ಕೊರೊನಾ ಸೋಂಕು ಕಾಣಿಸಿಕೊಂಡ ನಂತರದಲ್ಲಿ ಎಲ್ಲಾ ಕಡೆಗಳಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಕಟ್ಟು ನಿಟ್ಟಿನ ನಿರ್ದೇಶನ ನೀಡಿದೆ. ಇನ್ನು ಹಣ ಪಾವತಿ ಮಾಡಲು ಅನೇಕ ಕಡೆಗಳಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ಆಫ್ಲೈನ್ಗಿಂತ ಆನ್ಲೈನ್ ಮೂಲಕವೇ ವ್ಯವಹಾರ ಮಾಡಲು ಬೇಕಾಗುವ ಅಗತ್ಯ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ. ಈ ಮಧ್ಯೆ ಇಂಡಿಯನ್ ರೈಲ್ವೆ ಕೂಡ ಆನ್ಲೈನ್ ಟಿಕೆಟ್ ಬುಕ್ಕಿಂಗ್ಗೆ ಹೆಚ್ಚು ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಸಾಮಾನ್ಯ ಬೋಗಿಯ ಟಿಕೆಟ್ ಬುಕ್ ಮಾಡಲು UTS ಆ್ಯಪ್ ಅನ್ನು ಮತ್ತೆ ಆ್ಯಕ್ಟಿವೇಟ್ ಮಾಡಿದೆ.
ಬುಕಿಂಗ್ ಕೌಂಟರ್ಗಳಲ್ಲಿ ಟಿಕೆಟ್ ಪಡೆಯಲು ಕೆಲವೊಮ್ಮೆ ನೂಕು ನುಗ್ಗಲು ಉಂಟಾಗುತ್ತದೆ. ಈ ರೀತಿ ಆಗದಂತೆ ನೋಡಿಕೊಳ್ಳಲು ಈ ಆ್ಯಪ್ ಸಹಕಾರಿ. ಏಕೆಂದರೆ, ಸಾಮಾನ್ಯ ಬೋಗಿಗಳ ಟಿಕೆಟ್‌ಗಳನ್ನು ನೀವು ಈ ಆ್ಯಪ್ ಮೂಲಕವೇ ಖರೀದಿಸಬಹುದು. ಹೀಗಾಗಿ, ಸರತಿ ಸಾಲಿನಲ್ಲಿ ನಿಲ್ಲಬೇಕು ಎನ್ನುವ ಗೋಳು ತಪ್ಪುತ್ತದೆ.
ಕೊರೊನಾ ವೈರಸ್ ಬರುವುದಕ್ಕೂ ಮದೊಲು ಈ ಸೇವೆ ಚಾಲ್ತಿಯಲ್ಲಿತ್ತು. ಆದರೆ, ಕೊರೊನಾದಿಂದ ಉಂಟಾದ ಲಾಕ್ಡೌನ್ ವೇಳೆ ರೈಲು ಸೇವೆ ಸಂಪೂರ್ಣವಾಗಿ ನಿಂತಿತ್ತು. ಈಗೆ ರೈಲುಗಳ ಓಡಾಟ ಪುನಃ ಆರಂಭವಾಗಿದೆ. ಹೀಗಾಗಿ ಈ ಸೇವೆಯನ್ನು ಮತ್ತೆ ಆರಂಭಿಸಲಾಗಿದೆ.
ಏನು ಮಾಡಬೇಕು?
ಇದನ್ನೂ ಓದಿ: KPSC 2021 FDA Admit Card: ಎಫ್ಡಿಎ ಹಾಲ್ ಟಿಕೆಟ್ ಬಿಡುಗಡೆ; ಆನ್ಲೈನ್ನಲ್ಲಿ ಡೌನ್ ಮಾಡೋದು ಹೇಗೆ? ಇಲ್ಲಿದೆ ವಿವರ