AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಂದೇ ಭಾರತ್ ರೈಲು ಸೇರಿದಂತೆ ಹಲವು ಎಸಿ ರೈಲುಗಳ ಟಿಕೆಟ್ ದರ ಇಳಿಕೆ

ಟಿಕೆಟ್‌ನ ಮೂಲ ದರದ ಮೇಲೆ ಗರಿಷ್ಠ ಶೇ 25  ರಿಯಾಯಿತಿ ಅನ್ವಯಿಸುತ್ತದೆ. ರಿಸರ್ವೇಶನ್ ಶುಲ್ಕಗಳು, ಸೂಪರ್ ಫಾಸ್ಟ್ ಸರ್‌ಚಾರ್ಜ್ ಮತ್ತು ಜಿಎಸ್‌ಟಿಯಂತಹ ಇತರ ಶುಲ್ಕಗಳನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ.

ವಂದೇ ಭಾರತ್ ರೈಲು ಸೇರಿದಂತೆ ಹಲವು ಎಸಿ ರೈಲುಗಳ ಟಿಕೆಟ್ ದರ ಇಳಿಕೆ
ವಂದೇ ಭಾರತ್
ರಶ್ಮಿ ಕಲ್ಲಕಟ್ಟ
|

Updated on:Jul 08, 2023 | 5:14 PM

Share

ಕಳೆದ 30 ದಿನಗಳಲ್ಲಿ ಶೇಕಡಾ 50 ಕ್ಕಿಂತ ಕಡಿಮೆ ಆಸನ ಭರ್ತಿಯಾಗಿರುವ ಎಸಿ ರೈಲುಗಳಲ್ಲಿ (AC train) ರಿಯಾಯಿತಿ ದರದ ಯೋಜನೆಯನ್ನು ಪರಿಚಯಿಸಲು ರೈಲ್ವೇ ಸಚಿವಾಲಯವು (Railway ministry), ರೈಲ್ವೆ ವಲಯಗಳನ್ನು ಕೇಳಿದೆ. ರೈಲುಗಳಲ್ಲಿ  ಸೌಕರ್ಯಗಳ ಬಳಕೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ ಈ ಯೋಜನೆಯನ್ನು ಪರಿಚಯಿಸಲು ವಲಯ ರೈಲ್ವೆಗಳಿಗೆ ಅಧಿಕಾರವನ್ನು ನಿಯೋಜಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.ಅಂತಹ ರೈಲುಗಳ ಮೇಲಿನ ರಿಯಾಯಿತಿಯು ತಕ್ಷಣವೇ ಜಾರಿಗೆ ಬರುವಂತೆ ಅನ್ವಯಿಸುತ್ತದೆ. ಆದರೆ ಈಗಾಗಲೇ ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಿದ ಪ್ರಯಾಣಿಕರು ಯಾವುದೇ ಮರುಪಾವತಿಯನ್ನು ಪಡೆಯುವುದಿಲ್ಲ.

