Indian Railway: ಭಾರತೀಯ ರೈಲ್ವೆ ಇಲಾಖೆಯಿಂದ 740 ರೈಲುಗಳ ಸಂಚಾರ ರದ್ದು

ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ನಡುವೆ ಕಾರ್ಯನಿರ್ವಹಿಸುವ 740 ರೈಲುಗಳು ರದ್ದಾಗಿವೆ.

Indian Railway: ಭಾರತೀಯ ರೈಲ್ವೆ ಇಲಾಖೆಯಿಂದ 740 ರೈಲುಗಳ ಸಂಚಾರ ರದ್ದು
ಸಾಂದರ್ಭಿಕ ಚಿತ್ರ
Updated By: ಸುಷ್ಮಾ ಚಕ್ರೆ

Updated on: Jan 10, 2022 | 12:38 PM

ನವದೆಹಲಿ: ಚಳಿಗಾಲದ ಅವಧಿಯಲ್ಲಿ ಮಂಜು ಮುಸುಕಿರುವುದರಿಂದ ಹಾಗೂ ಕಾರ್ಯಾಚರಣೆಯ ಕಾರಣಗಳಿಂದಾಗಿ ಭಾರತೀಯ ರೈಲ್ವೆ ಇಲಾಖೆ 740 ರೈಲುಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ. ರದ್ದಾಗಲಿರುವ ರೈಲುಗಳು ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಅಸ್ಸಾಂ ರಾಜ್ಯಗಳಲ್ಲಿ ಚಲಿಸುವ ರೈಲುಗಳಾಗಿವೆ. 2021ರ ಡಿಸೆಂಬರ್​ನಲ್ಲಿ ಪಶ್ಚಿಮ ರೈಲ್ವೆ ವಿಭಾಗ ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್​ ರಾಜ್ಯಗಳಲ್ಲಿ 6 ಜೋಡಿ ವಿಶೇಷ ರೈಲುಗಳನ್ನು 3 ತಿಂಗಳ ಅವಧಿಗೆ ಅಂದರೆ 2022ರ ಫೆಬ್ರವರಿ ಅಂತ್ಯದವರೆಗೆ ರದ್ದುಗೊಳಿಸುವುದಾಗಿ ಘೋಷಿಸಿತ್ತು. ಅದರ ಬೆನ್ನಲ್ಲೇ ರೈಲ್ವೆ ಇಲಾಖೆಯಿಂದ 740 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ರದ್ದಾಗುವ ಮತ್ತು ರದ್ದಾಗಿರುವ ರೈಲುಗಳ ಬಗ್ಗೆ ಮಾಹಿತಿಗಾಗಿ ಪ್ರಯಾಣಿಕರು ಈ ಲಿಂಕ್ ಮೇಲೆ ಕ್ಲಿಕ್ ಮಾಡಬಹುದು. ಅಥವಾ NTES ಆ್ಯಪ್ ಮೂಲಕವೂ ಮಾಹಿತಿಗಳನ್ನು ಪಡೆಯಬಹುದು ಎಂದು ರೈಲ್ವೆ ಅಧಿಕಾರಿಗಳು ಸೂಚಿಸಿದ್ದಾರೆ. ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ನಡುವೆ ಕಾರ್ಯನಿರ್ವಹಿಸುವ ರೈಲುಗಳು ರದ್ದಾಗಿವೆ. ಒಂದುವೇಳೆ ನೀವು IRCTC ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಿದ್ದರೆ, ಆ ರೈಲುಗಳು ರದ್ದಾಗಿದ್ದರೆ ನೀವು ನಿಮ್ಮ ಇ-ಟಿಕೆಟ್ ಅನ್ನು ರದ್ದುಮಾಡಬೇಕಾದ ಅಗತ್ಯವಿಲ್ಲ. ರದ್ದಾಗಿರುವ ರಲ್ಲ ರೈಲುಗಳ ಪ್ರಯಾಣಿಕರ ಟಿಕೆಟ್ ಆಟೋಮ್ಯಾಟಿಕ್ ಆಗಿ ರದ್ದಾಗಲಿದ್ದು, ನಿಮ್ಮ ಖಾತೆಗೆ ಟಿಕೆಟ್​ನ ಮೊತ್ತ ಜಮಾ ಆಗುತ್ತದೆ ಎಂದು ನ್ಯೂಸ್​ 18 ವರದಿ ಮಾಡಿದೆ.

ನೀವು PRS ಕೌಂಟರ್ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಿದ್ದರೆ, ನೀವು PRS ಕೌಂಟರ್‌ಗೆ ಭೇಟಿ ನೀಡುವ ಮೂಲಕ ಮತ್ತು ಸಂಬಂಧಿತ ಫಾರ್ಮ್ ಭರ್ತಿ ಮಾಡುವ ಮೂಲಕ ಟಿಕೆಟ್​ನ ಹಣ ವಾಪಾಸ್ ಪಡೆಯಬಹುದು ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಮರು ಅಭಿವೃದ್ಧಿಪಡಿಸಿದ ನಿಲ್ದಾಣಗಳಲ್ಲಿ ಹತ್ತಲು, ಇಳಿಯಲು ವಿಧಿಸಲಿದೆ ರೈಲ್ವೆ ಶುಲ್ಕ

ಹೊಸ ವರ್ಷಕ್ಕೆ ಗುಡ್ ನ್ಯೂಸ್; ಚಿಕ್ಕಮಗಳೂರು-ಬೆಂಗಳೂರು ರೈಲು ಪುನರಾರಂಭಕ್ಕೆ ಕೇಂದ್ರ ಸರ್ಕಾರ ಸೂಚನೆ