ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ದಾಖಲಾದ ಕೊವಿಡ್ -19 ಪ್ರಕರಣಗಳ ಸಂಖ್ಯೆ 2.59 ಲಕ್ಷಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಹೇಳಿವೆ. ಇದರೊಂದಿಗೆ ದೇಶದಲ್ಲಿರುವ ಒಟ್ಟು ಪ್ರಕರಣಗಳ ಸಂಖ್ಯೆ 26,031,991 ಕ್ಕೆ ತಲುಪಿದೆ. ಬೆಳಿಗ್ಗೆ 8 ಗಂಟೆವರೆಗಿನ ಮಾಹಿತಿ ಪ್ರಕಾರ ದೇಶದಲ್ಲಿ ಕೊವಿಡ್ನಿಂದ ಸಾವಿಗೀಡಾದವರ ಸಂಖ್ಯೆ 4,209ಕ್ಕೇರಿದೆ. ಒಟ್ಟು ಸಾವಿನ ಸಂಖ್ಯೆಯನ್ನು 291331ಕ್ಕೆ ತಲುಪಿದೆ.ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,01,953 ರ ಮತ್ತೊಂದು ಕುಸಿತವನ್ನು ಕಂಡಿದ್ದು 30,27,925 ಕ್ಕೆ ಇಳಿದಿದೆ.
India reports 2,59,591 new #COVID19 cases, 3,57,295 discharges & 4,209 deaths in last 24 hrs, as per Health Ministry.
Total cases: 2,60,31,991
Total discharges: 2,27,12,735
Death toll: 2,91,331
Active cases: 30,27,925Total vaccination: 19,18,79,503 pic.twitter.com/ehndKtsQ7n
— ANI (@ANI) May 21, 2021
ಮೇ 20ರವರೆಗೆ 32,44,17,870 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳ (ಐಸಿಎಂಆರ್) ಹೇಳಿದೆ.
32,44,17,870 samples tested for #COVID19 up to 20th May 2021. Of these, 20,61,683 samples were tested yesterday: Indian Council of Medical Research (ICMR) pic.twitter.com/ZpnHIpriAG
— ANI (@ANI) May 21, 2021
ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ಗುಜರಾತ್, ಛತ್ತೀಸಗಡ, ಬಿಹಾರ, ಮಧ್ಯಪ್ರದೇಶ, ದೆಹಲಿ ಮತ್ತು ಜಾರ್ಖಂಡ್ ಈ ಹತ್ತು ರಾಜ್ಯಗಳಲ್ಲಿ, ಕಳೆದ 3 ವಾರಗಳಲ್ಲಿ ಪ್ರಕರಣಗಳ ಕುಸಿತ ಮತ್ತು ಸಕಾರಾತ್ಮಕತೆಯ ಕುಸಿತ ಕಂಡುಬಂದಿದೆ
ತಮಿಳುನಾಡು, ಮೇಘಾಲಯ ತ್ರಿಪುರ, ಮಣಿಪುರ, ನಾಗಾಲ್ಯಾಂಡ್, ಸಿಕ್ಕಿಂ, ಮಿಜೋರಾಂ ರಾಜ್ಯಗಳು ಕಳೆದ ಮೂರು ವಾರಗಳಲ್ಲಿ ಪ್ರಕರಣಗಳ ಹೆಚ್ಚಳ ಮತ್ತು ಸಕಾರಾತ್ಮಕತೆಯ ಹೆಚ್ಚಳವನ್ನು ತೋರಿಸುತ್ತಿವೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ 34,281 ಹೊಸ ಪ್ರಕರಣ
ಕರ್ನಾಟಕದಲ್ಲಿ ಹೊಸದಾಗಿ 34,281 ಕೊವಿಡ್ ಪ್ರಕರಣಗಳನ್ನು ವರದಿ ಮಾಡಿದೆ,ಬೆಂಗಳೂರು ನಗರದಿಂದ ಮಾತ್ರ 11,772 ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಬುಧವಾರ 49,953 ಚೇತರಿಕೆ, 34,281 ಹೊಸ ಪ್ರಕರಣಗಳು ಮತ್ತು 468 ಸಾವು ಪ್ರಕರಣ ವರದಿ ಮಾಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಒಟ್ಟು ಸೋಂಕುಗಳ ಸಂಖ್ಯೆ 23,06,655 ಆಗಿದ್ದು ಸಾವಿನ 23,306 ಆಗಿದೆ. ಬೆಂಗಳೂರು ನಗರದಲ್ಲಿ ಬುಧವಾರ 11,772 ಹೊಸ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿ 29,238 ಚೇತರಿಕೆ ಪ್ರಕರಣ ಕಂಡಿದೆ. ಕೊವಿಡ್ ನಿಂದ ಕರ್ನಾಟಕದಲ್ಲಿ 548 ಸಾವುಗಳು ಗುರುವಾರ ವರದಿ ಆಗಿದೆ. ಇದರಲ್ಲಿ 326 ಮಂದಿ ಬೆಂಗಳೂರಿನಿಂದ (ನಗರ ಮತ್ತು ಗ್ರಾಮೀಣ) ವರದಿ ಆಗಿದೆ.
