ಭಾರತ್ ಗೌರವ್ ಯೋಜನೆಯಡಿಯಲ್ಲಿ ದೇಶದ ಮೊದಲ ಖಾಸಗಿ ರೈಲು ಸೇವೆ ಆರಂಭ

ಭಾರತ ಗೌರವ್ ರೈಲು ಕೊಯಮತ್ತೂರು (Coimbatore) ಉತ್ತರದಿಂದ ಸಾಯಿನಗರ ಶಿರಡಿಗೆ 14 ಜೂನ್ 2022 ರಂದು (ಮಂಗಳವಾರ) 18:00 ಗಂಟೆಗೆ  ಹೊರಟಿದ್ದು ತಿರುಪ್ಪೂರ್, ಈರೋಡ್, ಸೇಲಂ, ಯಲಹಂಕ, ಧರ್ಮಾವರಂ, ಮಂತ್ರಾಲಯ ರಸ್ತೆ ಮತ್ತು ವಾಡಿ ಸ್ಟೇಷನ್ ಗಳಲ್ಲಿ ನಿಲುಗಡೆಯೊಂದಿಗೆ 16 ಜೂನ್ 2022 ರಂದು...

ಭಾರತ್ ಗೌರವ್ ಯೋಜನೆಯಡಿಯಲ್ಲಿ ದೇಶದ ಮೊದಲ ಖಾಸಗಿ ರೈಲು ಸೇವೆ ಆರಂಭ
ಭಾರತ್ ಗೌರವ್ ರೈಲು
TV9kannada Web Team

| Edited By: Rashmi Kallakatta

Jun 16, 2022 | 8:16 AM

ದೆಹಲಿ: ಭಾರತೀಯ ರೈಲ್ವೆಯ ದಕ್ಷಿಣ ರೈಲ್ವೇ ವಲಯವು (Southern Railway zone) ತಮಿಳುನಾಡಿನ ಕೊಯಮತ್ತೂರಿನಿಂದ ಮಹಾರಾಷ್ಟ್ರದ ಶಿರಡಿಗೆ ಖಾಸಗಿಯಾಗಿ ನಡೆಸುವ ಭಾರತ್ ಗೌರವ್ ರೈಲುಗಳ (Bharat Gaurav Trains) ಮೊದಲ ಸೇವೆಯನ್ನು ಪ್ರಾರಂಭಿಸಿದ್ದು ಈ ರೈಲು ಇಂದು ಗಮ್ಯ ತಲುಪಿದೆ. “ಭಾರತ ಗೌರವ್ ರೈಲು ಕೊಯಮತ್ತೂರು (Coimbatore) ಉತ್ತರದಿಂದ ಸಾಯಿನಗರ ಶಿರಡಿಗೆ 14 ಜೂನ್ 2022 ರಂದು (ಮಂಗಳವಾರ) 18:00 ಗಂಟೆಗೆ  ಹೊರಟಿದ್ದು ತಿರುಪ್ಪೂರ್, ಈರೋಡ್, ಸೇಲಂ, ಯಲಹಂಕ, ಧರ್ಮಾವರಂ, ಮಂತ್ರಾಲಯ ರಸ್ತೆ ಮತ್ತು ವಾಡಿ ಸ್ಟೇಷನ್ ಗಳಲ್ಲಿ ನಿಲುಗಡೆಯೊಂದಿಗೆ 16 ಜೂನ್ 2022 ರಂದು (ಗುರುವಾರ) ಸಾಯಿನಗರ ಶಿರಡಿಯನ್ನು 07:25 ಗಂಟೆಗೆ ತಲುಪುತ್ತದೆ ಎಂದು ರೈಲ್ವೆ ಸಚಿವಾಲಯ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ. ಮಂಗಳವಾರ ಕೊಯಮತ್ತೂರಿನಿಂದ ಶಿರಡಿಗೆ ಸುಮಾರು 1100 ಪ್ರಯಾಣಿಕರು ಮೊದಲ ರೈಲು ಪ್ರಯಾಣ ಮಾಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಖಾಸಗಿ ಸೇವೆಯನ್ನು ನೋಂದಾಯಿತ ಸೇವಾ ಪೂರೈಕೆದಾರರು ನೀಡುತ್ತಿದ್ದು ಇದು ಐದು ದಿನಗಳ ಪ್ರಯಾಣವಾಗಿದೆ. ಇದು ಕೊಯಮತ್ತೂರಿನಿಂದ ಶಿರಡಿಗೆ ಮತ್ತು ಅಲ್ಲಿಂದ ಹಿಂತಿರುಗುವ ಪ್ರಯಾಣ ಆಗಿರುತ್ತದೆ. ಈ ಖಾಸಗಿ ರೈಲನ್ನು ಸೌತ್ ಸ್ಟಾರ್ ರೈಲ್ ಎಂಬ ನೋಂದಾಯಿತ ಸೇವಾ ಪೂರೈಕೆದಾರರು ನಿರ್ವಹಿಸುತ್ತಿದ್ದಾರೆ. ಇದು ಕೊಯಮತ್ತೂರು ಮೂಲದ ಕಂಪನಿ ಆಗಿದ್ದು ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಭಾಗವಾಗಿದೆ. 20 ಕೋಚ್‌ಗಳ ಸಂಯೋಜನೆಯೊಂದಿಗೆ ಸೇವಾ ಪೂರೈಕೆದಾರರು ದಕ್ಷಿಣ ರೈಲ್ವೆಗೆ ಭದ್ರತಾ ಠೇವಣಿಯಾಗಿ ರೂ 1 ಕೋಟಿ ಪಾವತಿಸಿದ್ದಾರೆ.

