Indian Air Force Day: ಭಾರತೀಯ ವಾಯುಪಡೆ ದಿನ; ಅ. 8ರಂದು 80 ಐಎಎಫ್ ವಿಮಾನಗಳಿಂದ ಚಂಡೀಗಢದಲ್ಲಿ ವೈಭವದ ಪ್ರದರ್ಶನ

| Updated By: ಸುಷ್ಮಾ ಚಕ್ರೆ

Updated on: Oct 05, 2022 | 11:08 AM

ಈ ವೈಮಾನಿಕ ಪ್ರದರ್ಶನದಲ್ಲಿ ವಾಯುಪಡೆಯ ಯುದ್ಧ ವಿಮಾನಗಳಾದ ರಫೇಲ್, ಎಸ್​ಯು -30 ಮತ್ತು ಮಿರಾಜ್ 2000 ಹಾರಾಟವನ್ನು ಜನರು ವೀಕ್ಷಿಸಬಹುದು.

Indian Air Force Day: ಭಾರತೀಯ ವಾಯುಪಡೆ ದಿನ; ಅ. 8ರಂದು 80 ಐಎಎಫ್ ವಿಮಾನಗಳಿಂದ ಚಂಡೀಗಢದಲ್ಲಿ ವೈಭವದ ಪ್ರದರ್ಶನ
ಚಂಡೀಗಢದಲ್ಲಿ ವಾಯು ಪಡೆ ದಿನಾಚರಣೆ
Follow us on

ನವದೆಹಲಿ: ಭಾರತೀಯ ವಾಯುಪಡೆ (IAF) ತನ್ನ 90ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಹೀಗಾಗಿ, ಅಕ್ಟೋಬರ್ 8ರಂದು ಚಂಡೀಗಢದಲ್ಲಿ ವಾಯುಪಡೆಯ (Indian Air Force) ಸುಮಾರು 80 ವಿಮಾನಗಳು ಆಕಾಶದಲ್ಲಿ ವೈಭವದ ಪ್ರದರ್ಶನವನ್ನು ನೀಡಲಿವೆ. ಈ ಫ್ಲೈಪಾಸ್ಟ್ ಕಾರ್ಯಕ್ರಮವನ್ನು ಸುಖ್ನಾ ಸರೋವರದ ಮೇಲೆ ನಡೆಸಲು ಯೋಜಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅಧ್ಯಕ್ಷತೆಯಲ್ಲಿ ಈ ಪ್ರದರ್ಶನ ನಡೆಯಲಿದೆ. ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಕೂಡ ಉಪಸ್ಥಿತರಿರಲಿದ್ದಾರೆ.

ಈ ವೈಮಾನಿಕ ಪ್ರದರ್ಶನದಲ್ಲಿ ವಾಯುಪಡೆಯ ಯುದ್ಧ ವಿಮಾನಗಳಾದ ರಫೇಲ್, ಎಸ್​ಯು -30 ಮತ್ತು ಮಿರಾಜ್ 2000 ಹಾರಾಟವನ್ನು ಜನರು ವೀಕ್ಷಿಸಬಹುದು. ಮುಂಬರುವ ಐಎಎಫ್ ದಿನಾಚರಣೆಯ ವಿಮಾನಗಳ ಸಂಖ್ಯೆ ಮತ್ತು ರಚನೆಗಳ ವಿವರಗಳನ್ನು ಮಂಗಳವಾರ ವಾಯುಪಡೆ ಅಧಿಕಾರಿಗಳು ಹಂಚಿಕೊಂಡಿದ್ದಾರೆ. ಈ ಪ್ರದರ್ಶನದಲ್ಲಿ 80 ವಿಮಾನಗಳು ಭಾಗವಹಿಸಲಿವೆ.