ಹೊಸ ರಿಯಾಯಿತಿ ಯೋಜನೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ

  1. ಈ ಯೋಜನೆಯು ಅನುಭೂತಿ ಮತ್ತು ವಿಸ್ಟಾಡೋಮ್ ಕೋಚ್‌ಗಳನ್ನು ಒಳಗೊಂಡಂತೆ AC ಕುಳಿತುಕೊಳ್ಳುವ ಸೌಕರ್ಯಗಳೊಂದಿಗೆ ಎಲ್ಲಾ ರೈಲುಗಳ AC ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ತರಗತಿಗಳಲ್ಲಿ ಮಾತ್ರ ಅನ್ವಯಿಸುತ್ತದೆ.
  2. ಟಿಕೆಟ್‌ನ ಮೂಲ ದರದ ಮೇಲೆ ಗರಿಷ್ಠ ಶೇ 25  ರಿಯಾಯಿತಿ ಅನ್ವಯಿಸುತ್ತದೆ. ರಿಸರ್ವೇಶನ್ ಶುಲ್ಕಗಳು, ಸೂಪರ್ ಫಾಸ್ಟ್ ಸರ್‌ಚಾರ್ಜ್ ಮತ್ತು ಜಿಎಸ್‌ಟಿಯಂತಹ ಇತರ ಶುಲ್ಕಗಳನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ.
  3. ಇದರರ್ಥ ಕಳೆದ 30 ದಿನಗಳಲ್ಲಿ 50% ಕ್ಕಿಂತ ಕಡಿಮೆ ಆಸನ ಭರ್ತಿ ಕಂಡ ವಂದೇ ಭಾರತ್ ರೈಲುಗಳಿಗೆ ಬುಕಿಂಗ್ ಮಾಡುವ ಪ್ರಯಾಣಿಕರು ಮೂಲ ದರದಲ್ಲಿ 25% ವರೆಗೆ ರಿಯಾಯಿತಿ ಪಡೆಯಬಹುದು.
  4. ರಿಯಾಯಿತಿಯು ಎಂಡ್ ಟು ಎಂಡ್ ಪ್ರಯಾಣಕ್ಕೆ ಮಾತ್ರ ಅನ್ವಯಿಸುತ್ತದೆ. ಈ ವಿಭಾಗದಲ್ಲಿ 50% ಕ್ಕಿಂತ ಕಡಿಮೆ ಆಕ್ಯುಪೆನ್ಸಿಯನ್ನು ಇರುವ ನಂತರದ ವಿಭಾಗಗಳಿಗೂ ಅನ್ವಯಿಸುತ್ತದೆ.
  5. ರಿಯಾಯಿತಿ ಯೋಜನೆಯನ್ನು ಗರಿಷ್ಠ ಆರು ತಿಂಗಳವರೆಗೆ ಜಾರಿಗೊಳಿಸಲಾಗುವುದು, ರಿಯಾಯಿತಿ ದರವನ್ನು ಆ ಅವಧಿಯ ನಡುವಿನ ಬೇಡಿಕೆ  ಆಧಾರದ ಮೇಲೆ ತಿಂಗಳವಾರು ಅಥವಾ ವಾರದ ದಿನಗಳು/ವಾರಾಂತ್ಯಗಳಿಗೆ ನೀಡಬಹುದು.
  6. ಯೋಜನೆಯನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ. ಸೀಟು ಎಷ್ಟು ಭರ್ತಿ ಆಗುತ್ತದೆ ಎಂಬ ಆಧಾರದ ಮೇಲೆ ಮಾರ್ಪಡಿಸಬಹುದು,ವಿಸ್ತರಿಸಬಹುದು ಅಥವಾ ಹಿಂತೆಗೆದುಕೊಳ್ಳಬಹುದು ಎಂದು ಸಚಿವಾಲಯ ತಿಳಿಸಿದೆ.
  7. ಫ್ಲೆಕ್ಸಿ ದರ ಯೋಜನೆಗಳನ್ನು ಹೊಂದಿರುವ ರೈಲುಗಳಿಗೆ, ರೈಲ್ವೇಯು ಆರಂಭದಲ್ಲಿ ಕಡಿಮೆ ಆಕ್ಯುಪೆನ್ಸಿ ಹೊಂದಿರುವ ನಿರ್ದಿಷ್ಟ ವರ್ಗದಿಂದ ಫ್ಲೆಕ್ಸಿ ಯೋಜನೆಯನ್ನು ಹಿಂತೆಗೆದುಕೊಳ್ಳುತ್ತದೆ. ಸೀಟು ಹೆಚ್ಚಳಕ್ಕೆ ಇದು ಕಾರಣವಾಗದಿದ್ದಾಗ ಮಾತ್ರ ಇಲ್ಲಿ ರಿಯಾಯಿತಿ ಯೋಜನೆಯನ್ನು ಅನ್ವಯಿಸುತ್ತದೆ.
  8. ಈ ಯೋಜನೆಯು ರಜಾದಿನಗಳು ಅಥವಾ ಹಬ್ಬದ ವಿಶೇಷಗಳೆಂದು ಪರಿಚಯಿಸಲಾದ ವಿಶೇಷ ರೈಲುಗಳಲ್ಲಿ ಅನ್ವಯಿಸುವುದಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:49 pm, Sat, 8 July 23