ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 48,786 ಹೊಸ ಕೊರೊನಾವೈರಸ್ ಪ್ರಕರಣಗಳನ್ನು ವರದಿ ಆಗಿದೆ .ದೇಶದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 30,411,634 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಇದೇ ಅವಧಿಯಲ್ಲಿ ಕೊವಿಜ್ ಕಾಯಿಲೆಯಿಂದಾಗಿ, 1,005 ಜನರು ಸಾವನ್ನಪ್ಪಿದರು, ಸಾವಿನ ಸಂಖ್ಯೆ 399,459 ಕ್ಕೆ ತಲುಪಿದೆ.
ಜೈಡಸ್ ಕ್ಯಾಡಿಲಾ ಕೊವಿಡ್ -19 ಲಸಿಕೆಯ ತುರ್ತು ಬಳಕೆಯ ಅನುಮೋದನೆಗಾಗಿ ದೇಶದ ಔಷಧ ನಿಯಂತ್ರಕಕ್ಕೆ ಅರ್ಜಿ ಸಲ್ಲಿಸಿದೆ ಮತ್ತು ವಾರ್ಷಿಕವಾಗಿ 120 ಮಿಲಿಯನ್ ಡೋಸ್ ಲಸಿಕೆ ತಯಾರಿಸಲು ಚಿಂತನೆ ನಡೆಸಿದೆ ಎಂದು ಹೇಳಿದೆ.
ಜೈಡಸ್ ಕ್ಯಾಡಿಲಾ ಕಂಪನಿಯ ಲಸಿಕೆ ZyCoV-D ಅನುಮೋದನೆಯು ಮಾಡರ್ನಾ, ಅಸ್ಟ್ರಾಜೆನೆಕಾ ಮತ್ತು ಪಾಲುದಾರ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್, ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಮತ್ತು ರಷ್ಯಾದ ಗಮಲೇಯ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ವಿ ನಂತರ ಭಾರತದಲ್ಲಿ ಬಳಕೆಗೆ ಅನುಮೋದನೆ ಪಡೆದ ಐದನೇ ಲಸಿಕೆಯಾಗಿದೆ.
India reports 48,786 new #COVID19 cases, 61,588 recoveries, and 1,005 deaths in the last 24 hours, as per the Union Health Ministry.
Total cases: 3,04,11,634
Total recoveries: 2,94,88,918
Active cases: 5,23,257
Death toll: 3,99,459Total Vaccination : 33,57,16,019 pic.twitter.com/o1FX1g1Xue
— ANI (@ANI) July 1, 2021
ಗುರುವಾರದ ಮಾಹಿತಿ ಪ್ರಕಾರ ಕೊವಿಡ್ -19 ನಿಂದ 61,588 ಮಂದಿ ಚೇತರಿಸಿಕೊಂಡಿದ್ದು ಒಟ್ಟು ಚೇತರಿಕೆ ಸಂಖ್ಯೆ 29,488, 918 ಕ್ಕೆ ತಲುಪಿದೆ. ಇದು ಒಟ್ಟು ಕೊವಿಡ್ ಪ್ರಕರಣದ ಶೇಕಡಾ 96.97 ರಷ್ಟಿದೆ. ಸಕ್ರಿಯ ಪ್ರಕರಣಗಳು ಶೇಕಡಾ 1.77 ರಷ್ಟು ಇಳಿಕೆಯಾಗಿದ್ದು, 5,23,257 ಕ್ಕೆ ತಲುಪಿದೆ.
ಬೆಳಿಗ್ಗೆ 7 ಗಂಟೆಗೆ ಪ್ರಕಟವಾದ ಮಾಹಿತಿಯ ಪ್ರಕಾರ, ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಒಟ್ಟು 33.57 ಕೋಟಿ ಲಸಿಕೆ ಪ್ರಮಾಣವನ್ನು ನೀಡಲಾಗಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳ ಶೇಕಡಾ 1.72 ರಷ್ಟನ್ನು ಒಳಗೊಂಡಂತೆ 5,23,257 ಕ್ಕೆ ಇಳಿದಿದ್ದು ರಾಷ್ಟ್ರೀಯ ಕೊವಿಡ್ -19 ಚೇತರಿಕೆ ಪ್ರಮಾಣವು ಶೇಕಡಾ 96.97 ಕ್ಕೆ ಏರಿದೆ.
ದೇಶದಲ್ಲಿ ಕೊವಿಡ್ ಪತ್ತೆಗಾಗಿ ಇಲ್ಲಿಯವರೆಗೆ ನಡೆಸಿದ ಒಟ್ಟು ಪರೀಕ್ಷೆಗಳನ್ನು 41,20,21,494. ಅದೇ ವೇಳೆ 9,21,450 ಪರೀಕ್ಷೆಗಳನ್ನು ಬುಧವಾರ ನಡೆಸಲಾಯಿತು.
ದೈನಂದಿನ ಸಕಾರಾತ್ಮಕ ದರವು ಶೇಕಡಾ 2.54 ರಷ್ಟಿದೆ. ಸತತ 24 ದಿನಗಳಿಂದ ಇದು ಐದು ಪ್ರತಿಶತಕ್ಕಿಂತ ಕಡಿಮೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ, ಸಾಪ್ತಾಹಿಕ ಸಕಾರಾತ್ಮಕ ದರವು ಶೇಕಡಾ 2.64 ಕ್ಕೆ ಇಳಿದಿದೆ.
ಭಾರತದ ಕೊವಿಡ್ -19 ಮೊತ್ತವು ಆಗಸ್ಟ್ 7 ರಂದು 20 ಲಕ್ಷ, ಆಗಸ್ಟ್ 23 ರಂದು ಮೂವತ್ತು ಲಕ್ಷ, ಸೆಪ್ಟೆಂಬರ್ 5 ರಂದು ನಲುವತ್ತು ಲಕ್ಷ ಮತ್ತು ಸೆಪ್ಟೆಂಬರ್ 16 ರಂದು ಐವತ್ತು ಲಕ್ಷ ದಾಟಿದೆ. ಇದು ಸೆಪ್ಟೆಂಬರ್ 28 ರಂದು ಅರುವತ್ತು ಲಕ್ಷ, ಅಕ್ಟೋಬರ್ 11 ರಂದು ಎಪ್ಪತ್ತು ಲಕ್ಷ, ಅಕ್ಟೋಬರ್ 29 ರಂದು ಎಂಭತ್ತು ಲಕ್ಷ, ನವೆಂಬರ್ 20 ರಂದು ತೊಂಬತ್ತು ಲಕ್ಷ ಮತ್ತು ಡಿಸೆಂಬರ್ 19 ರಂದು 1ಕೋಟಿ ಗಡಿ ದಾಟಿದೆ. ಭಾರತವು ಮೇ 4 ರಂದು 2 ಕೋಟಿ ಮತ್ತು ಜೂನ್ 23 ರಂದು 3 ಕೋಟಿ ಮೈಲಿಗಲ್ಲು ದಾಟಿತ್ತು.
(India reports 48,786 new Covid-19 cases 1,005 Covid-related deaths in the last 24 hours)