ದೆಹಲಿ: ಭಾರತ ಚೀನಾಗೆ ಅದರದ್ದೇ ಭಾಷೆಯಲ್ಲಿ ಉತ್ತರಿಸಿದೆ. ಲಡಾಖ್‌ನ ಪ್ಯಾಂಗಾಂಗ್ ತ್ಸೋನ ಫಿಂಗರ್ ಫೋರ್ ಪರ್ವತವನ್ನ ಭಾರತ ಮರುವಶಪಡಿಸಿಕೊಂಡಿದೆ. ಇದರಿಂದಾಗಿ ಬೆಟ್ಟದ ಮೇಲಿಂದ ಭಾರತೀಯ ಸೈನಿಕರು, ಚೀನಾ ಸೈನಿಕರ ಮೇಲೆ ಹದ್ದಿನ ಕಣ್ಣಿಡಬಹುದು. ಇದು ಚೀನಾದ ನೆಮ್ಮದಿಗೆ ಭಂಗ ಬಂದಿದೆ.
ಕಳೆದ ಹಲವಾರು ತಿಂಗಳುಗಳಿಂದ ಭಾರತ ಮತ್ತು ಚೀನಾ ನಡುವಿನ ವಾಸ್ತವ ಗಡಿ ರೇಖೆಯಲ್ಲಿ ಉದ್ವಿಗ್ನ ವಾತಾವರಣ ಇದೆ. ಲೆಫ್ಟಿನೆಂಟ್ ಕಮಾಂಡರ್ ಮಟ್ಟದಲ್ಲಿ ಐದು ಸುತ್ತಿನ ಮಾತುಕತೆ ನಡೆದ್ರೂ ಚೀನಾ ಸೇನೆ ಗಡಿಯಿಂದ ಹಿಂದೆ ಸರಿದಿರಲಿಲ್ಲ. ಚೀನಾದ ಪೀಪಲ್ ಲಿಬರೇಷನ್ ಆರ್ಮಿ ಭಾರತದ ಸುಮಾರು 1 ಸಾವಿರ ಚದರ ಕಿಲೋಮೀಟರ್ ಭೂ ಪ್ರದೇಶವನ್ನ ಅತಿಕ್ರಮಿಸಿದೆ ಅಂತಾ ಗುಪ್ತಚರ ವರದಿಗಳು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ವು. ಇದ್ರಿಂದ ಎಚ್ಚೆತ್ತ ಭಾರತೀಯ ಸೇನೆ ತನ್ನ ಕಾರ್ಯತಂತ್ರ ಬದಲಿಸಿ, ಚೀನಾಗೆ ಅದರದ್ದೇ ಭಾಷೆಯಲ್ಲಿ ಉತ್ತರಿಸಿದೆ. ಈ ಮೂಲಕ ಕಳೆದುಕೊಂಡಿದ್ದ ಭೂ ಪ್ರದೇಶಗಳನ್ನ ಮತ್ತೆ ವಶಪಡಿಸಿಕೊಂಡಿದೆ.
ಕೆಂಪು ಸೇನೆಗೆ ಭರ್ಜರಿ ಶಾಕ್ ನೀಡಿದ ಭಾರತೀಯ ಸೇನೆ!
ಭಾರತೀಯ ಸೇನೆ ಪ್ಯಾಂಗಾಂಗ್ ತ್ಸೋ ಸರೋವರದ ಬಳಿಯ ಫಿಂಗರ್ ಫೋರ್ ಪರ್ವತವನ್ನ ಮತ್ತೆ ತನ್ನ ವಶಕ್ಕೆ ತೆಗೆದುಕೊಂಡಿದೆ. ಇದ್ರಿಂದ ಪರ್ವತದ ಕೆಳಗಿರೋ ಚೀನಾ ಸೈನಿಕರ ಮೇಲೆ ನಿಗಾ ಇಡಬಹುದು. ಈ ಮೊದಲು ಪ್ಯಾಂಗಾಂಗ್ ತ್ಸೋ ಸರೋವರದ ಉತ್ತರದಲ್ಲಿ ಭಾರತ-ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿತ್ತು. ಇದರಿಂದಾಗಿ ಗಡಿ ಭಾಗದಲ್ಲಿ ಭಾರತವು ಪ್ರಾಬಲ್ಯ ಸಾಧಿಸಿದಂತಾಗಿದೆ. ಅಲ್ದೆ, ಗಡಿಯಲ್ಲಿ ಚೀನಾ ಆಳವಡಿಸಿದ್ದ ಸೆನ್ಸಾರ್ ಕ್ಯಾಮರಾಗಳನ್ನು ಭಾರತೀಯ ಸೈನಿಕರು ಕಿತ್ತೊಗೆದಿದ್ದಾರೆ. ಇದು ಚೀನಾದ ಕೆಂಪು ಸೇನೆಗೆ ಶಾಕ್ ನೀಡಿದೆ.
ಇದರ ನಡುವೆ ಭಾರತ-ಚೀನಾ ನಡುವೆ ಮೂರು ದಿನದಿಂದ ಕಮಾಂಡರ್ ಮಟ್ಟದಲ್ಲಿ ಮಾತುಕತೆ ನಡೀತಿದ್ರೂ, ಯಾವುದೇ ಪರಿಹಾರ ಸಿಕ್ಕಿಲ್ಲ. ಗಡಿ ಬಿಕ್ಕಟ್ಟು ಮುಂದುವರಿದೇ ಇತ್ತು. ಭಾರತದ ವಿಶೇಷ ಗಡಿ ಭದ್ರತಾ ಪಡೆಯನ್ನ ಗಡಿಯಲ್ಲಿ ನಿಯೋಜಿಸಲಾಗಿದೆ. ಭಾರತ ಗಡಿಗೆ ಹೆಚ್ಚಿನ ಸೈನಿಕರನ್ನ ರವಾನಿಸಿದ್ದು, ಪರ್ವತ ಪ್ರದೇಶಗಳನ್ನ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿರುವುದು ವಿಶೇಷ. ಈಗ ಭಾರತ ಫಿಂಗರ್ ಫೋರ್ನಿಂದ ಫಿಂಗರ್ ಏಯ್ಟ್ವರೆಗಿನ ಭೂ ಪ್ರದೇಶ ತನ್ನ ವಶಕ್ಕೆ ಪಡೆಯಲು ಕಾರ್ಯಾಚರಣೆ ನಡೆಸಬೇಕಿದೆ. ಆಗ ಮಾತ್ರ ಚೀನಾಗೆ ಸರಿಯಾಗಿ ಬುದ್ಧಿ ಕಲಿಸಲು ಸಾಧ್ಯ.
Published On - 7:04 am, Thu, 3 September 20