ನಮ್ಮ ದೇಶ ಸುರಕ್ಷಿತ ಕೈಗಳಲ್ಲಿದೆ; ಶಸ್ತ್ರ ಪೂಜೆ ನೆರವೇರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ನಮ್ಮ ದೇಶವು ನಮ್ಮ ಸಶಸ್ತ್ರ ಪಡೆಗಳ ಕೈಯಲ್ಲಿ ಸುರಕ್ಷಿತವಾಗಿದೆ ಎಂದು ನಮಗೆ ವಿಶ್ವಾಸವಿದೆ. ನಮ್ಮ ಸಶಸ್ತ್ರ ಪಡೆಗಳು ಮತ್ತು ಅರೆಸೇನಾ ಪಡೆಗಳ ಯೋಧರು ನಮ್ಮ ದೇಶದ ಹೆಮ್ಮೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ನಮ್ಮ ದೇಶ ಸುರಕ್ಷಿತ ಕೈಗಳಲ್ಲಿದೆ; ಶಸ್ತ್ರ ಪೂಜೆ ನೆರವೇರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಶಸ್ತ್ರ ಪೂಜೆ ನೆರವೇರಿಸಿದ ಸಚಿವ ರಾಜನಾಥ್ ಸಿಂಗ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 05, 2022 | 11:54 AM

ನವದೆಹಲಿ: ಇಂದು ದೇಶಾದ್ಯಂತ ವಿಜಯದಶಮಿಯ ಸಂಭ್ರಮ. ಹೀಗಾಗಿ ಪ್ರತಿ ವರ್ಷದ ಪರಂಪರೆಯಂತೆ ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಉತ್ತರಾಖಂಡದ (Uttarakhand) ಚಮೋಲಿಯಲ್ಲಿರುವ ಔಲಿ ಸೇನಾ ನಿಲ್ದಾಣದಲ್ಲಿ ಶಸ್ತ್ರ ಪೂಜೆ (Shastra Puja) ನೆರವೇರಿಸಿದ್ದಾರೆ. ಈ ವೇಳೆ ಉತ್ತರಾಖಂಡದ ಚಮೋಲಿಯಲ್ಲಿರುವ ಔಲಿ ಸೇನಾ ನಿಲ್ದಾಣದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇನಾ ಯೋಧರೊಂದಿಗೆ ಸಂವಾದ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಸಚಿವ ರಾಜನಾಥ್ ಸಿಂಗ್, ಆಯುಧಗಳ ಅಥವಾ ಶಸ್ತ್ರಾಸ್ತ್ರಗಳ ಪೂಜೆ ಮಾಡುವ ಏಕೈಕ ದೇಶ ಭಾರತ. ನಮ್ಮ ದೇಶವು ನಮ್ಮ ಸಶಸ್ತ್ರ ಪಡೆಗಳ ಕೈಯಲ್ಲಿ ಸುರಕ್ಷಿತವಾಗಿದೆ ಎಂದು ನಮಗೆ ವಿಶ್ವಾಸವಿದೆ. ನಮ್ಮ ಸಶಸ್ತ್ರ ಪಡೆಗಳು ಮತ್ತು ಅರೆಸೇನಾ ಪಡೆಗಳ ಯೋಧರು ನಮ್ಮ ದೇಶದ ಹೆಮ್ಮೆ ಎಂದು ಹೇಳಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಕೂಡ ಶಸ್ತ್ರ ಪೂಜೆ ವೇಳೆ ಉಪಸ್ಥಿತರಿದ್ದರು.

ಇದನ್ನೂ ಓದಿ: ಮೈಸೂರು ದಸರಾ ಉತ್ಸವ-2022: ಅರಮನೆ ಆವರಣದಲ್ಲಿ ಸಂಭ್ರಮದ ಆಯುಧ ಪೂಜೆ ಆಚರಣೆ, ಯದುವೀರರಿಂದ ಪೂಜೆ

ವೈರಲ್ ಆಗಿರುವ ವಿಡಿಯೋದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಶಸ್ತ್ರ ಪಡೆಗಳ ಸಮ್ಮುಖದಲ್ಲಿ ಮಂತ್ರಗಳ ಪಠಣಗಳ ನಡುವೆ ಧಾರ್ಮಿಕ ಕ್ರಿಯೆಗಳನ್ನು ನಡೆಸುತ್ತಿರುವುದನ್ನು ನೋಡಬಹುದು. ಮತ್ತೊಂದು ವಿಡಿಯೋದಲ್ಲಿ ಸೈನಿಕರು ದೇಶಭಕ್ತಿ ಗೀತೆಗಳನ್ನು ಹಾಡುವುದನ್ನು ಕಾಣಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