
ದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 32,937 ಹೊಸ ಕೊವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು 417 ಮಂದಿ ಸಾವಿಗೀಡಾಗಿದ್ದಾರೆ. ಹೊಸ ಪ್ರಕರಣಗಳ ಪೈಕಿ ಕೇರಳದಲ್ಲಿ 18,582 ಹೊಸ ಪ್ರಕರಣಗಳು ಪತ್ತೆಯಾಗಿದ್ದು 102 ಸಾವುಗಳು ವರದಿಯಾಗಿವೆ. ಅದೇ ವೇಳೆ ಮಹಾರಾಷ್ಟ್ರದಲ್ಲಿ 4,797 ಹೊಸ ಸೋಂಕುಗಳು ಪತ್ತೆಯಾಗಿದ್ದು 130 ಸಾವುಗಳು ವರದಿಯಾಗಿವೆ. ದೇಶದಲ್ಲಿ ಸಕ್ರಿಯ ಪ್ರಕರಣಗಳು 3.81 ಲಕ್ಷಕ್ಕೆ ಇಳಿದಿವೆ.
ಏತನ್ಮಧ್ಯೆ, ಕೊವಿಡ್ -19 ಪ್ರಕರಣಗಳಲ್ಲಿ ಸ್ಥಿರವಾದ ಇಳಿಕೆಯೊಂದಿಗೆ, ಮುಂಬೈ ಈಗ ಶೂನ್ಯ ಕಂಟೈನ್‌ಮೆಂಟ್ ವಲಯಗಳನ್ನು ಹೊಂದಿದೆ. ಅಂಧೇರಿ ಪೂರ್ವ, ಮರೋಲ್, ಸಕಿನಾಕ ಮುಂತಾದ ಕೆ-ಪೂರ್ವ ವಾರ್ಡ್ ವ್ಯಾಪ್ತಿಯಲ್ಲಿರುವ ಕೊನೆಯ ಎರಡು ಕೊಳಚೆ ಪ್ರದೇಶಗಳನ್ನು ಶುಕ್ರವಾರ ಕಂಟೈನ್ ಮೆಂಟ್ ಪ್ರದೇಶದಿಂದ ಹೊರತು ಪಡಿಸಲಾಗಿದೆ.
ದೈನಂದಿನ ಪ್ರಕರಣಗಳಲ್ಲಿ ತೀವ್ರ ಕುಸಿತದೊಂದಿಗೆ ನಾಗರಿಕ ಅಧಿಕಾರಿಗಳು ನಗರದಲ್ಲಿ ಕಂಟೈನ್‌ಮೆಂಟ್ ವಲಯಗಳು ಮತ್ತು ಸೀಲ್ ಮಾಡಿದ ಮಹಡಿಗಳು ಮತ್ತು ಕಟ್ಟಡಗಳ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಹೇಳಿದರು. ಏಪ್ರಿಲ್ 17 ರಂದು, ನಗರವು ಸಾಂಕ್ರಾಮಿಕದ ಎರಡನೇ ತರಂಗವನ್ನು ಎದುರಿಸುತ್ತಿರುವಾಗ ಮುಂಬೈನಲ್ಲಿ 100 ಕಂಟೈನ್‌ಮೆಂಟ್ ವಲಯಗಳು ಮತ್ತು 1,188 ಸೀಲ್ ಮಾಡಿದ ಕಟ್ಟಡಗಳು ಇದ್ದವು.
ಏತನ್ಮಧ್ಯೆ ಕಳೆದ ವಾರದಲ್ಲಿ ದೆಹಲಿಯಲ್ಲಿ ಕೊವಿಡ್ ಸಾವುಗಳು ಗಣನೀಯವಾಗಿ ಕಡಿಮೆಯಾಗಿವೆ. ಕಳೆದ ವಾರದಲ್ಲಿ ಕೇವಲ ಮೂರು ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ದೆಹಲಿ ಸರ್ಕಾರ ಹೇಳಿದೆ. ಅದರ ಹಿಂದಿನ ವಾರದಲ್ಲಿ 12 ಜನರು ಕೊವಿಡ್ನಿಂದ ಸಾವಿಗೀಡಾಗಿದ್ದಾರೆ.
COVID19 | India reports 32,937 fresh cases, 417 deaths and 35,909 recoveries in the last 24 hours; active cases 3,81,947 pic.twitter.com/AGysBrq6HI
— ANI (@ANI) August 16, 2021
ನಗರದ ಆರೋಗ್ಯ ಬುಲೆಟಿನ್ ಪ್ರಕಾರ ನಗರದಲ್ಲಿ ಕೋವಿಡ್ ಪ್ರಕರಣಗಳು ಕಳೆದ ಒಂದು ತಿಂಗಳಿಂದ ನಗರದಲ್ಲಿ ಪ್ರಸ್ಥಭೂಮಿಯಾಗಿದ್ದು, ದಿನನಿತ್ಯದ ಪ್ರಕರಣಗಳ ಸಂಖ್ಯೆ ದಿನಕ್ಕೆ 50-60 ರಷ್ಟಿದೆ. ದೆಹಲಿಯಲ್ಲಿ 513 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 169 ಜನರು ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ. ಹಿಂದಿನ ದಿನ 45,971 ಆರ್‌ಟಿ-ಪಿಸಿಆರ್ ಪರೀಕ್ಷೆಗಳು ಸೇರಿದಂತೆ 65,007 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಬುಲೆಟಿನ್ ಹೇಳಿದೆ.
ಇದನ್ನೂ ಓದಿ: Viral Video: ಕೊವಿಡ್ ಲಸಿಕೆ ಪಡೆಯಲು ವ್ಯಕ್ತಿಯ ಸಕತ್ ಪ್ಲಾನ್! ವಿಡಿಯೋ ನೋಡಿದ್ರೆ ನೀವೂ ನಗ್ತೀರಾ
ಇದನ್ನೂ ಓದಿ: Corona 3rd Wave: ಕೊರೊನಾ 3ನೇ ಅಲೆಯ ಆತಂಕ, ಆಗಸ್ಟ್ 18ರಿಂದ ಬೆಂಗಳೂರಿನಲ್ಲಿ ಹೊಸ ರೂಲ್ಸ್ ಸಾಧ್ಯತೆ
(India reports 32,937 new Covid19 cases 417 deaths as per Union Health Ministry)