ಟ್ರಂಪ್ ಟ್ವಿಟ್ಟರ್ ಖಾತೆ ರದ್ದುಗೊಳಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಇದೇ ಮಹಿಳೆ! ಪ್ರಕ್ರಿಯೆ ಹೇಗಿತ್ತು ಗೊತ್ತಾ?
ಟ್ರಂಪ್ ಟ್ವಿಟರ್ ಖಾತೆ ರದ್ದಾದ ಬಗ್ಗೆ ಟ್ವೀಟ್ ಮಾಡಿರುವ ವಿಜಯಾ, ಹಿಂಸಾಚಾರ ಹೆಚ್ಚುವ ಭೀತಿ ಎದುರಾದ್ದರಿಂದ @realDonaldTrump ಖಾತೆಯನ್ನು ಟ್ವಿಟ್ಟರ್ ರದ್ದು ಮಾಡಿದೆ. ಎಂದಿದ್ದಾರೆ.
ವಾಷಿಂಗ್ಟನ್: ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ರದ್ದು ಮಾಡಲಾಗಿದೆ. ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಭಾರತ ಮೂಲದ ಮಹಿಳೆ ಅನ್ನೋದು ವಿಶೇಷ.
ಅಹಿಂಸೆ, ಗಲಭೆ, ಅಶ್ಲೀಲ ಮತ್ತಿತ್ಯಾದಿ ಕೆಲ ಸೂಕ್ಷ್ಮ ವಿಚಾರಗಳನ್ನು ಪ್ರಚೋದಿಸುವ ಪೋಸ್ಟ್ಗಳನ್ನು ಟ್ವಿಟ್ಟರ್ ಸಹಿಸುವುದಿಲ್ಲ. ಹೀಗಾಗಿ, ಅಂಥ ಪೋಸ್ಟ್ಗಳಿದ್ದರೆ ಅದನ್ನು ಟ್ವಿಟ್ಟರ್ ಡಿಲೀಟ್ ಮಾಡುತ್ತದೆ. ಅದು ಮಿತಿ ಮೀರಿದರೆ, ಟ್ವಿಟ್ಟರ್ ಖಾತೆಯನ್ನೇ ರದ್ದು ಮಾಡುತ್ತದೆ. ಈಗ ಟ್ರಂಪ್ ವಿಚಾರದಲ್ಲೂ ಇದೇ ನಿರ್ಧಾರ ತೆಗೆದುಕೊಂಡಿದೆ. ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಟ್ರಂಪ್ ಟ್ವೀಟ್ ಪ್ರಚೋದನೆ ನೀಡಿತ್ತು. ಹೀಗಾಗಿ, ಅವರ ಅಧಿಕೃತ ಖಾತೆಯನ್ನೇ ಟ್ವಿಟ್ಟರ್ ಡಿಲೀಟ್ ಮಾಡಿದೆ.
ಈ ನಿರ್ಧಾರ ತೆಗೆದುಕೊಂಡಿದ್ದು ಭಾರತ ಮೂಲದ ಅಮೆರಿಕ ನಿವಾಸಿ ವಿಜಯಾ ಗಡ್ಡೆ. ಇವರು ಟ್ವಿಟರ್ನ ಕಾನೂನು, ನೀತಿ ಮತ್ತು ಸುರಕ್ಷತೆ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ವಿಜಯಾ ನೇತೃತ್ವದಲ್ಲಿ ಶನಿವಾರ ನಡೆದ ಸಭೆ ವೇಳೆ ಟ್ರಂಪ್ ಖಾತೆಯನ್ನು ರದ್ದು ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿಜಯಾ, ಹಿಂಸಾಚಾರ ಹೆಚ್ಚುವ ಭೀತಿ ಎದುರಾದ್ದರಿಂದ @realDonaldTrump ಖಾತೆಯನ್ನು ರದ್ದು ಮಾಡುವುದು ಟ್ವಿಟ್ಟರ್ಗೆ ಅನಿವಾರ್ಯವಾಯಿತು ಎಂದಿದ್ದಾರೆ.
