AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸತ್ತಿನಲ್ಲೇ ಕೊರೊನಾ ಬಗ್ಗೆ ಎಚ್ಚರಿಕೆ ನೀಡಿದ್ದ MP ವಸಂತಕುಮಾರ್‌ ಕೋವಿಡ್‌ಗೇ ಬಲಿ

ನವದೆಹಲಿ: ತಮಿಳುನಾಡಿನ ಕನ್ಯಾಕುಮಾರಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಲೋಕಸಭಾ ಸದಸ್ಯ ವಸಂತ‌ಕುಮಾರ್‌ ಕೋವಿಡ್‌ನಿಂದಾಗಿ ಚೆನ್ನೈನಲ್ಲಿ ಮೃತಪಟ್ಟಿದ್ದಾರೆ. ಆಗಸ್ಟ್‌ 10ರಂದು ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದ ವಸಂತ‌ಕುಮಾರ್‌ ಶುಕ್ರವಾರ ಕೊರೊನಾಘಾತಕ್ಕೆ ಬಲಿಯಾಗಿದ್ದಾರೆ. ಇದಕ್ಕಿಂತ ಆಘಾತಕಾರಿ ವಿಷಯ ಅಂದ್ರೆ ಮಾರ್ಜ್‌ 20ರಂದೇ ಲೋಕಸಭೆಯಲ್ಲಿ ಕೊರೊನಾ ವೈರಸ್‌ನ ಗಂಭೀರತೆ ಬಗ್ಗೆ ದೇಶಕ್ಕೆ ಎಚ್ಚರಿಕೆ ನೀಡಿದ್ದರು. ಕೊರೊನಾ ಸಂಕಷ್ಟವನ್ನು ರಾಷ್ಟ್ರೀಯ ತುರ್ತು ಸ್ಥಿತಿ ಎಂದು ಘೋಷಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನರೇಂದ್ರ ಮೋದಿ ಸರ್ಕಾರಕ್ಕೆ ಆಗ್ರಹಿಸಿದ್ದರು. ಆದ್ರೆ ವಸಂತಕುಮಾರ್‌ ಅವರ ಈ ಮನವಿಯನ್ನು ತಮಾಷೆ ಮಾಡಿದ […]

ಸಂಸತ್ತಿನಲ್ಲೇ ಕೊರೊನಾ ಬಗ್ಗೆ ಎಚ್ಚರಿಕೆ ನೀಡಿದ್ದ MP ವಸಂತಕುಮಾರ್‌ ಕೋವಿಡ್‌ಗೇ ಬಲಿ
Guru
| Edited By: |

Updated on: Aug 29, 2020 | 12:45 PM

Share

ನವದೆಹಲಿ: ತಮಿಳುನಾಡಿನ ಕನ್ಯಾಕುಮಾರಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಲೋಕಸಭಾ ಸದಸ್ಯ ವಸಂತ‌ಕುಮಾರ್‌ ಕೋವಿಡ್‌ನಿಂದಾಗಿ ಚೆನ್ನೈನಲ್ಲಿ ಮೃತಪಟ್ಟಿದ್ದಾರೆ. ಆಗಸ್ಟ್‌ 10ರಂದು ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದ ವಸಂತ‌ಕುಮಾರ್‌ ಶುಕ್ರವಾರ ಕೊರೊನಾಘಾತಕ್ಕೆ ಬಲಿಯಾಗಿದ್ದಾರೆ.

ಇದಕ್ಕಿಂತ ಆಘಾತಕಾರಿ ವಿಷಯ ಅಂದ್ರೆ ಮಾರ್ಜ್‌ 20ರಂದೇ ಲೋಕಸಭೆಯಲ್ಲಿ ಕೊರೊನಾ ವೈರಸ್‌ನ ಗಂಭೀರತೆ ಬಗ್ಗೆ ದೇಶಕ್ಕೆ ಎಚ್ಚರಿಕೆ ನೀಡಿದ್ದರು. ಕೊರೊನಾ ಸಂಕಷ್ಟವನ್ನು ರಾಷ್ಟ್ರೀಯ ತುರ್ತು ಸ್ಥಿತಿ ಎಂದು ಘೋಷಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನರೇಂದ್ರ ಮೋದಿ ಸರ್ಕಾರಕ್ಕೆ ಆಗ್ರಹಿಸಿದ್ದರು. ಆದ್ರೆ ವಸಂತಕುಮಾರ್‌ ಅವರ ಈ ಮನವಿಯನ್ನು ತಮಾಷೆ ಮಾಡಿದ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ, ವಸಂತಕುಮಾರ್‌ ಅವರ ಮೈಕ್‌ ಅನ್ನು ಕಟ್‌ ಮಾಡಿ, ಅವರ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಅಷ್ಟೇ ಅಲ್ಲ ವಸಂತಕುಮಾರ್‌ ಬದಲು ಬೇರೆಯವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು.

ದುರಂತ ಅಂದ್ರೆ ನಂತರದ ದಿನಗಳಲ್ಲಿ ವಸಂತಕುಮಾರ್‌ ಮಾಡಿದ ಸಲಹೆಗಳನ್ನು ಮೋದಿ ಸರ್ಕಾರ ಜಾರಿಗೊಳಿಸಿತು. ಆದ್ರೆ ಈ ಬಗ್ಗೆ ಸ್ವಲ್ಪವೂ ವಸಂತಕುಮಾರ್‌ ನೀಡಿದ್ದ ಸಲಹೆಗಳ ಕುರಿತು ಉಲ್ಲೇಖ ಮಾಡಿರಲಿಲ್ಲ. ದುರುದೃಷ್ಟವಶಾತ್‌ ಈಗ ವಸಂತಕುಮಾರ್‌ ಅವರೇ ಕೊರೊನಾಗೆ ಬಲಿಯಾಗಿದ್ದಾರೆ.

ವಸಂತಕುಮಾರ್‌ ಹೇಳಿದ ಸಲಹೆಗಳನ್ನು ಮೋದಿ ಸರ್ಕಾರ ಮೊದಲೇ ಗಂಭೀರವಾಗಿ ಪರಿಗಣಿಸಿದ್ದರೆ, ಸಾವಿರಾರು ಸಾವುನೋವು  ತಪ್ಪಿಸಬಹುದಿತ್ತು ಅಂತಾ ಕಾಣಿಸುತ್ತೆ, ಅಲ್ಲವೆ?

ಪಡ್ಡೆ ಹುಡುಗರ ಅನೈತಿಕ ತಾಣವಾಗಿ ಮಾರ್ಪಟ್ಟ ಗೋರಿಪಾಳ್ಯ ಇಂದಿರಾ ಕ್ಯಾಂಟೀನ್!
ಪಡ್ಡೆ ಹುಡುಗರ ಅನೈತಿಕ ತಾಣವಾಗಿ ಮಾರ್ಪಟ್ಟ ಗೋರಿಪಾಳ್ಯ ಇಂದಿರಾ ಕ್ಯಾಂಟೀನ್!
Asia Cup Rising Stars: ಫೈನಲ್​ಗೇರಿದ ಟೀಮ್ ಇಂಡಿಯಾ
Asia Cup Rising Stars: ಫೈನಲ್​ಗೇರಿದ ಟೀಮ್ ಇಂಡಿಯಾ
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