Indira Gandhi Birth Anniversary: ಇಂದು ಭಾರತದ ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ 105ನೇ ಜನ್ಮದಿನ

| Updated By: ಸುಷ್ಮಾ ಚಕ್ರೆ

Updated on: Nov 19, 2022 | 8:57 AM

ಇಂದಿರಾ ಗಾಂಧಿಯವರ 105ನೇ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರು, ರಾಹುಲ್ ಗಾಂಧಿ ಮುಂತಾದವರು ಶುಭಾಶಯ ಕೋರಿದ್ದಾರೆ.

Indira Gandhi Birth Anniversary: ಇಂದು ಭಾರತದ ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ 105ನೇ ಜನ್ಮದಿನ
ಇಂದಿರಾ ಗಾಂಧಿ
Image Credit source: News18
Follow us on

ನವದೆಹಲಿ: ಇಂದು ಭಾರತದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿಯವರ (Indira Gandhi) 105ನೇ ಜನ್ಮದಿನ. ಇಂದಿರಾ ಗಾಂಧಿಯವರು 1917ರಲ್ಲಿ ನವೆಂಬರ್ 19ರಂದು ಅಲಹಾಬಾದ್​​ನಲ್ಲಿ ಜನಿಸಿದರು. ಇಂದಿರಾ ಗಾಂಧಿ ಅವರನ್ನು ಭಾರತದ ಐರನ್ ಲೇಡಿ (Iron Lady of India) ಎಂದೇ ಕರೆಯಲಾಗುತ್ತಿತ್ತು. ಇಂದಿರಾ ಗಾಂಧಿ ಅವರು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು (Jawaharlal Nehru) ಅವರ ಮಗಳು. ಅವರ ತಾಯಿ ಕಮಲಾ ನೆಹರು ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕಿಯಾಗಿದ್ದರು. ಇಂದು ದೇಶಾದ್ಯಂತ ಇಂದಿರಾ ಗಾಂಧಿ ಜನ್ಮ ದಿನೋತ್ಸವ ಆಚರಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲೂ ಇಂದು ಕೇವಲ ಮಹಿಳೆಯರೇ ಪಾಲ್ಗೊಳ್ಳಲಿದ್ದಾರೆ. ಇಂದಿರಾ ಗಾಂಧಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿರುವ ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಮಹಿಳೆಯರು ಜೊತೆಯಾಗಲಿದ್ದಾರೆ.

ಇಂದಿರಾ ಗಾಂಧಿಯವರ 105ನೇ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರು, ರಾಹುಲ್ ಗಾಂಧಿ ಮುಂತಾದವರು ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ನಾಳೆ ರಾಹುಲ್ ಗಾಂಧಿ ಜೊತೆ ಪಾಲ್ಗೊಳ್ಳಲು ಮಹಿಳೆಯರಿಗೆ ಮಾತ್ರ ಅವಕಾಶ; ಕಾರಣ ಇಲ್ಲಿದೆ

ಇಂದಿರಾ ಗಾಂಧಿಯವರು ದೆಹಲಿಯ ಮಾಡರ್ನ್ ಸ್ಕೂಲ್, ಸೇಂಟ್ ಸಿಸಿಲಿಯಾಸ್ ಮತ್ತು ಅಲಹಾಬಾದ್‌ನ ಸೇಂಟ್ ಮೇರಿಸ್ ಕಾನ್ವೆಂಟ್‌ನಲ್ಲಿ ಅಧ್ಯಯನ ಮಾಡಿದರು. ಅವರು ಜಿನೀವಾ ಇಂಟರ್‌ನ್ಯಾಶನಲ್ ಸ್ಕೂಲ್, ಬ್ಯೂಕ್ಸ್‌ನಲ್ಲಿರುವ ಎಕೋಲ್ ನೌವೆಲ್ಲೆ ಮತ್ತು ಪುಣೆ ಮತ್ತು ಬಾಂಬೆಯ ಪೀಪಲ್ಸ್ ಓನ್ ಸ್ಕೂಲ್‌ನಲ್ಲಿಯೂ ಅಧ್ಯಯನ ಮಾಡಿದ್ದರು.

ಬಳಿಕ ಇಂದಿರಾ ಗಾಂಧಿಯವರು ಉನ್ನತ ಶಿಕ್ಷಣವನ್ನು ಪಡೆಯಲು ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯಕ್ಕೆ ಸೇರಿಕೊಂಡರು. ಆದರೆ, ಅವರ ಕೋರ್ಸ್ ಮುಗಿಸಲು ಸಾಧ್ಯವಾಗಲಿಲ್ಲ. ಭಾರತಕ್ಕೆ ಮರಳಿದ ನಂತರ ಅವರು 1942ರಲ್ಲಿ ಫಿರೋಜ್ ಗಾಂಧಿಯನ್ನು ವಿವಾಹವಾದರು. ಅವರಿಗೆ ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ ಎಂಬ ಇಬ್ಬರು ಗಂಡು ಮಕ್ಕಳಿದ್ದರು.

ಇಂದಿರಾ ಗಾಂಧಿ ಭಾರತದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಕಮಲಾ ನೆಹರು ಅವರ ಏಕೈಕ ಪುತ್ರಿಯಾಗಿದ್ದರು. ಅಕ್ಟೋಬರ್ 31, 1984ರಂದು ಇಂದಿರಾ ಗಾಂಧಿ ಅವರನ್ನು ಅವರ ಇಬ್ಬರು ಅಂಗರಕ್ಷಕರು ಗುಂಡಿಕ್ಕಿ ಕೊಂದರು. ಅಮೃತಸರದ ಗೋಲ್ಡನ್ ಟೆಂಪಲ್​ನಲ್ಲಿ ಅಡಗಿದ್ದ ಸಿಖ್ ಉಗ್ರರ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಕರೆ ನೀಡಿದ್ದ ಆಕೆಯ ‘ಆಪರೇಷನ್ ಬ್ಲೂ ಸ್ಟಾರ್’ಗೆ ಪ್ರತೀಕಾರವಾಗಿ ಆಕೆಯ ಅಂಗರಕ್ಷಕರು ಆಕೆಯ ಮೇಲೆ 31 ಗುಂಡುಗಳನ್ನು ಹಾರಿಸಿ ಹತ್ಯೆ ಮಾಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 8:37 am, Sat, 19 November 22