ಬಾಂಗ್ಲಾದೇಶಕ್ಕೆ ಆಮ್ಲಜನಕ ಸರಬರಾಜು ಪೂರೈಕೆಗೆ ಭಾರತೀಯ ರೈಲ್ವೆ ನಿರ್ಧಾರ
ಬಾಂಗ್ಲಾದೇಶಕ್ಕೆ 200 ಮೆಟ್ರಿಕ್ ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು (Liquid Medical Oxygen - LMO) ಮೊದಲ ಹಂತದಲ್ಲಿ ಸರಬರಾಜು ಮಾಡಲು ಸಿದ್ಧತೆಗಳು ಪೂರ್ಣಗೊಂಡಿವೆ.
ದೆಹಲಿ: ಭಾರತೀಯ ರೈಲ್ವೆಯ ಆಕ್ಸಿಜನ್ ಎಕ್ಸ್ಪ್ರೆಸ್ ಸೇವೆಗಳು ಬಾಂಗ್ಲಾದೇಶಕ್ಕೂ ವಿಸ್ತರಣೆಯಾಗಲಿವೆ. ಬಾಂಗ್ಲಾದೇಶಕ್ಕೆ 200 ಮೆಟ್ರಿಕ್ ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು (Liquid Medical Oxygen – LMO) ಮೊದಲ ಹಂತದಲ್ಲಿ ಸರಬರಾಜು ಮಾಡಲು ಸಿದ್ಧತೆಗಳು ಪೂರ್ಣಗೊಂಡಿವೆ.
ಕಳೆದ ಜುಲೈ 24ರಂದು ಟಾಟಾ ಕಂಪನಿಗೆ ದಕ್ಷಿಣ ಪೂರ್ವ ರೈಲ್ವೆ ವಿಭಾಗದ ಚಕ್ರಧರಪುರ ವಿಭಾಗವು ಈ ಸಂಬಂಧ ಇಂಡೆಂಟ್ ನೀಡಿದೆ. 200 ಮೆಟ್ರಿಕ್ ಟನ್ ಆಮ್ಲಜನಕವನ್ನು ಬಾಂಗ್ಲಾದೇಶದ ಬೆನಾಪೊಲ್ಗೆ ರವಾನಿಸಬೇಕೆಂಬ ಬೇಡಿಕೆ ಬಂದಿದೆ.
ಕಳೆದ ಏಪ್ರಿಲ್ 24ರಿಂದ ಭಾರತೀಯ ರೈಲ್ವೆಯು ಆಕ್ಸಿಜನ್ ಎಕ್ಸ್ಪ್ರೆಸ್ ಸೇವೆಯನ್ನು ನಿರ್ವಹಿಸುತ್ತಿದೆ. ಈ ಮೂಲಕ ಆಕ್ಸಿಜನ್ ಸಿಲಿಂಡರ್ಗಳನ್ನು ದೇಶದ ಉದ್ದಗಲಕ್ಕೂ ವಿವಿಧ ನಗರಗಳಿಗೆ ರೈಲ್ವೆ ಸರಬರಾಜು ಮಾಡಿತ್ತು. ಕೊರೊನಾ ವೈರಸ್ ಸೋಂಕಿನ 2ನೇ ಅಲೆ ವ್ಯಾಪಕವಾಗಿದ್ದಾಗ ಹಲವು ರಾಜ್ಯಗಳಲ್ಲಿ ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆ ಕಂಡುಬಂದಿತ್ತು. 15 ರಾಜ್ಯಗಳಲ್ಲಿ 480 ಆಕ್ಸಿಜನ್ ಎಕ್ಸ್ಪ್ರೆಸ್ ರೈಲುಗಳ ಮೂಲಕ 35,000 ಮೆಟ್ರಿಕ್ ಟನ್ ಆಮ್ಲಜನಕ ಸರಬರಾಜು ಮಾಡಲಾಗಿತ್ತು.
(Indian Railways Oxygen Express To ship Medical Oxygen To Bangladesh)
ಇದನ್ನೂ ಓದಿ: 1,500 ಕ್ಕೂ ಹೆಚ್ಚು ಪಿಎಸ್ಎ ಆಮ್ಲಜನಕ ಸ್ಥಾವರಗಳ ಸ್ಥಾಪನೆ; ಆಕ್ಸಿಜನ್ ಪೂರೈಕೆ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದ ಮೋದಿ