ಕೊವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ; ತರಕಾರಿ ಪ್ಯಾನ್ಕೇಕ್ ತಯಾರಿಸುವ ವಿಧಾನ ಇಲ್ಲಿದೆ
ತರಕಾರಿ ಪ್ಯಾನ್ಕೇಕ್ಅನ್ನು ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ಸಮಯದಲ್ಲಿ ಸೇವಿಸಬಹುದು. ಅಡುಗೆ ಮನೆಯಲ್ಲಿ ಲಭ್ಯವಿರುವ ಸಾಮಗ್ರಿಗಳಲ್ಲಿಯೇ ತಯಾರಿಸಬಹುದಾದ್ದರಿಂದ ಇದು ಸುಲಭ ಮತ್ತು ರುಚಿಕರವಾಗಿಯೂ ಇರುತ್ತದೆ.
ಕೊರೊನಾ ವೈರಸ್ ಹಾವಳಿ ಜನರಿಗೆ ಆತಂಕ ತಂದೊಡ್ಡಿದೆ. ಜತೆಗೆ ಹೊಸ ಹೊಸ ಹೆಸರಿನ ರೂಪಾಂತರಿ ವೈರಸ್ಗಳು ಬೇರೆ! ಇವುಗಳ ವಿರುದ್ಧ ಹೋರಾಡಲು ನೀವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲೇಬೇಕು. ಹಾಗಿದ್ದಾಗ ಪೌಷ್ಠಿಕಾಂಶಯುಕ್ತ ಆಹಾರವೇ ನಿಮ್ಮದಾಗಿರಬೇಕು. ಪ್ರೋಟೀನ್ಯುಕ್ತ ಆಗಾರವನ್ನೇ ಸೇವಿಸಿ ನಿಮ್ಮ ಆರೋಗ್ಯದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ತರಕಾರಿಗಳಿಂದ ರುಚಿಕರವಾದ ತರಕಾರಿ ಪ್ಯಾನ್ಕೇಕ್ ತಯಾರಿಸುವ ವಿಧಾನ ತಿಳಿಯೋಣ.
ಕ್ಯಾರೆಟ್, ಈರುಳ್ಳಿ ಮುಂತಾದ ತರಕಾರಿಗಳನ್ನು ಬಳಸಿ ತಯಾರಿಸುವ ತರಕಾರಿ ಪ್ಯಾನ್ಕೇಕ್ ನಿಮ್ಮ ಆರೋಗ್ಯವನ್ನು ಸುಧಾರಿಸುವುದಲ್ಲದೇ ತಿನ್ನಲು ರುಚಿಕರವಾಗಿಯೂ ಇರುತ್ತದೆ. ನೀವು ಪೌಷ್ಠಿಕಾಂಶಯುಕ್ತ ಆಹಾರವನ್ನೇ ಸೇವಿಸುತ್ತಿದ್ದರೆ ನಿಮ್ಮ ಆರೋಗ್ಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದರೆ ಖಂಡಿತವಾಗಿಯೂ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಸಹಾಯವಾಗುತ್ತದೆ. ಜತೆಗೆ ಇನ್ನಿತರ ರೋಗಗಳ ಅಪಾಯದಿಂದಲೂ ಸಹ ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು.
ತರಕಾರಿ ಪ್ಯಾನ್ಕೇಕ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಕ್ಯಾರೆಟ್ – ¼ ಕಪ್ ಪಾಲಾಕ್ ಸೊಪ್ಪು – ¼ ಕಪ್ ಎಲೆಕೋಸು- ¼ ಕಪ್ ಈರುಳ್ಳಿ- ¼ ಕಪ್ ಕೊತ್ತಂಬರಿ ಸೊಪ್ಪು- ¼ ಕಪ್ ಹಸಿರು ಮೆಣಸಿನಕಾಯಿ- 2 ಶುಂಠಿ-1
ಧಾನ್ಯದ ಹಿಟ್ಟು ಬೆಸಾನ್ ಹಿಟ್ಟು 25 ಗ್ರಾಂ ಓಟ್ಸ್ 25 ಗ್ರಾಂ ಹಾಲು 1ಕಪ್ ಸಂಸ್ಕರಿಸಿದ ಎಣ್ಣೆ 2 ಚಮಚ ಅಡಿಗೆ ಸೋಡಾ ½ ಚಮಚ ಅರಿಶಿಣ ½ ಚಮಚ ಕರಿಮೆಣಸು ½ ಜೀರಾ ಪುಡಿ ½ ಚಮಚ ಬಿಳಿ ಎಳ್ಳು 1 ಚಮಚ ಉಪ್ಪು- ರುಚಿಗೆ ತಕ್ಕಷ್ಟು
