Indigo Flight: ದೆಹಲಿ-ಪಾಟ್ನಾ ವಿಮಾನದಲ್ಲಿ ಕುಡಿದು ಅನುಚಿತವಾಗಿ ವರ್ತಿಸಿದ ಇಬ್ಬರು ಯುವಕರ ಬಂಧನ, ಒಬ್ಬ ಪರಾರಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 09, 2023 | 10:55 AM

ದೆಹಲಿ-ಪಾಟ್ನಾ ವಿಮಾನದಲ್ಲಿ ಕುಡಿದು ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಇಂಡಿಗೋ ಇಬ್ಬರು ಪ್ರಯಾಣಿಕರನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಮದ್ಯದ ಅಮಲಿನಲ್ಲಿ ಮೂವರು ವ್ಯಕ್ತಿಗಳು ದೆಹಲಿಯಿಂದ ಪಾಟ್ನಾಗೆ ಬರುತ್ತಿದ್ದ ಇಂಡಿಗೋ ವಿಮಾನದ ಗಗನಸಖಿ ಮತ್ತು ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದರು.

Indigo Flight: ದೆಹಲಿ-ಪಾಟ್ನಾ ವಿಮಾನದಲ್ಲಿ ಕುಡಿದು ಅನುಚಿತವಾಗಿ ವರ್ತಿಸಿದ ಇಬ್ಬರು ಯುವಕರ ಬಂಧನ, ಒಬ್ಬ ಪರಾರಿ
Indigo Flight
Follow us on

ಪಾಟ್ನಾ: ದೆಹಲಿ-ಪಾಟ್ನಾ ವಿಮಾನದಲ್ಲಿ ಕುಡಿದು ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಇಂಡಿಗೋ ಇಬ್ಬರು ಪ್ರಯಾಣಿಕರನ್ನು ಬಂಧಿಸಲಾಗಿದೆ. ಪಾಟ್ನಾದಲ್ಲಿ ಇಬ್ಬರು ಇಂಡಿಗೋ ಪ್ರಯಾಣಿಕರನ್ನು ಪಾನಮತ್ತರಾಗಿ ವಿಮಾನದಲ್ಲಿ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಈ ಬಗ್ಗೆ ಇಂಡಿಗೋ ವರದಿಯನ್ನು ನೀಡಿದೆ. ಈ ಹಿಂದೆ ಕುಡಿದು ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿ ಆರೋಪದ ಮೇಲೆ ಬಂಧಿಸಲಾಗಿದೆ. ಇದೀಗ ಇಂತಹದೇ ಘಟನೆ ಇಂಡಿಗೋ ವಿಮಾನದಲ್ಲಿ ನಡೆದಿದೆ. ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನಿಂದ ಕಿರಿಕ್​​​ ಮಾಡಿದ್ದು ಇಂಡಿಗೋ ವಿಮಾನದ ಸಿಬ್ಬಂದಿ ಜತೆ ಪ್ರಯಾಣಿಕ ರಂಪಾಟ ಮಾಡಿದ್ದಾನೆ. ಏರ್​ ಇಂಡಿಯಾ ವಿಮಾನದ ಘಟನೆ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಮದ್ಯದ ಅಮಲಿನಲ್ಲಿ ಮೂವರು ವ್ಯಕ್ತಿಗಳು ದೆಹಲಿಯಿಂದ ಪಾಟ್ನಾಗೆ ಬರುತ್ತಿದ್ದ ಇಂಡಿಗೋ ವಿಮಾನದ ಗಗನಸಖಿ ಮತ್ತು ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದರು. ಈ ಬಗ್ಗೆ ಕೆಲವು ಪ್ರಯಾಣಿಕರು ವಿರೋಧಿಸಿದ್ದಾರೆ. ಜೊತೆಗೆ ಮಧ್ಯಪ್ರವೇಶಿಸುವಂತೆ ಸಿಬ್ಬಂದಿಯನ್ನು ಕರೆದಿದ್ದಾರೆ. ಗಗನಸಖಿ ಅವರನ್ನು ಸಮಾಧನ ಮಾಡಲು ಮುಂದಾದಾಗ, ಇಬ್ಬರೂ ಅವಳೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು. ಸಿಬ್ಬಂದಿ ಮನವೊಲಿಸಿದ ನಂತರವೂ ಸಿಬ್ಬಂದಿಗೆ ಕಿರುಕುಳ ನೀಡುವುದನ್ನು ಮುಂದುವರಿಸಿದ್ದಾರೆ.

ಇದನ್ನು ಓದಿ:Air India Flight: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ಕುಡುಕ ಪ್ರಯಾಣಿಕ

ಭಾನುವಾರ ರಾತ್ರಿ ದೆಹಲಿಯಿಂದ ಪಾಟ್ನಾಗೆ ಬರುತ್ತಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ಗಲಾಟೆ ಮಾಡಿದ ಇಬ್ಬರು ಯುವಕರನ್ನು ಪಾಟ್ನಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಸಿಐಎಸ್ಎಫ್ ಸಿಬ್ಬಂದಿ ಅವರನ್ನು ಹಿಡಿದು ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಇಬ್ಬರು ಯುವಕರು ಹಾಜಿಪುರ ನಿವಾಸಿಗಳಾದ ನಿತೀಶ್ ಕುಮಾರ್ ಮತ್ತು ರೋಹಿತ್ ಎಂದು ಗುರುತಿಸಲಾಗಿದೆ. ಇದರಲ್ಲಿ ಆತನ ಮೂರನೇ ವ್ಯಕ್ತಿ ವಿಮಾನ ನಿಲ್ದಾಣ ತಲುಪಿದ ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಆತನ ಹೆಸರು ಪಿಂಟು ಎಂದು ಹೇಳಲಾಗುತ್ತಿದೆ.

ವಿಮಾನದಲ್ಲಿದ್ದ ಇತರ ಪ್ರಯಾಣಿಕರ ಪ್ರಕಾರ, ಮೂವರು ಯುವಕರು ವಿಮಾನದಲ್ಲಿ ಗಲಾಟೆ ಮಾಡಿದ್ದಾರೆ. ಇದರಲ್ಲಿ ಒಬ್ಬ ಯುವಕ ಅವಕಾಶ ನೋಡಿ ವಿಮಾನ ನಿಲ್ದಾಣದಿಂದ ನಿರ್ಗಮಿಸಿದ್ದಾನೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:55 am, Mon, 9 January 23