ರಾಜ್ಯಗಳಲ್ಲಿ ಕೊವಿಡ್ ಪ್ರಕರಣ
ಮಹಾರಾಷ್ಟ್ರದಲ್ಲಿ 29,911 ಕೊವಿಡ್ ಪ್ರಕರಣಗಳನ್ನು ವರದಿ ಆಗಿದ್ದು 738 ಸಾವುಗಳು ಸಂಭವಿಸಿವೆ 47,371 ಮಂದಿ ಚೇತರಿಸಿಕೊಂಡಿದ್ದಾರೆ. ಮುಂಬೈನಲ್ಲಿ 1,425 ಹೊಸ ಪ್ರಕರಣಗಳು ಪತ್ತೆ ಆಗಿದ್ದು 59 ಸಾವುಗಳು 1,460 ಚೇತರಿಕೆ ಪ್ರಕರಣ ವರದಿ ಆಗಿದೆ.
ದೆಹಲಿಯಲ್ಲಿ 3231 ಹೊಸ ಕೊವಿಡ್ ಪ್ರಕರಣಗಳು, 7831 ಚೇತರಿಕ ಮತ್ತು 233 ಸಾವುಗಳು ವರದಿಯಾಗಿವೆ
ಉತ್ತರ ಪ್ರದೇಶವು ಕಳೆದ 24 ಗಂಟೆಗಳಲ್ಲಿ 6725 ಹೊಸ ಕೊವಿಡ್ ಪ್ರಕರಣಗಳು, 13,590 ಚೇತರಿಕೆ ಮತ್ತು 238 ಸಾವುಗಳನ್ನು ವರದಿ ಮಾಡಿದೆ.
ಮಧ್ಯಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 4952 ಹೊಸ ಕೊವಿಡ್ ಪ್ರಕರಣಗಳು, 9746 ಚೇತರಿಕೆಮತ್ತು 88 ಸಾವುಗಳನ್ನು ವರದಿ ಮಾಡಿದೆ. ಗುಜರಾತ್ ನಲ್ಲಿ 4,773 ಹೊಸ ಕೊವಿಡ್ ಪ್ರಕರಣಗಳನ್ನು ವರದಿ ಆಗಿದ್ದು 64 ಮಂದಿ ಸಾವಿಗೀಡಾಗಿದ್ದಾರೆ 8,308 ಚೇತರಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 162 ಕೊವಿಡ್ ಸಾವುಗಳು ಮತ್ತು 19,091 ಹೊಸ ಪ್ರಕರಣಗಳು ವರದಿ ಆಗಿವೆ.
ಮೇಘಾಲಯದಲ್ಲಿ 1,183 ಹೊಸ ಕೊವಿಡ್ ಪ್ರಕರಣಗಳಲ್ಲಿ ಅತಿ ಹೆಚ್ಚು ಏಕದಿನ ಏರಿಕೆ ದಾಖಲಿಸಿದ್ದು 10 ಸಾವುಗಳು ವರದಿ ಆಗಿದೆ. ಆಂಧ್ರಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 22,610 ಹೊಸ ಕೊವಿಡ್ ಪ್ರಕರಣಗಳು, 23,098 ಚೇತರಿಕೆ ಮತ್ತು 114 ಸಾವುಗಳನ್ನು ವರದಿ ಮಾಡಿದೆ.
ಕೇರಳದಲ್ಲಿ 30,491 ಹೊಸ ಕೊವಿಡ್ ಪ್ರಕರಣಗಳು, 44,369 ಚೇತರಿಕೆ ಮತ್ತು 128 ಸಾವುಗಳು ವರದಿಯಾಗಿವೆ. ಕರ್ನಾಟಕವು ಕಳೆದ 24 ಗಂಟೆಗಳಲ್ಲಿ 28,869 ಹೊಸ ಕೊವಿಡ್ ಪ್ರಕರಣಗಳು, 52,257 ಚೇತರಿಕೆಮತ್ತು 548 ಸಾವುಗಳನ್ನು ವರದಿ ಮಾಡಿದೆ.
Published On - 10:51 am, Fri, 21 May 21