ಇಂಡಿಗೋ ವಿಮಾನ(IndiGo)ದಲ್ಲಿ ಬೀಡಿ ಸೇದಿದ ಆರೋಪದ ಮೇಲೆ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರನ್ನು ಬಂಧಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಂಡಿಗೋ ವಿಮಾನದಲ್ಲಿ ದೆಹಲಿಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಮೊಹಮ್ಮದ್ ಫಕ್ರುದ್ದೀನ್ ಮೊಹಮ್ಮದ್ ಅಮ್ರುದ್ದೀನ್ ಎಂದು ಗುರುತಿಸಲಾದ ಪ್ರಯಾಣಿಕರು ಶೌಚಾಲಯದೊಳಗೆ ಬೀಡಿ ಸೇದುತ್ತಿದ್ದರು.
ಬೀಡಿಯ ತೀವ್ರ ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಶೌಚಾಲಯದೊಳಗೆ ಬೀಡಿ ಪತ್ತೆಯಾಗಿದೆ. ವಿಚಾರಣೆಗೆ ಒಳಪಡಿಸಿದಾಗ, ಅಮೃದ್ದೀನ್ ತಾನು ಬೀಡಿ ಸೇದುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಮತ್ತು ವಿಮಾನ ಮುಂಬೈಗೆ ಬಂದಿಳಿದಾಗ ಸಹರ್ ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಐಪಿಸಿಯ ಸೆಕ್ಷನ್ 336 ಮತ್ತು ಏರ್‌ಕ್ರಾಫ್ಟ್ ಆಕ್ಟ್‌ನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ತಾನು ರಿಯಾದ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದೇನೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ವಿಚಾರಣೆ ವೇಳೆ ಆತ ತನ್ನ ಪ್ಯಾಂಟ್ ಜೇಬಿನಲ್ಲಿ ಬೀಡಿ ಮತ್ತು ಲೈಟರ್ ಬಚ್ಚಿಟ್ಟಿದ್ದಾಗಿ ತಿಳಿಸಿದ್ದಾನೆ. ಇದೇ ರೀತಿಯ ಘಟನೆಯಲ್ಲಿ, ಕಳೆದ ವರ್ಷ ಮೇ ತಿಂಗಳಲ್ಲಿ ವಿಮಾನದಲ್ಲಿ ಬೀಡಿ ಸೇದುತ್ತಿದ್ದ 56 ವರ್ಷದ ವ್ಯಕ್ತಿಯನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ಮತ್ತಷ್ಟು ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀಡಿ ಬೇಕೆಂದು ವ್ಯಕ್ತಿ ರಂಪಾಟ; ವಿಡಿಯೋ ನೋಡಿ
ರಾಜಸ್ಥಾನದ ಮಾರ್ವಾರ್ ಪ್ರದೇಶದ ಪ್ರವೀಣ್ ಕುಮಾರ್ ಎಂಬ ವ್ಯಕ್ತಿ ಅಹಮದಾಬಾದ್‌ನಿಂದ ಆಕಾಶ ಏರ್ ವಿಮಾನವನ್ನು ಹತ್ತಿದ್ದರು ಮತ್ತು ಏರ್‌ಲೈನ್‌ನ ಸಿಬ್ಬಂದಿಯು ಪ್ರಯಾಣಿಕರ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿರುವುದು ಕಂಡರು, ತಾನು ಮೊದಲ ಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೇನೆ ನನಗೆ ನಿಯಮಗಳು ತಿಳಿದಿಲ್ಲ ಎಂದು ಆತ ಪೊಲೀಸರಿಗೆ ಹೇಳಿದ್ದ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:29 am, Wed, 6 March 24