ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಗಡಿ ಉದ್ವಿಗ್ನತೆ ಕಡಿಮೆಯಾಗದ ಹಿನ್ನೆಲೆಯಲ್ಲಿ ಭಾರತ ಈಗ ನೂತನ ತಂತ್ರವನ್ನು ಹೆಣೆಯುತ್ತಿದೆ. ಇದರಂಗವಾಗಿ ಇಸ್ರೇಲ್‌ನಿಂದ ಹೊಸದಾಗಿ ಎರಡು ಅತ್ಯಾಧುನಿಕ ಸೌಲಭ್ಯವುಳ್ಳ ಏರ್ ಸರ್ವೆಲೆನ್ಸ್ ಫಾಲ್ಕನ್‌ಗಳನ್ನು ಖರೀದಿಸಲು ಮುಂದಾಗಿದೆ.
ಇದರೊಂದಿಗೆ ಚೀನಾ ವಿರುದ್ಧದ ಯಾವುದೇ ಸಮಯದಲ್ಲಿ ಯಾವುದೇ ಬೆಳವಣಿಗೆಗಳನ್ನು ಎದುರಿಸಲು ಸನ್ನದ್ಧವಾಗಿರಲು ಭಾರತ ಈಗ ಮುಂದಾಗಿರೋದು ಸ್ಪಷ್ಟವಾಗುತ್ತಿದೆ. ವಿಶ್ವದಲ್ಲಿಯೇ ಅತ್ಯಾಧುನಿಕ ಎನ್ನಲಾಗುವ ಫಾಲ್ಕನ್-ಅವಾಕ್ಸ್ ಅಂದ್ರೆ ಏರ್‌ಬಾರ್ನ್ ವಾರ್ನಿಂಗ್ ಌಂಡ್ ಕಂಟ್ರೋಲ್ ಸಿಸ್ಟಮ್ಸ್ ವಿಮಾನ ವಿಶ್ವದಲ್ಲಿಯೇ ಉನ್ನತ ದರ್ಜೆಯದ್ದು ಎನ್ನಲಾಗುತ್ತಿದೆ.
ಇದು ಆಕಾಶದಿಂದ ಎದುರಾಗುವ ಯಾವುದೇ ಅಪಾಯದ ಮುನ್ನೂಚನೆ ನೀಡುವುದಲ್ಲದೇ ತಕ್ಷಣವೆ ಪರಿಸ್ಥಿತಿಗನುಸಾರವಾಗಿ ಪ್ರತಿಕ್ರಿಯಿಸಲು ನೆರವಾಗುತ್ತೆ. ಅಷ್ಟೆ ಅಲ್ಲ ಇದರಿಂದ ಶತ್ರುವಿನ ಸೇನಾ ತುಕುಡಿಗಳು, ವಾಯುಪಡೆ ಹಾಗೂ ನೌಕಾಪಡೆಗಳ ಸ್ಥಿತಿಗತಿಗಳನ್ನು ಕ್ಷಣಾರ್ದದಲ್ಲಿಯೇ ತಿಳಿಯಲು ನೆರವಾಗುತ್ತೆ ಎಂದು ಹೇಳಲಾಗುತ್ತಿದೆ.
ಇದಕ್ಕಾಗಿ ಭಾರತ ಇಸ್ರೇಲ್ ಜೊತೆ ಒಂದು ಬಿಲಿಯನ್ ಅಮೆರಿಕನ್ ಡಾಲರ್‌ಗಳ ಒಪ್ಪಂದ ಮಾಡಿಕೊಳ್ಳುತ್ತಿದ್ದು ಅದು ಈಗ ಅಂತಿಮ ಹಂತಕ್ಕೆ ಬಂದಿದೆ. ಭಾರತದಲ್ಲಿ ಈಗಾಗಲೇ ಮೂರು ಫಾಲ್ಕನ್-ಅವಾಕ್ಸ್ ಗಳಿದ್ದು, ಭಾರತೀಯ ವಾಯುಪಡೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಇದರ ಜೊತೆಗೆ ಭಾರತ ರಷ್ಯಾದೊಂದಿಗೆ ಕೂಡಾ ಐದು ಬಿಲಿಯನ್ ಡಾಲರ್ ವೆಚ್ಚದಲ್ಲಿ ರಷ್ಯಾದ S-400 ಎಂಬ ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಮ್ಸ್ ಖರೀದಿ ಒಪ್ಪಂದಕ್ಕೆ ಸಹಿ ಮಾಡಿದ್ದು, ಈಗಾಗಲೇ ರಷ್ಯಾಕ್ಕೆ 800 ಮಿಲಿಯನ್ ಡಾಲರ್ ನೀಡಲಾಗಿದೆ.