ತ್ರಿಶೂಲ್​ ಪರ್ವತದ ಬಳಿ ಹಿಮಪಾತದಲ್ಲಿ ಸಿಲುಕಿ ನಾಪತ್ತೆಯಾದ ಐವರು ನೌಕಾಪಡೆ ಸಿಬ್ಬಂದಿ; ರಕ್ಷಣಾ ಕಾರ್ಯಾಚರಣೆ

| Updated By: Lakshmi Hegde

Updated on: Oct 01, 2021 | 3:49 PM

ಈ ಬಗ್ಗೆ ಭಾರತೀಯ ನೌಕಾಪಡೆ ಪ್ರಕಟಣೆ ಹೊರಡಿಸಿದೆ. 20 ನೌಕಾಪಡೆ ಸಿಬ್ಬಂದಿಯನ್ನೊಳಗೊಂಡ ಪರ್ವತಾರೋಹಿಗಳ ತಂಡ, ಸೆಪ್ಟೆಂಬರ್​ 3ರಂದು ಮುಂಬೈನಿಂದ ದಂಡಯಾತ್ರೆ ಶುರು ಮಾಡಿತ್ತು ಎಂದಿದೆ.

ತ್ರಿಶೂಲ್​ ಪರ್ವತದ ಬಳಿ ಹಿಮಪಾತದಲ್ಲಿ ಸಿಲುಕಿ ನಾಪತ್ತೆಯಾದ ಐವರು ನೌಕಾಪಡೆ ಸಿಬ್ಬಂದಿ; ರಕ್ಷಣಾ ಕಾರ್ಯಾಚರಣೆ
ಹಿಮಪಾತದ ಚಿತ್ರ (ಪಿಟಿಐ)
Follow us on

ಡೆಹ್ರಾಡೂನ್​:  ಭಾರತ ನೌಕಾಪಡೆಯ ಪರ್ವತಾರೋಹಿಗಳ ತಂಡವೊಂದು ಉತ್ತರಾಖಂಡ್​​ನ ತ್ರಿಶೂಲ್​ ಪರ್ವತದ ತುತ್ತತುದಿಯಲ್ಲಿ, ಹಿಮಪಾತ (Avalanche)ದಲ್ಲಿ ಸಿಲುಕಿದೆ.  ಒಟ್ಟು 10 ಮಂದಿ ನೌಕಾಪಡೆ ಸಿಬ್ಬಂದಿ ಹಿಮಪಾತದಲ್ಲಿ ಸಿಲುಕಿ ಅಪಾಯಕ್ಕೀಡಾಗಿದ್ದರು. ಅವರಲ್ಲಿ ಈಗ ಐವರನ್ನು ರಕ್ಷಿಸಲಾಗಿದೆ. ಉಳಿದ ಐವರಿಗಾಗಿ ಹುಡುಕಾಟ ಮುಂದುವರಿದಿದೆ. ಕಾಣೆಯಾಗಿರುವ ಐವರು ನೌಕಾದಳದ ಸಿಬ್ಬಂದಿಯನ್ನು ಹುಡುಕಿ, ರಕ್ಷಣೆ ಮಾಡಲು ಎಸ್​ಡಿಆರ್​ಎಫ್​ ಮತ್ತು ಮೂರೂ ಸಶಸ್ತ್ರಪಡೆಗಳ ಸೈನಿಕರನ್ನು ನಿಯೋಜಿಸಲಾಗಿದೆ.

ಈ ಬಗ್ಗೆ ಭಾರತೀಯ ನೌಕಾಪಡೆ ಪ್ರಕಟಣೆ ಹೊರಡಿಸಿದೆ. 20 ನೌಕಾಪಡೆ ಸಿಬ್ಬಂದಿಯನ್ನೊಳಗೊಂಡ ಪರ್ವತಾರೋಹಿಗಳ ತಂಡ, ಸೆಪ್ಟೆಂಬರ್​ 3ರಂದು ಮುಂಬೈನಿಂದ ದಂಡಯಾತ್ರೆ ಶುರು ಮಾಡಿತ್ತು. ಇಂದು 10 ಜನರ ತಂಡ ಬೆಳಗ್ಗೆಯಿಂದಲೇ ತ್ರಿಶೂಲ್​ ಪರ್ವತ ಹತ್ತಲು ಪ್ರಾರಂಭಿಸಿತ್ತು. ಆದರೆ ಪರ್ವತ ಏರಲು ಶುರುಮಾಡಿದ ಕೆಲವೇ ಕ್ಷಣದಲ್ಲಿ ಹಿಮಪಾತ ಆಗಿದೆ. ಆ ಪ್ರವಾಹದಲ್ಲಿ ನೌಕಾಪಡೆ ಸಿಬ್ಬಂದಿ ಸಿಲುಕಿದ್ದಾರೆ ಎಂದು ತಿಳಿಸಿದೆ. ಹಾಗೇ, 10 ಮಂದಿಯಲ್ಲಿ ಐವರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಉಳಿದ ಐವರಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ನೇವಿ ದೃಢಪಡಿಸಿದೆ.

ಸ್ಥಳಕ್ಕೆ ಈಗ ಭಾರತೀಯ ವಾಯುಸೇನೆಯ ಹೆಲಿಕ್ಯಾಪ್ಟರ್​ ತೆರಳಿದೆ. ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಯೋಧರು ಹೋಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇವರ ಜತೆಗೆ ಉತ್ತರಾಖಂಡ್​ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಕೂಡ ಕೈಜೋಡಿಸಿದೆ ಎಂದು ನೇವಿ ಹೇಳಿದೆ.

ಇದನ್ನೂ ಓದಿ: ವೃದ್ಧಾಶ್ರಮಗಳಿಗೆ ಒದಗಿಸುವ ಅನುದಾನ 25 ಲಕ್ಷದಿಂದ 40 ಲಕ್ಷಕ್ಕೆ ಹೆಚ್ಚಳ: ಸಿಎಂ ಬೊಮ್ಮಾಯಿ ಘೋಷಣೆ

ಭಾರತದ ಕೊವಿಶೀಲ್ಡ್​ ಕೊರೊನಾ ಲಸಿಕೆಗೆ ಮಾನ್ಯತೆ ನೀಡಿದ ಆಸ್ಟ್ರೇಲಿಯಾ ಸರ್ಕಾರ