Air India Flight: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ಕುಡುಕ ಪ್ರಯಾಣಿಕ

ನವೆಂಬರ್ 26 ರಂದು ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಮದ್ಯಪಾನಿ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.

Air India Flight: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ಕುಡುಕ ಪ್ರಯಾಣಿಕ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on:Jan 04, 2023 | 12:14 PM

ಮುಂಬೈ: ಕುಡಿದ ಅಮಲಿನಲ್ಲಿ ಪ್ಯಾಂಟ್ ಜಿಪ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಪ್ರಯಾಣಿಕನೊಬ್ಬ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ ಅಸಹ್ಯಕರ ಘಟನೆ ಏರ್ ಇಂಡಿಯಾ (Air India) ವಿಮಾನದಲ್ಲಿ ಇತ್ತೀಚೆಗೆ ನಡೆದಿರುವುದು ವರದಿಯಾಗಿದೆ. ನ್ಯೂಯಾರ್ಕ್​​ನಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ಏರ್​ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್ (Business Class) ಆಸನ ವಿಭಾಗದಲ್ಲಿ ಈ ವಿಲಕ್ಷಣ ವಿದ್ಯಮಾನ ನಡೆದಿದೆ. ಮಹಿಳೆಯು ತಕ್ಷಣವೇ ಕ್ಯಾಬಿನ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಆದರೆ, ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ವಿಮಾನ ದೆಹಲಿ ತಲುಪಿದ ಬಳಿಕ ಏನೂ ಆಗಿಲ್ಲವೆಂಬಂತೆ ಇಳಿದು ಹೊರ ನಡೆದರು ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿ ಸುಮಾರು 70 ವರ್ಷ ವಯಸ್ಸಿನ ಸಂತ್ರಸ್ತೆ ಮಹಿಳೆ ಟಾಟಾ ಸಮೂಹದ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರಿಗೆ ಪತ್ರ ಬರೆದಿದ್ದಾರೆ. ನಂತರ ಏರ್​ ಇಂಡಿಯಾ ತನಿಖೆಗೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ. ಮಹಿಳೆಯು ಬರೆದಿದ್ದಾರೆ ಎನ್ನಲಾದ ಪತ್ರದ ಬಗ್ಗೆ ‘ಟೈಮ್ಸ್ ಆಫ್ ಇಂಡಿಯಾ’ ಗಮನ ಸೆಳೆದಿತ್ತು. ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

‘ಇಂಥ ಬಹಳ ಸೂಕ್ಷ್ಮ ಮತ್ತು ಆಘಾತಕಾರಿ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸಿಬ್ಬಂದಿಯಲ್ಲಿ ಪೂರ್ವಭಾವಿ ತಯಾರಿ ಕಂಡುಬರಲಿಲ್ಲ. ಪ್ರತಿಕ್ರಿಯೆಗಾಗಿ ಸುದೀರ್ಘ ಸಮಯ ಕಾಯಬೇಕಾಯಿತು. ಘಟನೆಯ ಸಮಯದಲ್ಲಿ ನನ್ನ ಸುರಕ್ಷತೆ ಅಥವಾ ಸೌಕರ್ಯವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ವಿಮಾನಯಾನ ಸಂಸ್ಥೆಯು ಯಾವುದೇ ಪ್ರಯತ್ನ ಮಾಡಿಲ್ಲದಿರುವುದರಿಂದ ದುಃಖಿತಳಾಗಿದ್ದೇನೆ’ ಎಂದು ಮಹಿಳೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

2022ರ ನವೆಂಬರ್ 26ರಂದು ಸ್ಥಳೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ನ್ಯೂಯಾರ್ಕ್​​ನ ಜೆಎಫ್​ಕೆ ವಿಮಾನ ನಿಲ್ದಾಣದಿಂದ ಹೊರಟ ಏರ್​ ಇಂಡಿಯಾ ವಿಮಾನ ‘ಎಐ-102’ರಲ್ಲಿ ಘಟನೆ ನಡೆದಿತ್ತು.

ಇದನ್ನೂ ಓದಿ: Air India Express: ಯುಎಇಯಿಂದ ಭಾರತಕ್ಕೆ ಪ್ರಯಾಣಿಸುವವರಿಗೆ ಕೊವಿಡ್ ಮಾರ್ಗಸೂಚಿ ಘೋಷಿಸಿದ ಏರ್ ಇಂಡಿಯಾ ಎಕ್ಸ್​ಪ್ರೆಸ್

‘ಸಿಬ್ಬಂದಿ ಊಟ ನೀಡಿ ತುಸು ಹೊತ್ತಿನ ನಂತರ ಸಂಪೂರ್ಣವಾಗಿ ಅಮಲೇರಿದ ವ್ಯಕ್ತಿಯೊಬ್ಬ ನನ್ನ ಆಸನದ ಬಳಿ ಬಂದ. ಪ್ಯಾಂಜ್ ಜಿಪ್ ಬಿಚ್ಚಿ ಖಾಸಗಿ ಅಂಗಗಳನ್ನು ಪ್ರದರ್ಶಿಸಲು ಶುರು ಮಾಡಿದ. ನಂತರ ಮೂತ್ರ ವಿಸರ್ಜಿಸಿದ. ಅದಾಗಿ ಅಲ್ಲೇ ನಿಂತುಕೊಂಡಿದ್ದ. ಸಹ ಪ್ರಯಾಣಿಕರೊಬ್ಬರು ಗದರಿದ ಬಳಿಕ ಅಲ್ಲಿಂದ ತೆರಳಿದ. ತಕ್ಷಣವೇ ಕ್ಯಾಬಿನ್ ಸಿಬ್ಬಂದಿಗೆ ಮಾಹಿತಿ ನೀಡಿದೆ. ನನ್ನ ಬಟ್ಟೆ, ಶೂ, ಬ್ಯಾಗ್​ ಆತನ ಮೂತ್ರದಿಂದ ಒದ್ದೆಯಾಗಿದ್ದವು. ಬಳಿಕ ಮೇಲ್ವಿಚಾರಕಿಯು ನನ್ನ ಆಸನದತ್ತ ಬಂದರು. ಪರಿಶೀಲನೆ ನಡೆಸಿ ಚೀಲ ಮತ್ತು ಶೂಗಳ ಮೇಲೆ ಸೋಂಕುನಿವಾರಕವನ್ನು ಸಿಂಪಡಿಸಿದರು’ ಎಂದು ಮಹಿಳೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಶೌಚಾಲಯದಲ್ಲೇ 20 ನಿಮಿಷ ಕಳೆದ ಮಹಿಳೆ

ನಂತರ ಶೌಚಾಲಯಕ್ಕೆ ತೆರಳಿ ಬಟ್ಟೆ ಬದಲಾಯಿಸಿ ದೇಹವನ್ನು ಸ್ವಚ್ಛ ಮಾಡಿಕೊಂಡ ಮಹಿಳೆ 20 ನಿಮಿಷ ಅಲ್ಲೇ ಕಳೆಯಬೇಕಾಯಿತು. ಬಳಿಕ ಕಿರಿದಾದ ಆಸನವೊಂದನ್ನು ಆಕೆಗೆ ನೀಡಲಾಯಿತು. ಸುಮಾರು 1 ಗಂಟೆಯ ನಂತರ ಆಕೆಯ ಆಸನವನ್ನು ಸ್ವಚ್ಛಗೊಳಿಸಿ, ಕುಳಿತುಕೊಳ್ಳಲು ವ್ಯವಸ್ಥೆ ಮಾಡಿಕೊಡಲಾಯಿತು. ಆದಾಗ್ಯೂ, ಆಸನದ ಮೇಲೆ ಟಾಪ್ ಹೊದೆಸಿ ಕುಳಿತುಕೊಳ್ಳಲು ಸಿಬ್ಬಂದಿ ವ್ಯವಸ್ಥೆ ಮಾಡಿದ್ದರು. ಮೂತ್ರದ ವಾಸನೆಯೊಂದಿಗೇ ಮಹಿಳೆ ಪ್ರಯಾಣಿಸಬೇಕಾಯಿತು. 2 ಗಂಟೆಗಳ ನಂತರ ಬೇರೆ ಆಸನದ ವ್ಯವಸ್ಥೆ ಮಾಡಲಾಯಿತು ಎಂಬುದು ಪತ್ರದಿಂದ ತಿಳಿದುಬಂದಿದೆ.

ಏರ್ ಇಂಡಿಯಾ ಸಿಬ್ಬಂದಿ ಹೇಳುವುದೇನು?

ಕ್ಯಾಬಿನ್ ಸಿಬ್ಬಂದಿಯು ಕಂಪನಿಯ ನಿಯಮಗಳನ್ನು ಅನುಸರಿಸಿದ್ದಾರೆ. ಪೈಲಟ್​ಗೆ ಮಾಹಿತಿ ನೀಡಿ ಅಶಿಸ್ತಿನಿಂದ ವರ್ತಿಸಿದ ಪವ್ರಯಾಣಿಕನನ್ನು ಪ್ರತ್ಯೇಕವಾಗಿ ಇರಿಸಿದ್ದಾರೆ. ಲ್ಯಾಂಡಿಂಗ್​ ಆದ ಬಳಿಕ ಆತನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಒಪ್ಪಿಸಿದ್ದಾರೆ ಎಂದು ಹಿರಿಯ ಏರ್​​ಲೈನ್ ಕಮಾಂಡರ್ ತಿಳಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರಿಗೆ ಮತ್ತು ನಿಯಂತ್ರಣ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ನೊಂದ ಪ್ರಯಾಣಿಕರ ಜತೆ ನಿಯಮಿತವಾಗಿ ಸಂಪರ್ಕದಲ್ಲಿದ್ದೇವೆ ಎಂದು ಏರ್ ಇಂಡಿಯಾ ಪ್ರಕಟಣೆ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:41 am, Wed, 4 January 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್