಂಶಗಳ ನಂತರ, ಸಕ್ರಿಯ ಪ್ರಕರಣಗಳ ಸಂಖ್ಯೆ 422,660 ರಷ್ಟಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ 1,463,593 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ದೇಶದಲ್ಲಿ ಒಟ್ಟು 445,422,256 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ಟ್ವೀಟ್ ಮಾಡಿದೆ.


ಒಂದು ದಿನಕ್ಕಿಂತ ಹೆಚ್ಚು ಉಳಿದಿಲ್ಲ  ದೆಹಲಿ ಕೊವಿಡ್ ಲಸಿಕೆ ದಾಸ್ತಾನು 
ದೆಹಲಿ ನಗರ  ಹೊರಡಿಸಿದ ವ್ಯಾಕ್ಸಿನೇಷನ್ ಬುಲೆಟಿನ್ ಪ್ರಕಾರ ದೆಹಲಿಯಲ್ಲಿ ಭಾನುವಾರ ಬೆಳಿಗ್ಗೆ ಒಂದು ದಿನಕ್ಕಿಂತ ಕಡಿಮೆ ಪ್ರಮಾಣದ ಕೊರೊನಾವೈರಸ್ ಲಸಿಕೆ ಪ್ರಮಾಣ ಉಳಿದಿದೆ. ರಾಷ್ಟ್ರ ರಾಜಧಾನಿ ಶನಿವಾರ 60,000 ಡೋಸ್ ಕೊವಿಶೀಲ್ಡ್ ಅನ್ನು ಪಡೆದುಕೊಂಡಿದ್ದು, ಒಟ್ಟು ಡೋಸ್‌ಗಳ ಸಂಖ್ಯೆಯನ್ನು 72,240 ಕ್ಕೆ ತಲುಪಿದೆ ಎಂದು ಬುಲೆಟಿನ್ ತಿಳಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರುವ ಕೊವಾಕ್ಸಿನ್ ಡೋಸ್ ಸಂಖ್ಯೆ 2,05,630.  ಕೋವಿನ್ ಪೋರ್ಟಲ್‌ ಮಾಹಿತಿಯ ಪ್ರಕಾರ, 22,15,357 ಸೆಕೆಂಡ್ ಡೋಸ್‌ಗಳನ್ನು ಒಳಗೊಂಡಂತೆ 93,55,271 ಲಸಿಕೆ ಡೋಸ್ ಅನ್ನು ರಾಷ್ಟ್ರ ರಾಜಧಾನಿಯಲ್ಲಿ ಇಲ್ಲಿಯವರೆಗೆ ನೀಡಲಾಗಿದೆ.

ಇದನ್ನೂ ಓದಿ: ಬಕ್ರೀದ್​ಗಾಗಿ ಕೊವಿಡ್-19 ನಿಯಮಗಳನ್ನು ಸಡಲಿಸಿದ ಕೇರಳ ಸರ್ಕಾರದ ನಿರ್ಧಾರ ಆಘಾತಕರವೆಂದ ಐಎಮ್ಎ