ಇದನ್ನೂ ಓದಿ: Combat Helicopter: ಭಾರತೀಯ ವಾಯುಪಡೆಗೆ ಸ್ವದೇಶಿ ನಿರ್ಮಿತ 15 ಹೊಸ ಯುದ್ಧ ಹೆಲಿಕಾಪ್ಟರ್ ಸೇರ್ಪಡೆ

ಅಕ್ಟೋಬರ್ 8ರಂದು ಬೆಳಿಗ್ಗೆ ಐಎಎಫ್ ನಿಲ್ದಾಣದಲ್ಲಿ ಪರೇಡ್ ನಡೆಯಲಿದೆ. ನಂತರ ಸುಕ್ನಾ ಸರೋವರದ ಮೇಲೆ ಫ್ಲೈಪಾಸ್ಟ್ ಪ್ರದರ್ಶನ ನಡೆಯಲಿದೆ. ಭಾರತೀಯ ವಾಯುಪಡೆಯು ಈ ವರ್ಷದ ವಾರ್ಷಿಕ ವಾಯುಪಡೆಯ ದಿನದ ಪರೇಡ್ ಮತ್ತು ಫ್ಲೈಪಾಸ್ಟ್ ಅನ್ನು ಚಂಡೀಗಢದಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ವಿವಿಧ ವಿಮಾನಗಳಿಂದ ವೈಮಾನಿಕ ಪ್ರದರ್ಶನಕ್ಕೆ ಈಗಾಗಲೇ ತಾಲೀಮು ಆರಂಭವಾಗಿದೆ. ಅಲ್ಲದೆ, ಈ ವರ್ಷದ ಐಎಎಫ್ ದಿನದಂದು ಹೊಸ ಯುದ್ಧ ಸಮವಸ್ತ್ರವನ್ನು ಅನಾವರಣಗೊಳಿಸಲಾಗುವುದು.

ಸೋಮವಾರ ಐಎಎಫ್ ಸೇರ್ಪಡೆಗೊಂಡ ಸ್ಥಳೀಯವಾಗಿ ತಯಾರಿಸಿದ ಲಘು ಯುದ್ಧ ಹೆಲಿಕಾಪ್ಟರ್ (ಎಲ್‌ಸಿಎಚ್) ‘ಪ್ರಚಂದ್’ ಅನ್ನು ಜನರು ವೀಕ್ಷಿಸಬಹುದು. ಇದನ್ನು ಮುಖ್ಯವಾಗಿ ಪರ್ವತ ಯುದ್ಧಕ್ಕಾಗಿ ಅಭಿವೃದ್ಧಿಪಡಿಸಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರ ಉಪಸ್ಥಿತಿಯಲ್ಲಿ ಜೋಧ್‌ಪುರದಲ್ಲಿ ನಡೆದ ಸಮಾರಂಭದಲ್ಲಿ ಇದನ್ನು ಐಎಎಫ್‌ಗೆ ಸೇರ್ಪಡೆಗೊಳಿಸಲಾಯಿತು.

ಇದನ್ನೂ ಓದಿ: Breaking News: ಭಾರತದ ಮೂಲಕ ಚೀನಾಕ್ಕೆ ಹೋಗುತ್ತಿದ್ದ ಪ್ರಯಾಣಿಕರ ವಿಮಾನಕ್ಕೆ ಬಾಂಬ್ ಬೆದರಿಕೆ, ಭೂಸ್ಪರ್ಶಕ್ಕೆ ಅನುಮತಿ ನಿರಾಕರಣೆ

ಅ. 8ರ ವಿಮಾನ ಪ್ರದರ್ಶನದಲ್ಲಿ ವಿಶೇಷವಾಗಿ ವಿಂಟೇಜ್ ಹಾಗೂ ಪ್ರಸ್ತುತ ಆಧುನಿಕ ವಿಮಾನಗಳಾದ ರಫೇಲ್, ಪ್ರಚಂಡ್, ಎಂಐ-35, ಸು-30, ಜಾಗ್ವಾರ್, ಎಂಐ-17, ಚಿನೂಕ್, ಅಪಾಚೆ, ಹೊವಾರ್ಡ್ ಮತ್ತು ಡಕೋಟಾ ಆಕಾಶಗಂಗಾ, ಎನ್‌ಸೈನ್, ಏಕಲವ್ಯ, ತ್ರಿಶೂಲ್, ಮೆಹರ್, ಶಂಶೇರ್, ವಜ್ರ, ಸಾರಂಗ್ ಮತ್ತು ಸೂರ್ಯಕಿರಣ್ ಸೇರಿದಂತೆ ಹಲವು ವಿಶೇಷ ವಿಮಾನಗಳ ಪ್ರದರ್ಶನವಿರಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