ನವದೆಹಲಿ: ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ದೃಷ್ಟಿ ಮೀರಿದ ಗುರಿ (beyond-visual-range) ಹಾಗೂ ಆಗಸದಿಂದಲೇ ವೈರಿಯನ್ನು ಹೊಡೆದುರುಳಿಸುವ ‘ಅಸ್ತ್ರ’ ಹೆಸರಿನ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ಕ್ಷಿಪಣಿ 160 ಕಿಲೋ ಮೀಟರ್ ದೂರ ಇರುವ ವೈರಿಯನ್ನು ಕೂಡ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿರಲಿದೆ.
ಈಗಾಗಲೇ ಪಾಕಿಸ್ತಾನ ಹಾಗೂ ಚೀನಾ ರಾಷ್ಟ್ರಗಳು ಗಡಿ ಭಾಗದಲ್ಲಿ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿವೆ. ಎರಡೂ ರಾಷ್ಟ್ರಗಳಿಗೆ ಭಾರತ ತಕ್ಕ ಉತ್ತರ ನೀಡುತ್ತಿದೆ. ಒಂದೊಮ್ಮೆ, ಈ ಕ್ಷಿಪಣಿ ಭಾರತೀಯ ರಕ್ಷಣಾ ವ್ಯವಸ್ಥೆಗೆ ಸೇರ್ಪಡೆಯಾದರೆ ಭಾರತದ ಬಲ ಮತ್ತಷ್ಟು ಹೆಚ್ಚಲಿದೆ. ಆಗಸದಲ್ಲಿ ನಿಂತು ವೈರಿಯನ್ನು ಹೊಡೆದುರುಳಿಸಲು ಅಸ್ತ್ರ ಸಹಕಾರಿ ಆಗಲಿದೆ.
2020ಕ್ಕೆ ಭಾರತೀಯ ಸೇನೆಗೆ ಸೇರ್ಪಡೆ:
ಭಾರತದಲ್ಲಿರುವ ಎಂಕೆ-1 ಆಟವನ್ನೇ ಬದಲಿಸುವ ಕ್ಷಿಪಣಿ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಏಕೆಂದರೆ, 110 ಕಿ.ಮೀ ಇದರ ರೇಂಜ್. ಇದು 5,500 ಕಿ.ಮೀ. ವೇಗದಲ್ಲಿ ಮುನ್ನುಗುವ ಸಾಮರ್ಥ್ಯವನ್ನು ಹೊಂದಿದೆ. ಅಸ್ತ್ರ ಕ್ಷಿಪಣಿ ಎಂಕೆ-1ನ ಮುಂದುವರಿದ ಭಾಗವಾಗಿದೆ. ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಸ್ತ್ರ ವನ್ನು ಸಿದ್ಧಪಡಿಸುತ್ತಿದೆ. ಇದು 2022ರ ವೇಳೆಗೆ ಭಾರತದ ರಕ್ಷಣಾ ಸಂಸ್ಥೆಗೆ ಸೇರ್ಪಡೆ ಆಗುವ ನಿರೀಕ್ಷೆ ಇದೆ.