ಚಟ್ನಿ ತಯಾರಿಸಲು ಬೇಕಾಗುವ ಸಾಮಗ್ರಿ ಕುಂಬಳಕಾಯಿ ಬೀಜ 1 ಚಮಚ ಎಳ್ಳು ಬೀಜ 1 ಚಮಚ ಒಂದು ಕಪ್ ಪುದೀನ ಮೊಸರು 2 ಚಮಚ ಕರಿ ಮೆಣಸು- 2 ಬೆಳ್ಳುಳ್ಳಿ- 2 ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ ಧಾನ್ಯದ ಹಿಟ್ಟು, ಬೆಸಾನ್ ಹಿಟ್ಟು, ಓಟ್ಸ್, ಉಪ್ಪು, ಅರಿಶಿಣ, ಬೇಕಿಂಗ್ ಪೌಡರ್, ಜೀರಾ ಪುಡಿ, ಮತ್ತು ಮುಣಸು ಎಲ್ಕಾ ಸೇರಿಸಿ ಒಟ್ಟಿಗೆ ಮಿಶ್ರಣ ಮಾಡಿ. ನಂತರ ಎಲೆಕೋಸು, ಈರುಳ್ಳಿ, ಪಾಲಾಕ್, ಹಸಿ ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಅದಕ್ಕೆ ಕ್ಯಾರೆಟ್ ಮತ್ತು ಶುಂಠಿಯನ್ನು ತುರಿದು ಸೇರಿಸಿ. ಹಿಟ್ಟು ಮಿಶ್ರಣ ಮತ್ತು ತರಕಾರಿ ಮಿಶ್ರಣವನ್ನು ಒಟ್ಟಿಗೆ ಸೇರಿಸಿ ಹಾಲು ಮತ್ತು ಮೊಟ್ಟೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 10 ನಿಮಿಷಗಳ ಕಾಲ ಮಿಶ್ರಣ ಮಾಡಿದ ಹಿಟ್ಟನ್ನು ಹಾಗೆಯೇ ಇಡಿ. ನಂತರ ನಾನ್-ಸ್ಟಿಕ್ ಪ್ಯಾನ್ ಅನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆಯಿಂದ ಸವರಿ. ತಯಾರಿಸಿದ ಹಿಟ್ಟನ್ನು ವೃತ್ತಾಕಾರದಲ್ಲಿ ತಟ್ಟಿ ಪ್ಯಾನ್ ಮೇಲೆ ಬೇಯಿಸಿ. ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಚೆನ್ನಾಗಿ ಎರಡೂ ಕಡೆಗಳಲ್ಲಿ ಬೇಯಿಸಿ. ತಯಾರಿಸಿಕೊಂಡ ಚಟ್ನಿ ಜತೆ ಇದನ್ನು ಸವಿಯಬಹುದು.
ತರಕಾರಿ ಪ್ಯಾನ್ಕೇಕ್ಅನ್ನು ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ಸಮಯದಲ್ಲಿ ಸೇವಿಸಬಹುದು. ಅಡುಗೆ ಮನೆಯಲ್ಲಿ ಲಭ್ಯವಿರುವ ಸಾಮಗ್ರಿಗಳಲ್ಲಿಯೇ ತಯಾರಿಸಬಹುದಾದ್ದರಿಂದ ಇದು ಸುಲಭ ಮತ್ತು ರುಚಿಕರವಾಗಿಯೂ ಇರುತ್ತದೆ.
ಪ್ರಯೋಜನಗಳು ತರಕಾರಿ ಪ್ಯಾನ್ಕೇಕ್ನಲ್ಲಿ ಪ್ರೋಟೀನ್, ಖನಿಜಗಳು, ಜೀವಸತ್ವಗಳು ಮತ್ತು ಕಾರ್ಬೋಹೈಡ್ರೇಟ್ಗಳು ಸೇರಿದಂತೆ ಎಲ್ಲಾ ಪೋಷಕಾಂಶಗಳಿರುತ್ತದೆ. ಇದು ಪ್ರೋಬಯಾಟಿಕ್ ಮತ್ತು ಪೈಬರ್ಗಳನ್ನು ಸಹ ಹೊಂದಿದೆ. ಹಾಗಿರುವಾಗ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇದು ಸಹಾಯಕವಾಗಿದೆ. ಇದರಲ್ಲಿರುವ ಮೊಟ್ಟೆ, ಮೊಸರು ಮತ್ತು ಬೆಸಾನ್ ಹಿಟ್ಟಿನಲ್ಲಿ ಸಾಕಷ್ಟು ಪ್ರೋಟೀನ್ ಅಂಶವಿದೆ, ಮಸಾಲೆ ಮತ್ತು ಗಿಡಮೂಲಿಕೆಗಳಾದ ಕರಿಮೆಣಸು, ಅರಿಶಿಣ, ಎಳ್ಳು, ಬೆಳ್ಳುಳ್ಳಿಯಲ್ಲಿರುವ ಅಂಶ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಮೊಸರಿನಲ್ಲಿ ಪ್ರೋಬಯಾಟಿಕ್ಗಳು ಹೆಚ್ಚಾಗಿರುವುದರಿಂದ ಇದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
ಇದನ್ನೂ ಓದಿ: