ಲಸಿಕೆ ತಯಾರಿಕೆ ಮುಂಚೂಣಿಯಲ್ಲಿ ಭಾರತ! ಲಸಿಕೆ ರಫ್ತು ಆರಂಭ: ನೆರೆ ರಾಷ್ಟ್ರಗಳಿಗೆ ನೆರವಾಗುವತ್ತ ಹೆಜ್ಜೆಯಿಟ್ಟ ಭಾರತ

| Updated By: ಸಾಧು ಶ್ರೀನಾಥ್​

Updated on: Jan 20, 2021 | 12:00 PM

ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ಆರಂಭವಾದ ಕೆಲವೇ ದಿನಗಳಲ್ಲಿ ರಫ್ತು ಕಾರ್ಯ ಆರಂಭವಾಗಿರುವುದು, ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಭಾರತದ ಪ್ರಾಮುಖ್ಯತೆಯನ್ನು ಮತ್ತಷ್ಟು ಹೆಚ್ಚಿಸಲಿದೆ.. ಭಾರತಕ್ಕೆ ವಿಶ್ವದ ಔಷಧಾಲಯ ಎಂಬ ಗರಿಮೆಯೂ ಸಿಗಲಿದೆ.

ಲಸಿಕೆ ತಯಾರಿಕೆ ಮುಂಚೂಣಿಯಲ್ಲಿ ಭಾರತ! ಲಸಿಕೆ ರಫ್ತು ಆರಂಭ: ನೆರೆ ರಾಷ್ಟ್ರಗಳಿಗೆ ನೆರವಾಗುವತ್ತ ಹೆಜ್ಜೆಯಿಟ್ಟ ಭಾರತ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕೊರೊನಾ ವೈರಾಣುವನ್ನು ಹಿಮ್ಮೆಟ್ಟಿಸಲು ಲಸಿಕೆ ತಯಾರಿಸುವಲ್ಲಿ ಮುಂಚೂಣಿಯಲ್ಲಿರುವ ಭಾರತ, ಈಗ ನೆರೆದೇಶಗಳಿಗೆ ನೆರವಾಗುವತ್ತ ಹೆಜ್ಜೆ ಇಟ್ಟಿದೆ. ಭೂತಾನ್​, ಮಾಲ್ಡೀವ್ಸ್​, ಬಾಂಗ್ಲಾದೇಶ, ನೇಪಾಳ, ಮಯನ್ಮಾರ್, ಸಿಶೆಲ್ಸ್​ ದೇಶಗಳಿಗೆ ಇಂದಿನಿಂದ ಕೊರೊನಾ ಲಸಿಕೆ ಕಳುಹಿಸಿಕೊಡುವುದಾಗಿ ಭಾರತೀಯ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಹಾಗೆಯೇ, ಶ್ರೀಲಂಕಾ, ಅಫಘಾನಿಸ್ತಾನ, ಮಾರಿಶಸ್​ ದೇಶಗಳಿಂದ ಅನುಮತಿ ಪತ್ರ ದೊರೆತ ತಕ್ಷಣ ಅಲ್ಲಿಗೂ ರಫ್ತು ಮಾಡಲಾಗುವುದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಭಾರತ ಈಗ ವಿಶ್ವದ ಔಷಧಾಲಯ – Shot in Arm to India!
ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ಆರಂಭವಾದ ಕೆಲವೇ ದಿನಗಳಲ್ಲಿ ರಫ್ತು ಕಾರ್ಯ ಆರಂಭವಾಗಿರುವುದು, ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಭಾರತದ ಪ್ರಾಮುಖ್ಯತೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಇದರೊಂದಿಗೆ ಭಾರತಕ್ಕೆ ವಿಶ್ವದ ಔಷಧಾಲಯ ಎಂಬ ಗರಿಮೆಯೂ ಸಿಗಲಿದೆ. ಕೊರೊನಾದಿಂದ ಕಂಗೆಟ್ಟಿರುವ ಭಾರತದ ಅರ್ಥ ವ್ಯವಸ್ಥೆಗೆ ಫಾರ್ಮಾಸ್ಯುಟಿಕಲ್ಸ್​ ಕಂಪನಿಗಳೇ ಈಗ ಆಧಾರವಾಗಿವೆ!

ವಿಶ್ವದಲ್ಲೇ ಅತ್ಯಂತ ದೊಡ್ಡ ಮಟ್ಟದಲ್ಲಿ ಔಷಧೀಯ ಉತ್ಪನ್ನಗಳ ತಯಾರಕ ರಾಷ್ಟ್ರ ಎಂದು ಗುರುತಿಸಿಕೊಂಡಿರುವ ಭಾರತಕ್ಕೆ ಕೊರೊನಾ ಲಸಿಕೆ ಉತ್ಪಾದನೆ ಮತ್ತಷ್ಟು ಬಲ ತುಂಬಿದೆ. ಇದೀಗ ಬೇರೆ ದೇಶಗಳಿಗೆ ಕೊರೊನಾ ಲಸಿಕೆ ರಫ್ತು ಮಾಡಲಿರುವ ಭಾರತ ಸರ್ಕಾರ ಲಸಿಕೆ ನಿರ್ವಹಣೆ ಕುರಿತು ವಿದೇಶಗಳಿಗೆ ಎರಡು ದಿನಗಳ ಎರಡು ದಿನಗಳ ತರಬೇತಿಯನ್ನೂ ನೀಡಲಿದೆ.

ಈ ಕುರಿತು ಟ್ವೀಟ್​ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತ ಜಾಗತಿಕ ಮಟ್ಟದಲ್ಲಿ ವಿಶ್ವಾಸಾರ್ಹ ದೇಶವಾಗಿದೆ ಎನ್ನುವುದಕ್ಕೆ ಹೆಮ್ಮೆಯಾಗುತ್ತಿದೆ. ಜ. 20ರಿಂದ ನೆರೆ ದೇಶಗಳಿಗೆ ಕೊರೊನಾ ಲಸಿಕೆ ವಿತರಣೆ ಮಾಡಲಿದ್ದು, ಮುಂಬರುವ ದಿನಗಳಲ್ಲಿ ಜಗತ್ತಿನೆಲ್ಲೆಡೆ ತಲುಪಲಿದ್ದೇವೆ ಎಂದು ಹೇಳಿದ್ದಾರೆ.

ರೋಗ ನಿರೋಧಕ ಶಕ್ತಿ ಇಲ್ಲದವರಿಗೆ ಕೊವ್ಯಾಕ್ಸಿನ್​ ಕೊಡಬಾರದಂತೆ.. ಇದೆಂಥ ವರಸೆ!