75th Independence Day 2021: ಸ್ವಾತಂತ್ರ್ಯೋತ್ಸವಕ್ಕೆ ಹೊಸ ವೆಬ್​​ಸೈಟ್; 360 ಡಿಗ್ರಿ ವಿಆರ್ ವೈಶಿಷ್ಟ್ಯದೊಂದಿಗೆ ಕಾರ್ಯಕ್ರಮ ವೀಕ್ಷಿಸಲು ಅವಕಾಶ

IDC 2021: ಸ್ವಾತಂತ್ರ್ಯ ದಿನದ ಕಾರ್ಯಕ್ರಮಕ್ಕೆ ಸಂಬಂಧಿಸಿದ ಮಾಹಿತಿ, ಪ್ರತಿ ನಿಮಿಷದ ಕಾರ್ಯಕ್ರಮ, ಮಾರ್ಗ ನಕ್ಷೆ, ಪಾರ್ಕಿಂಗ್ ವಿವರಗಳು, ಆರ್‌ಎಸ್‌ವಿಪಿ ಮತ್ತು ಇತರ ಚಟುವಟಿಕೆಗಳ ವಿವರಗಳನ್ನು ತಿಳಿದುಕೊಳ್ಳಲು ನಾಗರಿಕರು ಲಾಗಿನ್ ಮಾಡಬಹುದು.

75th Independence Day 2021: ಸ್ವಾತಂತ್ರ್ಯೋತ್ಸವಕ್ಕೆ ಹೊಸ ವೆಬ್​​ಸೈಟ್; 360 ಡಿಗ್ರಿ ವಿಆರ್ ವೈಶಿಷ್ಟ್ಯದೊಂದಿಗೆ ಕಾರ್ಯಕ್ರಮ ವೀಕ್ಷಿಸಲು ಅವಕಾಶ
ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಬ್ಯಾಂಡ್ ತಾಲೀಮು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 13, 2021 | 11:29 AM

ದೆಹಲಿ: ಭಾರತ ಸರ್ಕಾರವು ಈ ವರ್ಷ 75 ನೇ ಸ್ವಾತಂತ್ರ್ಯ ದಿನಾಚರಣೆಗಾಗಿ (75th Independence Day 2021) ಹೊಸ ವೆಬ್‌ಸೈಟ್ ಅನ್ನು ಅನಾವರಣಗೊಳಿಸಿದೆ. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಕ್ಷಣಾ ಕಾರ್ಯದರ್ಶಿ ಡಾ ಅಜಯ್ ಕುಮಾರ್ ಅವರು ಆಗಸ್ಟ್ 3 ರಂದು ನವದೆಹಲಿಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆ 2021 (IDC 2021), indianidc2021.mod.gov.in ಎಂಬ ವೆಬ್‌ಸೈಟ್ ಅನ್ನು ಅನಾವರಣಗೊಳಿಸಿದ್ದಾರೆ.  ಅಧಿಕೃತ ಸರ್ಕಾರಿ ಪ್ರಕಟಣೆಗಳ ಪ್ರಕಾರ ಈ ವೆಬ್‌ಸೈಟ್ ರಾಷ್ಟ್ರೀಯ ಹಬ್ಬವನ್ನು ಆಚರಿಸಲು ಪ್ರಪಂಚದಾದ್ಯಂತದ ಭಾರತೀಯರನ್ನು ಸಂಪರ್ಕಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಐಡಿಸಿ 2021 ಪ್ಲಾಟ್‌ಫಾರ್ಮ್‌ನ ಮೊಬೈಲ್ ಅಪ್ಲಿಕೇಶನ್ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ. “ಈ ಮಹತ್ವದ ಸಂದರ್ಭವನ್ನು ಆಚರಿಸಲು ಮತ್ತು ಭಾರತೀಯರು ಎಂಬ ಸಾಮಾನ್ಯ ಗುರುತಿನ ಅಡಿಯಲ್ಲಿ ಒಂದಾಗಲು ಜನಸಾಮಾನ್ಯರಲ್ಲಿ ಒಗ್ಗಟ್ಟಿನ ಸಂಸ್ಕೃತಿಯನ್ನು ಅಳವಡಿಸುವ ಉದ್ದೇಶವನ್ನು ವೇದಿಕೆ ಹೊಂದಿದೆ” ಎಂದು ಕುಮಾರ್ ಹೇಳಿದ್ದಾರೆ.

ನವದೆಹಲಿಯ ಕೆಂಪು ಕೋಟೆಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು 360 ಡಿಗ್ರಿ ರೂಪದಲ್ಲಿ ಪ್ರದರ್ಶಿಸಲು ವರ್ಚುವಲ್ ರಿಯಾಲಿಟಿ (ವಿಆರ್) ವೈಶಿಷ್ಟ್ಯವನ್ನು ವೆಬ್‌ಸೈಟ್ ಹೊಂದಿದೆ. ಇದೇ ಮೊದಲ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಭವ್ಯವಾದ ಕೆಂಪು ಕೋಟೆಯಿಂದ ಆಗಸ್ಟ್ 15, 2021 ರಂದು ವರ್ಚುವಲ್ ರಿಯಾಲಿಟಿ (ವಿಆರ್) 360 ಡಿಗ್ರಿ ರೂಪದಲ್ಲಿ ಲೈವ್ ಸ್ಟ್ರೀಮ್ ಆಗಲಿದೆ. ಜನರು ಈ ವೈಶಿಷ್ಟ್ಯವನ್ನು ವಿಆರ್ ಗ್ಯಾಜೆಟ್‌ನೊಂದಿಗೆ ಅಥವಾ ಇಲ್ಲದೆ ಬಳಸಬಹುದು ಎಂದು ಪ್ರಕಟಣೆಯಲ್ಲಿ ಹೇಳಿದೆ.

ವಿಶೇಷ ಐಡಿಸಿ ರೇಡಿಯೋ, ಗ್ಯಾಲರಿ, ಇಂಟರಾಕ್ಟಿವ್ ಫಿಲ್ಟರ್‌ಗಳು, ಶೌರ್ಯ ಕಾರ್ಯಗಳ ಇ-ಪುಸ್ತಕಗಳು, 1971 ರ ವಿಜಯದ 50 ವರ್ಷಗಳು ಮತ್ತು ಸ್ವಾತಂತ್ರ್ಯ ಚಳುವಳಿ, ಯುದ್ಧಗಳು ಮತ್ತು ಯುದ್ಧ ಸ್ಮಾರಕಗಳ ಬ್ಲಾಗ್‌ಗಳಂತಹ ವೈಶಿಷ್ಟ್ಯಗಳು ವೆಬ್​​ಸೈಟ್​​ನಲ್ಲಿದೆ.

ಸ್ವಾತಂತ್ರ್ಯ ದಿನದ ಕಾರ್ಯಕ್ರಮಕ್ಕೆ ಸಂಬಂಧಿಸಿದ ಮಾಹಿತಿ, ಪ್ರತಿ ನಿಮಿಷದ ಕಾರ್ಯಕ್ರಮ, ಮಾರ್ಗ ನಕ್ಷೆ, ಪಾರ್ಕಿಂಗ್ ವಿವರಗಳು, ಆರ್‌ಎಸ್‌ವಿಪಿ ಮತ್ತು ಇತರ ಚಟುವಟಿಕೆಗಳ ವಿವರಗಳನ್ನು ತಿಳಿದುಕೊಳ್ಳಲು ನಾಗರಿಕರು ಲಾಗಿನ್ ಮಾಡಬಹುದು. ಈ ಸಂದರ್ಭವನ್ನು ಗುರುತಿಸಲು ವಿವಿಧ ಸಚಿವಾಲಯಗಳು ಕೈಗೊಂಡ ಎಲ್ಲಾ ಉಪಕ್ರಮಗಳ ಕಾರ್ಯಕ್ರಮ ಕ್ಯಾಲೆಂಡರ್ ಕೂಡ ವೇದಿಕೆಯಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

ವೆಬ್ ಆಧಾರಿತ ಆರ್‌ಎಸ್‌ವಿಪಿ ವ್ಯವಸ್ಥೆಯಡಿಯಲ್ಲಿ ಪ್ರತಿ ಆಹ್ವಾನ ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್ ಅನ್ನು ಅಂಟಿಸಲಾಗುತ್ತದೆ, ಇದನ್ನು ಆಹ್ವಾನಿತರು ಅವರವರ ಸ್ಮಾರ್ಟ್ ಫೋನ್ ಬಳಸಿ ಸ್ಕ್ಯಾನ್ ಮಾಡಬೇಕು. ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವಾಗ, ವೆಬ್ ಲಿಂಕ್ ಅನ್ನು ಕ್ರಿಯೇಟ್ ಆಗುತ್ತದೆ. ಅದರ ಮೂಲಕ ಆಹ್ವಾನಿತರನ್ನು ವೆಬ್ ಪೋರ್ಟಲ್‌ಗೆ ಕನೆಕ್ಟ್ ಆಗುತ್ತದೆ . ಪೋರ್ಟಲ್‌ನಲ್ಲಿ,ಆಹ್ವಾನಿತರು ಸಮಾರಂಭಕ್ಕೆ ಹಾಜರಾಗಲು ತಮ್ಮ ಇಚ್ಛೆಯನ್ನು ಸಲ್ಲಿಸಬಹುದು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರ್, ಐಡಿಸಿ 2021 ರ ಪೂರ್ವದಲ್ಲಿ ಯೋಜಿಸಲಾದ ಹಲವಾರು ಚಟುವಟಿಕೆಗಳ ಬಗ್ಗೆ ವಿವರಿಸಿದ್ದಾರೆ.ಇದರಲ್ಲಿ ಮೌಂಟ್ ಮನಿರಾಂಗ್‌ನಲ್ಲಿ ಮಹಿಳಾ ಪರ್ವತಾರೋಹಣ, 75 ವೈದ್ಯಕೀಯ ಶಿಬಿರಗಳು ಗಡಿ ರಸ್ತೆಗಳ ಸಂಘಟನೆ (ಬಿಆರ್‌ಒ) ಮತ್ತು ನ್ಯಾಷನಲ್ ಕೆಡೆಟ್ ಕಾರ್ಪ್ಸ್ (NCC) ಕೆಡೆಟ್ ಗಳು ದೇಶದಾದ್ಯಂತ 75 ಸ್ಥಳಗಳಲ್ಲಿ ನಡೆಸಿದ ಚಟುವಟಿಕೆಗಳು ಇವೆ.

ಇದನ್ನೂ ಓದಿ:  ಈ ಬಾರಿಯದ್ದು 74ನೇ ಸ್ವಾತಂತ್ರ್ಯೋತ್ಸವವೋ? 75ನೇಯದ್ದೋ?- ಶುರುವಾಗಿದೆ ಹೀಗೊಂದು ಗೊಂದಲ..!

Published On - 11:28 am, Fri, 13 August 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್