ಕಾಶ್ಮೀರಿ ಪಂಡಿತರ ಕುಟುಂಬದ ಶೆಫಾಲಿ ರಜ್ದಾನ್​ ನೆದರ್​ಲ್ಯಾಂಡ್​ನ ಯುಎಸ್​ ರಾಯಭಾರಿ; ಅಧ್ಯಕ್ಷ ಜೋ ಬೈಡನ್​​ರಿಂದ ನೇಮಕ

| Updated By: Lakshmi Hegde

Updated on: Mar 12, 2022 | 10:59 AM

ಶೆಫಾಲಿಯವರು ಜಮ್ಮು-ಕಾಶ್ಮೀರದ ಕಾಶ್ಮೀರಿ ಪಂಡಿತರ ಕುಟುಂಬಕ್ಕೆ ಸೇರಿದವರು. ಹುಟ್ಟಿದ್ದು ಉತ್ತರಪ್ರದೇಶದ ಹರಿದ್ವಾರದಲ್ಲಿ. ಇವರಿಗೆ ಎರಡು ವರ್ಷವಾಗಿದ್ದಾಗ ಕುಟುಂಬ ಯುಎಸ್​ನ ಪಿಟ್ಸ್‌ಬರ್ಗ್​ಗೆ ಹೋಗಿ ನೆಲೆಸಿತು

ಕಾಶ್ಮೀರಿ ಪಂಡಿತರ ಕುಟುಂಬದ ಶೆಫಾಲಿ ರಜ್ದಾನ್​ ನೆದರ್​ಲ್ಯಾಂಡ್​ನ ಯುಎಸ್​ ರಾಯಭಾರಿ; ಅಧ್ಯಕ್ಷ ಜೋ ಬೈಡನ್​​ರಿಂದ ನೇಮಕ
ಅಧ್ಯಕ್ಷ ಜೋ ಬೈಡನ್​ರೊಂದಿಗೆ ಶೆಫಾಲಿ
Follow us on

ಜೋ ಬೈಡನ್ (Joe Biden)​ ಅಮೆರಿಕ ಅಧ್ಯಕ್ಷರಾದ ಮೇಲೆ ಸರ್ಕಾರದ ಹಲವು ಪ್ರಮುಖ ಹುದ್ದೆಗಳಲ್ಲಿ ಭಾರತೀಯ ಮೂಲದವರಿಗೆ ಅವಕಾಶ ಕೊಟ್ಟಿದ್ದಾರೆ. ಸದ್ಯ ಯುಎಸ್​ನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಕೂಡ ಭಾರತ ಮೂಲದವರೇ. ಇದೀಗ ಜೋ ಬೈಡನ್​ ನೆದರ್​ಲ್ಯಾಂಡ್​ಗೆ ಅಮೆರಿಕದ ರಾಯಭಾರಿ ಹೆಸರನ್ನು ಘೋಷಣೆ ಮಾಡಿದ್ದು, ಅವರೂ ಕೂಡ ಭಾರತ ಮೂಲದ ರಾಜಕೀಯ ಕಾರ್ಯಕರ್ತೆ ಎಂಬುದು ಗಮನಾರ್ಹ ಸಂಗತಿ. ಶೆಫಾಲಿ ರಜ್ದಾನ್ ದುಗ್ಗಲ್ (Shefali Razdan Duggal) (50)ನೆದರ್​ಲ್ಯಾಂಡ್​ನ ಅಮೆರಿಕ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಇವರು ಮೂಲತಃ ಜಮ್ಮು-ಕಾಶ್ಮೀರದವರು.  ಆದರೆ ಪಾಲಕರು  =ಯುಸ್​​ಗೆ ವಲಸೆ ಹೋಗಿದ್ದರಿಂದ ಶೆಫಾಲಿ ಅಲ್ಲಿಯೇ ಬೆಳೆದಿದ್ದಾರೆ. ನ್ಯೂಯಾರ್ಕ್​, ಬಾಸ್ಟನ್​, ಚಿಕಾಗೋಗಳಲ್ಲಿ ವಾಸವಾಗಿದ್ದರು.