“ಇದಲ್ಲದೆ, ಕಂಪನಿಯು ವಾರ್ಷಿಕ ಬಳಕೆಯ ಹಕ್ಕು ಶುಲ್ಕಗಳು ಮತ್ತು ರೂ.76.77 ಲಕ್ಷಗಳ ತ್ರೈಮಾಸಿಕ ಸ್ಥಿರ ಸಾಗಣೆ ಶುಲ್ಕಗಳಿಗಾಗಿ ರೂ.27.79 ಲಕ್ಷಗಳನ್ನು ಪಾವತಿಸಿದೆ. ಹೆಚ್ಚುವರಿಯಾಗಿ, ವೇರಿಯಬಲ್ ಸಾಗಣೆ ಶುಲ್ಕ ರೂ. 38.22 ಲಕ್ಷಗಳನ್ನು ಪ್ರಸ್ತುತ ಸುತ್ತಿನ ಪ್ರವಾಸಕ್ಕಾಗಿ ಸಂಗ್ರಹಿಸಲಾಗಿದೆ. ಈ ಎಲ್ಲಾ ಶುಲ್ಕಗಳು ಜಿಎಸ್‌ಟಿಯನ್ನು ಹೊರತುಪಡಿಸಿವೆ ಎಂದು ಸಚಿವಾಲಯ ಹೇಳಿದೆ.

ಯೋಜನೆಯಡಿಯಲ್ಲಿರುವ ರೈಲುಗಳು ಒಂದು ಎಸಿ ಕೋಚ್, ಮೂರು 2 ಟೈರ್ ಎಸಿ ಕೋಚ್‌ಗಳು ಮತ್ತು ಎಂಟು 3-ಟೈರ್ ಕೋಚ್‌ಗಳು ಜೊತೆಗೆ ಐದು ಸ್ಲೀಪರ್ ಕ್ಲಾಸ್ ಕೋಚ್‌ಗಳನ್ನು ಹೊಂದಿವೆ. ರೈಲ್ವೇ ಪೋಲೀಸ್ ಫೋರ್ಸ್ ಜೊತೆಗೆ ತೊಡಗಿಸಿಕೊಂಡಿರುವ ರಿವೇಟ್ ಸೆಕ್ಯುರಿಟಿಗಳೊಂದಿಗೆ ಯಾವುದೇ ತುರ್ತು ಪರಿಸ್ಥಿತಿಗೆ ಹಾಜರಾಗಲು ರೈಲಿನಲ್ಲಿ ವೈದ್ಯರೂ ಇರುತ್ತಾರೆ.

ಭಾರತೀಯ ರೈಲ್ವೇಯು ಐತಿಹಾಸಿಕ ಸ್ಥಳಗಳನ್ನು ಸಂಪರ್ಕಿಸುವ ಉದ್ದೇಶದಿಂದ ನವೆಂಬರ್ 2021 ರಲ್ಲಿ ಥೀಮ್ ಆಧಾರಿತ ಭಾರತ್ ಗೌರವ್ ರೈಲಿನ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.

ಇದನ್ನೂ ಓದಿ

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada