Dowry Case: ವರದಕ್ಷಿಣೆಗಾಗಿ ಹೆಂಡತಿಯ ಬೆರಳು ಕತ್ತರಿಸಿದ ಸೇನಾಧಿಕಾರಿ

2014ರಲ್ಲಿ ಮದುವೆಯಾದಾಗಿನಿಂದ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಮೇಜರ್ ಅವರ ಹೆಂಡತಿ ದೂರಿನಲ್ಲಿ ತಿಳಿಸಿದ್ದಾರೆ.

Dowry Case: ವರದಕ್ಷಿಣೆಗಾಗಿ ಹೆಂಡತಿಯ ಬೆರಳು ಕತ್ತರಿಸಿದ ಸೇನಾಧಿಕಾರಿ
ಪ್ರಾತಿನಿಧಿಕ ಚಿತ್ರ
Updated By: ಸುಷ್ಮಾ ಚಕ್ರೆ

Updated on: Jun 10, 2022 | 9:04 AM

ನವದೆಹಲಿ: ವರದಕ್ಷಿಣೆ (Dowry) ಕೊಡಲಿಲ್ಲ ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರು ತನ್ನ ಪತ್ನಿಯ ಬೆರಳನ್ನು ಕತ್ತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸೇನೆಯ ಮೇಜರ್ ವಿರುದ್ಧ ಉತ್ತರ ಪ್ರದೇಶದ ಮೀರತ್‌ನಲ್ಲಿ ಕೇಸ್ ದಾಖಲಿಸಲಾಗಿದೆ. ಮೀರತ್‌ನ 510 ಆರ್ಮಿ ಬೇಸ್‌ನಲ್ಲಿ ಕಾರ್ಪ್ಸ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ಸ್‌ನಲ್ಲಿ ಮೇಜರ್ ಶ್ರೇಣಿಯ ಅಧಿಕಾರಿಯಾಗಿರುವ ವ್ಯಕ್ತಿ ವಿರುದ್ಧ ಕೇಸ್ ದಾಖಲಾಗಿದೆ.

2014ರಲ್ಲಿ ಮದುವೆಯಾದಾಗಿನಿಂದ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಮೇಜರ್ ಅವರ ಹೆಂಡತಿ ದೂರಿನಲ್ಲಿ ತಿಳಿಸಿದ್ದಾರೆ. ಭಾರತೀಯ ಸೇನೆಯ ಮೇಜರ್ ವಿರುದ್ಧ ಕಿರುಕುಳ, ವರದಕ್ಷಿಣೆ ಮತ್ತು ಕೌಟುಂಬಿಕ ದೌರ್ಜನ್ಯದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಮೀರತ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಮೀನಾ ತಿಳಿಸಿದ್ದಾರೆ. 30 ವರ್ಷದ ಅವರ ಪತ್ನಿ ತನ್ನ ಗಾಯಗೊಂಡ ಬೆರಳನ್ನು ಇಟ್ಟುಕೊಂಡು ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಇದನ್ನೂ ಓದಿ: Pramod Mutalik: ಶ್ರೀರಾಮಸೇನೆಯ ಪ್ರಮೋದ್​ ಮುತಾಲಿಕ್​ ಸೇರಿದಂತೆ ನಾಲ್ವರಿಗೆ ಸಮನ್ಸ್ ಜಾರಿ

ಇದನ್ನೂ ಓದಿ
ದ್ರೌಪದಿ ಬದಲು ಸೀತೆಗೆ ವಸ್ತ್ರಾಪಹರಣ ಮಾಡಿಸಿದ ರಣದೀಪ್ ಸುರ್ಜೇವಾಲಾ; ಕಾಂಗ್ರೆಸ್ ನಾಯಕನ ಎಡವಟ್ಟಿಗೆ ಬಿಜೆಪಿ ಟೀಕೆ
ಕೊವಿಡ್ ರೋಗವನ್ನು ಎದುರಿಸುವುದಕ್ಕಾಗಿ ಪರೀಕ್ಷೆ ಹೆಚ್ಚಿಸಿ, ನಿಗಾ ವಹಿಸಿ, ಚಿಕಿತ್ಸೆ ನೀಡಿ: ರಾಜ್ಯಗಳಿಗೆ ಕೇಂದ್ರ ಸಲಹೆ
Chinese visa case ವೀಸಾ ಹಗರಣ: ಕಾರ್ತಿ ಚಿದಂಬರಂ ಆಪ್ತ ಭಾಸ್ಕರರಾಮನ್​​ಗೆ ಜಾಮೀನು

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ ಎಂದು ಸ್ಥಳೀಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿರುವ ಈ ಮಹಿಳೆಯ ತಂದೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದು ತಮ್ಮ ಮಗಳಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸದಂತೆ ಮೇಜರ್ ತಡೆದಿದ್ದಾರೆ ಮತ್ತು ಆರೋಪಿಗಳೊಂದಿಗೆ ರಾಜಿ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