ಶುಕ್ರವಾರ ಯುಎಸ್​​ನ ಹಲವು ಪ್ರಮುಖ ರಾಜತಾಂತ್ರಿಕ ಹುದ್ದೆಗಳಿಗೆ ಹೊಸ ನೇಮಕಾತಿ ಮಾಡಲಾಗಿದ್ದು, ಹೆಸರನ್ನು ವೈಟ್​ಹೌಸ್ ಘೋಷಣೆ ಮಾಡಿದೆ. ಅದರಲ್ಲಿ ಪ್ರಮುಖವಾಗಿ ಶೆಫಾಲಿ ರಾಜ್ದನ್​ರನ್ನು ನೆದರ್​ಲ್ಯಾಂಡ್ ರಾಯಭಾರಿಯಾಗಿ ನೇಮಕಮಾಡಲಾಗಿದ್ದು, ಇವರು ಅನುಭವಿ ರಾಜತಾಂತ್ರಿಕರು. ಮಹಿಳಾ ಹಕ್ಕುಗಳ ಪರ ವಕೀಲರು ಮತ್ತು ಮಾನವ ಹಕ್ಕುಗಳ ಪರ ಹೋರಾಟಗಾರರು ಎಂದು ವೈಟ್ ಹೌಸ್ ಹೇಳಿದೆ. ಇಬ್ಬರು ಮಕ್ಕಳ ತಾಯಿಯಾಗಿರುವ ಶೆಫಾಲಿ ಯುನೈಟೆಡ್ ಸ್ಟೇಟ್ಸ್ ಹೋಲೋಕಾಸ್ಟ್ ಮೆಮೋರಿಯಲ್ ಮ್ಯೂಸಿಯಂ ಕೌನ್ಸಿಲ್​ನ ಮಾಜಿ ಅಧ್ಯಕ್ಷರು. ಆ ಸ್ಥಾನಕ್ಕೆ ಹಿಂದಿನ ಅಧ್ಯಕ್ಷ ಬರಾಕ್​ ಒಬಾಮಾರಿಂದ ನೇಮಕಗೊಂಡಿದ್ದರು. ಸದ್ಯ ಪಾಶ್ಚಿಮಾತ್ಯ ಪ್ರಾದೇಶಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಶೆಫಾಲಿಯವರು ಜಮ್ಮು-ಕಾಶ್ಮೀರದ ಕಾಶ್ಮೀರಿ ಪಂಡಿತರ ಕುಟುಂಬಕ್ಕೆ ಸೇರಿದವರು. ಹುಟ್ಟಿದ್ದು ಉತ್ತರಪ್ರದೇಶದ ಹರಿದ್ವಾರದಲ್ಲಿ. ಇವರಿಗೆ ಎರಡು ವರ್ಷವಾಗಿದ್ದಾಗ ಕುಟುಂಬ ಯುಎಸ್​ನ ಪಿಟ್ಸ್‌ಬರ್ಗ್​ಗೆ ಹೋಗಿ ನೆಲೆಸಿತು. ಅದಾದ ಬಳಿಕ 5ನೇ ವರ್ಷದಲ್ಲಿದ್ದಾಗ ಒಹಿಯೋದ ಸಿನ್ಸಿನಾಟಿಗೆ ತೆರಳಿ ನೆಲೆಸಿದರು. ಸೈಕಾಮೋರ್ ಹೈಸ್ಕೂಲ್​​ನಲ್ಲಿ ಮಾಧ್ಯಮಿಕ ಶಿಕ್ಷಣ ಕಲಿತು, ಒಹಿಯೋದ ಮೈಮಿ ಯೂನಿವರ್ಸಿಟಿಯಲ್ಲಿ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅದಾದ ಬಳಿಕ ನ್ಯೂಯಾರ್ಕ್​ಗೆ ತೆರಳಿದ್ದಾರೆ. ನಂತರ ಡೆಮಾಕ್ರಟಿಕ್​ ಪಕ್ಷದಲ್ಲಿ ರಾಜಕೀಯ ವೃತ್ತಿಯಲ್ಲಿ ತೊಡಗಿಕೊಂಡರು. ಇವರು ಹ್ಯೂಮನ್​ ರೈಟ್ಸ್​ ವಾಚ್​​ನ ಸ್ಯಾನ್​ ಫ್ರಾನ್ಸಿಸ್ಕೋ ಸಮಿತಿಯ ಸದಸ್ಯರು, ವೇಕ್​ ಫಾರೆಸ್ಟ್​ ಯೂನಿವರ್ಸಿಟಿ ಲೀಡರ್​ಶಿಪ್​ ಮತ್ತು ಕ್ಯಾರೆಕ್ಟರ್​ ಕೌನ್ಸಿಲ್​ ಸದಸ್ಯರೂ ಆಗಿದ್ದರು. ಹೀಗೆ ಹಲವು ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿ ಅನುಭವ ಉಳ್ಳ ಇವರು,  ಬರಾಕ್​ ಒಬಾಮಾ, ಹಿಲರಿ ಕ್ಲಿಂಟನ್​​ ಅವರ ಜತೆಗೂ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ನೀಟ್ ನಿಷೇಧಕ್ಕೆ ಆಗ್ರಹಿಸಿ ಟ್ವಿಟರ್​ನಲ್ಲಿ ಕರವೇ ಅಭಿಯಾನ: 35 ಸಾವಿರ ಟ್ವೀಟ್

Published On - 10:38 am, Sat, 12 March 22