Coronavirus cases in India: ದೇಶದಲ್ಲಿ ಒಂದೇ ದಿನ 3.33 ಲಕ್ಷ ಹೊಸ ಕೊವಿಡ್ ಪ್ರಕರಣ, ಚೇತರಿಕೆ ಪ್ರಮಾಣ ಶೇ 93.18

| Updated By: ರಶ್ಮಿ ಕಲ್ಲಕಟ್ಟ

Updated on: Jan 23, 2022 | 10:54 AM

Covid 19: ದೈನಂದಿನ ಸಕ್ರಿಯ ಪ್ರಕರಣಗಳು 73,840 ರಷ್ಟು ಏರಿಕೆಯಾಗಿದ್ದು, ಒಟ್ಟು ಸೋಂಕುಗಳ ಶೇಕಡಾ 5.57 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 2,59,168 ಮಂದಿ ಗುಣಮುಖರಾಗಿದ್ದಾರೆ.

Coronavirus cases in India: ದೇಶದಲ್ಲಿ ಒಂದೇ ದಿನ 3.33 ಲಕ್ಷ ಹೊಸ ಕೊವಿಡ್ ಪ್ರಕರಣ, ಚೇತರಿಕೆ ಪ್ರಮಾಣ ಶೇ 93.18
ಕೊವಿಡ್ -19
Follow us on

ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,33,533 ಹೊಸ ಕೊವಿಡ್-19 (Covid-19) ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 21,87,205 ಕ್ಕೆ ತಲುಪಿದೆ. ದೈನಂದಿನ ಧನಾತ್ಮಕತೆಯ ದರ ಮತ್ತು ಸಾಪ್ತಾಹಿಕ ಧನಾತ್ಮಕತೆಯ ದರವು ಕ್ರಮವಾಗಿ ಶೇ 17.78 ಮತ್ತು ಶೇ 16.87 ಆಗಿದ್ದು ಚೇತರಿಕೆ ದರವು ಶೇ 93.18ರಷ್ಟಿದೆ. ದೈನಂದಿನ ಪ್ರಕರಣಗಳ ಸಂಖ್ಯೆ ಶನಿವಾರದ 3.37 ಲಕ್ಷ ಪ್ರಕರಣಗಳಿಗಿಂತ ಕಡಿಮೆಯಾಗಿದೆ. ಆದಾಗ್ಯೂ, ದೈನಂದಿನ ಮತ್ತು ಸಾಪ್ತಾಹಿಕ ಧನಾತ್ಮಕ ದರಗಳು ಏರಿದೆ. ದೈನಂದಿನ ಸಕ್ರಿಯ ಪ್ರಕರಣಗಳು 73,840 ರಷ್ಟು ಏರಿಕೆಯಾಗಿದ್ದು, ಒಟ್ಟು ಸೋಂಕುಗಳ ಶೇಕಡಾ 5.57 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 2,59,168 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ. ಅಮೆರಿಕ ನಂತರ ಭಾರತವು ಕೊರೊನಾವೈರಸ್ (Coronavirus) ಸಾಂಕ್ರಾಮಿಕ ರೋಗದಿಂದ ವಿಶ್ವದ ಎರಡನೇ ಅತಿ ಹೆಚ್ಚು ಹಾನಿಗೊಳಗಾದ ದೇಶವಾಗಿದೆ. ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ 1.6 ಶತಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಇದು 5,42,321 ಬೂಸ್ಟರ್ ಅಥವಾ ‘ಮುಂಜಾಗ್ರತಾ’ ಡೋಸ್‌ಗಳನ್ನು ಒಳಗೊಂಡಂತೆ ಕಳೆದ 24 ಗಂಟೆಗಳಲ್ಲಿ ನಿರ್ವಹಿಸಲಾದ 71,10,445 ಲಸಿಕೆ ಡೋಸ್‌ಗಳನ್ನು ಸೇರಿರುವ ಲೆಕ್ಕವಾಗಿದೆ.

ಹೆಚ್ಚು ಹಾನಿಗೊಳಗಾದ ನಗರಗಳಲ್ಲಿ ದೆಹಲಿಯು ಶನಿವಾರದಂದು 11,486 ಹೊಸ ಸೋಂಕುಗಳೊಂದಿಗೆ ಕನಿಷ್ಠ ಏರಿಕೆ ಕಂಡಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 45 ಸಾವುಗಳು ವರದಿಯಾಗಿವೆ. ಮತ್ತೊಂದೆಡೆ, ಮುಂಬೈ ಹೊಸ ಕೊವಿಡ್ -19 ಪ್ರಕರಣಗಳಲ್ಲಿ ಶೇಕಡಾ 28 ರಷ್ಟು ಕುಸಿತವನ್ನು ದಾಖಲಿಸಿದೆ ಏಕೆಂದರೆ ನಗರದಲ್ಲಿ ಶನಿವಾರ 3,568 ಸೋಂಕುಗಳು ವರದಿಯಾಗಿವೆ. ಇದು ಕೇವಲ ಎರಡು ವಾರಗಳ ಹಿಂದೆ ಮುಂಬೈನ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕಿಂತ 83 ರಷ್ಟು ಕುಸಿತವಾಗಿದೆ.