ಮೊದಲು ಎಚ್ಚರಿಕೆ ನೀಡಲಾಯಿತು. ಆನಂತರ ಅಹತ್ಯವಾಗಿ ಟ್ವಿಟ್ಟರ್ ಸಂಸ್ಥೆ ಸಭೆ ನಡೆಸಿ, ಸರ್ವಾನುಮತದಿಂದ ನಿರ್ಣಯ ತೆಗೆದುಕೊಂಡಿತು. ಅದಕ್ಕೆ ಅಗತ್ಯವಿರುವ ಕಾನೂನುಗಳನ್ನು ಸಭೆಗೆ ಮನದಟ್ಟುಪಡಿಸಲಾಯಿತು ಎಂದು ವಿಜಯಾ ವಿವರಿಸಿದ್ದಾರೆ.
ಯಾರಿದು ವಿಜಯಾ? ವಿಜಯಾ ಹುಟ್ಟಿದ್ದು ಹೈದರಾಬಾದಿನಲ್ಲಿ. ಚಿಕ್ಕವರಿದ್ದಾಗಲೇ ಅವರು ಅಮೆರಿಕದ ಟೆಕ್ಸಾಸ್ ನಗರಕ್ಕೆ ವಲಸೆ ಹೋಗಿದ್ದರು. ಮೆಕ್ಸಿಕೋದಲ್ಲಿ ಇವರ ತಂದೆ ರಾಸಾಯನಿಕ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ವಿಜಯಾ ಕಾನೂನು ಅಭ್ಯಾಸ ಪೂರ್ಣಗೊಳಿಸಿದ್ದಾರೆ. ಪ್ರತಿಷ್ಠಿತ ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯ ಕಾನೂನು ಶಾಲೆಯಲ್ಲಿ ಪದವಿ ಮುಗಿಸಿದ ಅವರು, 10 ವರ್ಷಗಳ ಕಾಲ ಟೆಕ್ ಸ್ಟಾರ್ಟ್ಅಪ್ನಲ್ಲಿ ಕಾನೂನು ಸಲಹೆ ನೀಡುವ ಕೆಲಸ ಮಾಡಿದ್ದರು. 2011ರಲ್ಲಿ ವಿಜಯಾ ಟ್ವಿಟರ್ಗೆ ಸೇರ್ಪಡೆ ಆಗಿದ್ದರು.
ಟ್ವಿಟ್ಟರ್ ನೀತಿಗಳನ್ನು ರೂಪಿಸುವಲ್ಲಿ, ಅಗತ್ಯವಿದ್ದಾಗ ಅದನ್ನು ಬದಲಾಯಿಸುವಲ್ಲಿ ವಿಜಯಾ ಅವರ ದೂರದೃಷ್ಟಿ ತುಂಬಾನೇ ಸಹಕಾರಿಯಾಗಿದೆ. ಇನ್ನು, ಅಮೆರಿಕದ ಸಾಕಷ್ಟು ಮಾಧ್ಯಮಗಳು ವಿಜಯಾ ಅವರ ಕಾರ್ಯವನ್ನು ಶ್ಲಾಘಿಸಿವೆ. ಇನ್ಸ್ಟೈಲ್ ಹೆಸರಿನ ಮ್ಯಾಗಜಿನ್ 2020ರಲ್ಲಿ ವಿಶ್ವವನ್ನೇ ಬದಲಿಸಿದ 50 ಮಹಿಳೆಯರ ಪಟ್ಟಿ ಬಿಡುಗಡೆ ಮಾಡಿತ್ತು. ಇದರಲ್ಲಿ ವಿಜಯಾ ಹೆಸರು ಕೂಡ ಇತ್ತು.
The account of @realDonaldTrump has been permanently suspended from Twitter due to the risk of further violence. We've also published our policy enforcement analysis – you can read more about our decision here: https://t.co/fhjXkxdEcw
— Vijaya Gadde (@vijaya) January 8, 2021
Published On - 1:14 pm, Mon, 11 January 21