Air India: ಹೊಸ ಬ್ರ್ಯಾಂಡ್ ಗುರುತಿನೊಂದಿಗೆ ಕಾರ್ಯಾಚರಿಸಲಿದೆ ಏರ್ ಇಂಡಿಯಾ

ಏರ್​ ಇಂಡಿಯಾವು ನವೀಕೃತ ವೆಬ್​​ಸೈಟ್ ಮತ್ತು ಮೊಬೈಲ್ ಆ್ಯಪ್​​ನೊಂದಿಗೆ ಹೊಸ ಬ್ರ್ಯಾಂಡ್​ ಗುರುತಿನಲ್ಲಿ ಕಾರ್ಯಾಚರಿಸಲಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾಂಪ್​​ಬೆಲ್ ವಿಲ್ಸನ್ ತಿಳಿಸಿದ್ದಾರೆ.

Air India: ಹೊಸ ಬ್ರ್ಯಾಂಡ್ ಗುರುತಿನೊಂದಿಗೆ ಕಾರ್ಯಾಚರಿಸಲಿದೆ ಏರ್ ಇಂಡಿಯಾ
ಏರ್ ಇಂಡಿಯಾ
Follow us
TV9 Web
| Updated By: Ganapathi Sharma

Updated on:Dec 30, 2022 | 3:13 PM

ನವದೆಹಲಿ: ಏರ್​ ಇಂಡಿಯಾವು (Air India) ನವೀಕೃತ ವೆಬ್​​ಸೈಟ್ ಮತ್ತು ಮೊಬೈಲ್ ಆ್ಯಪ್​​ನೊಂದಿಗೆ ಹೊಸ ಬ್ರ್ಯಾಂಡ್​ ಗುರುತಿನಲ್ಲಿ ಕಾರ್ಯಾಚರಿಸಲಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾಂಪ್​​ಬೆಲ್ ವಿಲ್ಸನ್ (Campbell Wilson) ತಿಳಿಸಿದ್ದಾರೆ. ವರ್ಷಾಂತ್ಯದ ಸಂದರ್ಭದಲ್ಲಿ ಕಂಪನಿಯ ಸಿಬ್ಬಂದಿಯನ್ನು ಉದ್ದೇಶಿಸಿ ಪ್ರಕಟಿಸಿದ ಟಿಪ್ಪಣಿಯಲ್ಲಿ ಅವರು ಈ ವಿಚಾರವನ್ನು ಉಲ್ಲೇಖಿಸಿದ್ದಾರೆ. ನಾವೀಗ ನಾಲ್ಕನೇ ತ್ರೈಮಾಸಿಕದ ಅಂತಿಮ ಹಂತದಲ್ಲಿದ್ದೇವೆ. ಸುಮಾರು ಒಂದು ವರ್ಷವೂ ಆಗಿದೆ. ನಮ್ಮ ರೂಪಾಂತರ ಯೋಜನೆಯ ಭಾಗವಾಗಿ ಸೆಪ್ಟೆಂಬರ್​ನಲ್ಲಿ ವಿಹಾನ್ ಎಐ (Vihaan.AI) ಉದ್ಘಾಟಿಸಿದ್ದೆವು. ನಮ್ಮ ಕಾರ್ಯಸೂಚಿಯ ಸುಮಾರು 22 ಅಂಶಗಳು ಪ್ರಗತಿಯ ವಿವಿಧ ಹಂತಗಳಲ್ಲಿವೆ. ಸಾಮೂಹಿಕ ಪ್ರಯತ್ನಗಳಿಗೆ ಧನ್ಯವಾದಗಳು. ನಾವು ಅಂದುಕೊಂಡಂತೆಯೇ ಮುನ್ನಡೆಯುತ್ತಿದ್ದೇವೆ ಎಂದು ಅವರು ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ.

‘ವಿಶ್ವದರ್ಜೆಯ ವಿಮಾನಯಾನ ಸಂಸ್ಥೆಯಾಗಿ ಬಹಳ ಎತ್ತರಕ್ಕೇರಲು ನಮಗೆ ಬಹಳ ಸಮಯ ಬೇಕಾಗಬಹುದು. ಆದರೆ, ನಾವು ಆ ನಿಟ್ಟಿನಲ್ಲಿ ಅತ್ಯದ್ಭುತವಾಗಿ ಕಾರ್ಯಾರಂಭ ಮಾಡಿದ್ದೇವೆ. ಈವರೆಗೆ ಏನು ಸಾಧಿಸಿದ್ದೇವೆಯೋ ಆ ಬಗ್ಗೆ ನೀವೆಲ್ಲ ಹೆಮ್ಮೆಪಡಬಹುದು’ ಎಂದು ಕ್ಯಾಂಪ್​​ಬೆಲ್ ವಿಲ್ಸನ್ ಹೇಳಿದ್ದಾರೆ.

ಇದನ್ನೂ ಓದಿ: Vihaan.AI: ಮುಂದಿನ ಐದು ವರ್ಷಗಳ ಯೋಜನೆಗಳನ್ನು ಅನಾವರಣಗೊಳಿಸಿದ ಏರ್​ಇಂಡಿಯಾ 

ಟಾಟಾ ಸಮೂಹದ ಒಡೆತನದಲ್ಲಿರುವ ಏರ್​ ಇಂಡಿಯಾದ ಸಿಇಒ ಆಗಿ ವಿಲ್ಸನ್ ಅವರು ಜುಲೈನಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಐದು ವರ್ಷಗಳ ರೂಪಾಂತರ ಯೋಜನೆ ‘ವಿಹಾನ್’ ನೇತೃತ್ವ ವಹಿಸಿಕೊಂಡಿದ್ದಾರೆ. ಯೋಜನೆಯು ವಿಮಾನಯಾನ ಜಾಲ ವಿಸ್ತರಣೆ, ಗ್ರಾಹಕ ಸೇವೆಯಲ್ಲಿ ಸುಧಾರಣೆ, ಮಾರುಕಟ್ಟೆ ಪಾಲು ಹೆಚ್ಚಿಸುವುದು, ವಿಮಾನಯಾನ ಸಂಸ್ಥೆಯನ್ನು ಬೆಳವಣಿಗೆ, ಲಾಭದಾಯಕತೆ ಮತ್ತು ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳುವ ಉದ್ದೇಶವನ್ನು ಹೊಂದಿದೆ.

ಇತ್ತೀಚೆಗಷ್ಟೇ ಮೂರು ಹೊಸ ಮಾರ್ಗಗಳಲ್ಲಿ ಸಂಚರಿಸುವುದಾಗಿ ಘೋಷಿಸಿದ್ದ ವಿಮಾನಯಾನ ಸಂಸ್ಥೆಯು 36 ವಿಮಾನಗಳನ್ನು ಲೀಸ್​ಗೆ ನೀಡುವುದಾಗಿ ಹೇಳಿತ್ತು. ವಿಸ್ತರಣೆ ಕಾರ್ಯಾಚರಣೆಯ ಭಾಗವಾಗಿ 1,200 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿತ್ತು. ಹೊಸ ವಿಮಾನಗಳ ಖರೀದಿಗಾಗಿ ಏರ್​ಬಸ್ ಮತ್ತು ಬೋಯಿಂಗ್ ಜತೆ ಮಾತುಕೆ ನಡೆಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:11 pm, Fri, 30 December 22

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್