ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ಯುವತಿಯನ್ನು ಕಟ್ಟಿ ಹಾಕಿ, ಜೀವಂತ ಸಮಾಧಿ ಮಾಡಿದ ಮಾಜಿ ಪ್ರಿಯಕರ: ವರದಿ

|

Updated on: Jul 07, 2023 | 5:16 PM

ತಮ್ಮ ಸಂಬಂಧ ಮುರಿದ ನೋವಿನಿಂದ ಹೊರಬರಲು ಸಾಧ್ಯವಾಗದ ಕಾರಣ ಸಿಂಗ್ ಹತ್ಯೆಗೆ ಯೋಜನೆ ರೂಪಿಸಿದ್ದ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಕೌರ್ ಅವರ ತಾಯಿ ರಶ್ಪಾಲ್ ಪ್ರಕಾರ, ಸಿಂಗ್ ತನ್ನ ಮಗಳ ಬಗ್ಗೆ ಹಿಂದೆ ಬಿದ್ದಿದ್ದ. ಆಕೆ ನೂರು ಬಾರಿ ಈತನನ್ನು ನಿರಾಕರಿಸಿದ್ದಳು.

ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ಯುವತಿಯನ್ನು ಕಟ್ಟಿ ಹಾಕಿ, ಜೀವಂತ ಸಮಾಧಿ ಮಾಡಿದ ಮಾಜಿ ಪ್ರಿಯಕರ: ವರದಿ
ಜಸ್ಮೀನ್ ಕೌರ್
Image Credit source: Twitter/ @ExcellBeth
Follow us on

ದಕ್ಷಿಣ ಆಸ್ಟ್ರೇಲಿಯಾದ (South Australia) ಫ್ಲಿಂಡರ್ಸ್ ರೇಂಜ್ಸ್‌ನಲ್ಲಿ ಭಾರತೀಯ ಮೂಲದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳನ್ನು (nursing student) ಕೇಬಲ್‌ನಿಂದ ಕಟ್ಟಿಹಾಕಿ ಆಕೆಯ ಮಾಜಿ ಗೆಳೆಯ ಜೀವಂತ ಸಮಾಧಿ ಮಾಡಿದ ಪ್ರಕರಣ ಬಗ್ಗೆ ನ್ಯಾಯಾಲಯವು ಬುಧವಾರ ವಿಚಾರಣೆ ನಡೆಸಿದೆ ಎಂದು 9 ನ್ಯೂಸ್ ವರದಿ ಮಾಡಿದೆ. 21 ವರ್ಷದ ಜಸ್ಮೀನ್ ಕೌರ್ ಅವರನ್ನು ಆಕೆಯ ಮಾಜಿ ಬಾಯ್ ಫ್ರೆಂಡ್ ತಾರಿಕ್ಜೋತ್ ಸಿಂಗ್ ಮಾರ್ಚ್ 2021 ರಲ್ಲಿ ಸೇಡಿನ ಕೃತ್ಯ ವೆಸಗಿದ್ದಾನೆ ಎಂದು ಹೇಳಲಾಗಿದೆ. ಈತ ಕೌರ್ ನ್ನು ಹಿಂಬಾಲಿಸಿ, ಅಪಹರಿಸಿ ನಂತರ ಹತ್ಯೆ ಮಾಡಿದ್ದಾನೆ ಎಂದು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ತಿಳಿಸಲಾಯಿತು. ಈ ಕೃತ್ಯವೆಸಗಿದ ನಂತರ ಆತ ಕೌರ್ ಕೊನೆಯದಾಗಿ ಕಾಣಿಸಿಕೊಂಡ ಅಡಿಲೇಡ್‌ನಲ್ಲಿರುವ ಆಕೆಯ ಕೆಲಸದ ಸ್ಥಳದಿಂದ 400 ಕಿ.ಮೀ ದೂರದಲ್ಲಿ ಹೊಂಡ ತೋಡಿ ಆಕೆಯನ್ನು ಹೂತು ಹಾಕಿದ್ದಾನೆ.

ಕೌರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಸಿಂಗ್ ಆರಂಭದಲ್ಲಿ ಆರೋಪವನ್ನು ನಿರಾಕರಿಸಿದ್ದ. ಆದರೆ ಈ ವರ್ಷದ ಫೆಬ್ರವರಿಯಲ್ಲಿ ವಿಚಾರಣೆಗೆ ಹಾಜರಾಗುವ ಮೊದಲು ಕೊಲೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ವರದಿ ಹೇಳಿದೆ.

ತಮ್ಮ ಸಂಬಂಧ ಮುರಿದ ನೋವಿನಿಂದ ಹೊರಬರಲು ಸಾಧ್ಯವಾಗದ ಕಾರಣ ಸಿಂಗ್ ಹತ್ಯೆಗೆ ಯೋಜನೆ ರೂಪಿಸಿದ್ದ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಕೌರ್ ಅವರ ತಾಯಿ ರಶ್ಪಾಲ್ ಪ್ರಕಾರ, ಸಿಂಗ್ ತನ್ನ ಮಗಳ ಬಗ್ಗೆ ಹಿಂದೆ ಬಿದ್ದಿದ್ದ. ಆಕೆ ನೂರು ಬಾರಿ ಈತನನ್ನು ನಿರಾಕರಿಸಿದ್ದಳು.

ಸಿಂಗ್ ಕೌರ್‌ಳನ್ನು ಆಕೆಯ ಕೆಲಸದ ಸ್ಥಳದಿಂದ ಅಪಹರಿಸಿ, ಕಾರಿನ ಹಿಂಬದಿಯಲ್ಲಿ ಹಿಡಿದಿಟ್ಟು ಗಂಟೆಗಟ್ಟಲೆ ವಾಹನ ಚಲಾಯಿಸಿದ್ದಾನ. ಆಕೆಯ ಕಣ್ಣಿಗೆ ಪಟ್ಟಿ ಕಟ್ಟಲಾಗಿತ್ತು, ಕೈಕಾಲುಗಳನ್ನು ಕೇಬಲ್ ಟೈಗಳಿಂದ ಮತ್ತು ಟೇಪ್‌ನಿಂದ ಬಂಧಿಸಲ್ಪಟ್ಟಿತ್ತು. ಆಕೆಯ ಮೃತದೇಹ ಫ್ಲಿಂಡರ್ಸ್ ರೇಂಜ್ಸ್‌ನ ಆಳವಿಲ್ಲದ ಸಮಾಧಿಯಲ್ಲಿ ಕಂಡುಬಂದಿದೆ.

ಇದನ್ನೂ ಓದಿ:ಗಂಡನಿಗೆ ಬಿರಿಯಾನಿಯಲ್ಲಿ ನಿದ್ರೆ ಮಾತ್ರೆ ಹಾಕಿ ನಿದ್ದೆ ಮಾಡಿಸಿದಳು, ಬಳಿಕ ಪ್ರಿಯನಿಗೆ ಕರೆ ಮಾಡಿ ಕರೆಯಿಸಿಕೊಂಡಳು.. ಆಮೇಲೆ !?

ಈ ಅಪರಾಧವು “ಅಸಾಮಾನ್ಯ ಮಟ್ಟದ ಕ್ರೌರ್ಯ” ವನ್ನು ಒಳಗೊಂಡಿದೆ ಎಂದು ಪ್ರಾಸಿಕ್ಯೂಟರ್ ಕಾರ್ಮೆನ್ ಮ್ಯಾಟಿಯೊ ಹೇಳಿದ್ದಾರೆ. ಕೌರ್ ಅವರ ತಾಯಿ ಸೇರಿದಂತೆ ಕೌರ್ ಅವರ ಕುಟುಂಬವು ಈ ಹಿಂದೆ ತನ್ನ ಮಗಳು ತನ್ನ ಅಂತಿಮ ಕ್ಷಣದಲ್ಲಿ ಭಾರೀ ನೋವು ಅನುಭವಿಸಿದ್ದಾಳೆ ಎಂದು ಹೇಳಿದೆ.

ಅಪರಾಧಿ ಸಿಂಗ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಾಲಯ ಹೇಳಿರುವುದಾಗಿ ವರದಿ ತಿಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