ಒಮಿಕ್ರಾನ್ ಉಲ್ಬಣದಿಂದ ಕಳೆದ 24 ಗಂಟೆಗಳಲ್ಲಿ 46,393 ಪ್ರಕರಣಗಳೊಂದಿಗೆ ಮಹಾರಾಷ್ಟ್ರವು   ಅಗ್ರ ಸ್ಥಾನದಲ್ಲಿದೆ. ಕೇರಳ 45,136 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ 42,470 ಪ್ರಕರಣಗಳೊಂದಿಗೆ ತಮಿಳುನಾಡು 30,744 ಮತ್ತು ಗುಜರಾತ್ 23,150 ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿದೆ.ಏತನ್ಮಧ್ಯೆ ದೆಹಲಿ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 10,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಕೊವಿಡ್ ರೋಗಿಗಳಿಗೆ ಶೇಕಡಾ 50 ರಷ್ಟು ಹಾಸಿಗೆಗಳನ್ನು ಮೀಸಲಿಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಹೇಳಿದ ಕೇರಳ ಸರ್ಕಾರ

ಕೇರಳದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ ಪ್ರಕರಣಗಳ ಮಧ್ಯೆ ಕೊವಿಡ್-19 ರೋಗಿಗಳಿಗೆ 50 ಶೇಕಡಾ ಹಾಸಿಗೆಗಳನ್ನು ಮೀಸಲಿಡುವಂತೆ ಆರೋಗ್ಯ ಇಲಾಖೆ ಶನಿವಾರ ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.
ಐಸಿಯುಗಳಲ್ಲಿ ದೈನಂದಿನ ದಾಖಲಾತಿಗಳು, ವೆಂಟಿಲೇಟರ್‌ಗಳು ಮತ್ತು ಹಾಸಿಗೆಗಳ ಬಳಕೆ ವಿವರಗಳನ್ನು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸುವಂತೆ ಇಲಾಖೆಯು ಖಾಸಗಿ ಆಸ್ಪತ್ರೆಗಳಿಗೆ ತಿಳಿಸಿದೆ.

“ಖಾಸಗಿ ಆಸ್ಪತ್ರೆಗಳು ಆಸ್ಪತ್ರೆಗಳಲ್ಲಿ ತಮ್ಮ ದೈನಂದಿನ ದಾಖಲಾತಿಗಳನ್ನು ಐಸಿಯುಗಳಲ್ಲಿ ಒಳಗೊಳ್ಳುವವರ ಸಂಖ್ಯೆ ಮತ್ತು ವೆಂಟಿಲೇಟರ್‌ಗಳ ಬಳಕೆಯನ್ನು ಸಂಬಂಧಪಟ್ಟ ಡಿಎಂಒಗಳಿಗೆ ಸಲ್ಲಿಸಬೇಕಾಗಿದೆ. ಡೇಟಾವನ್ನು ನೀಡಲು ನಿರಾಕರಿಸುವ ಆಸ್ಪತ್ರೆಗಳು ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ” ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಗುಜರಾತ್: ಕೊವಿಡ್  ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ 100 ಜನರ ವಿರುದ್ಧ ಕೇಸ್

ಶನಿವಾರ ಗುಜರಾತ್‌ನ ಆನಂದ್ ಜಿಲ್ಲೆಯ ಕಸೋರ್ ಗ್ರಾಮದಲ್ಲಿ ವಿಜಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಕೊವಿಡ್-19 ಮಾನದಂಡಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಉಪ ಸರಪಂಚ್ ಮತ್ತು ಅವರ ಬೆಂಬಲಿಗರು ಸೇರಿದಂತೆ 100 ಜನರ ಗುಂಪಿನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಸೋರ್ ಪಂಚಾಯತ್‌ನ ಉಪ ಸರಪಂಚ್ ಆಗಿ ಆಯ್ಕೆಯಾದ ನಂತರ ಬಲುಬೆನ್ ಪರ್ಮಾರ್ ಅವರನ್ನು ಬೆಂಬಲಿಸಲು ಸುಮಾರು 100 ಜನರು ಭಾಗವಹಿಸಿದ್ದ ರೋಡ್ ಶೋ ಅನ್ನು ನಡೆಸಲಾಯಿತು ಎಂದು ಸೋಜಿತ್ರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಲ್ಗೊಂಡವರಲ್ಲಿ  ಹೆಚ್ಚಿನವರು, ದಾರಿಯುದ್ದಕ್ಕೂ ಕುಣಿದಿದ್ದು  ಅನೇಕರು ಮಾಸ್ಕ್ ಧರಿಸಿರಲಿಲ್ಲ, ಸಾಮಾಜಿಕ ಅಂತರದ ಮಾನದಂಡಗಳನ್ನು ಸಹ ಉಲ್ಲಂಘಿಸಲಾಗಿದೆ ಎಂದು ಅವರು ಹೇಳಿದರು.

ಪರ್ಮಾರ್ ಮತ್ತು ಇತರರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 (ಸಾರ್ವಜನಿಕ ಸೇವಕರು ಸರಿಯಾಗಿ ಘೋಷಿಸಿದ ಆದೇಶಕ್ಕೆ ಅಸಹಕಾರ), 269 (ಕಾನೂನುಬಾಹಿರ, ನಿರ್ಲಕ್ಷ್ಯದ ಕೃತ್ಯ) ಭಾರತೀಯ ದಂಡ ಸಂಹಿತೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಇದನ್ನೂ ಓದಿ: ಕೊಪ್ಪಳ ಜಿಲ್ಲೆ ಆರೋಗ್ಯ ಇಲಾಖೆ ಎಡವಟ್ಟು; ಲಸಿಕೆ ಪಡೆಯದಿದ್ದರೂ 2ನೇ ಡೋಸ್ ಲಸಿಕೆ ಪಡೆದಿರುವುದಾಗಿ ಮೆಸೇಜ್

Published On - 10:29 am, Sun, 23 January 22