ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಸಂಸದನಿಗೆ ಚಪ್ಪಲಿಯೇಟು ಕೊಡುವುದಾಗಿ ಕೆಸಿಆರ್ ಪುತ್ರಿ ಕವಿತಾ ಎಚ್ಚರಿಕೆ
ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮತ್ತು ಅವರ ಮಗಳು ಕವಿತಾ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಟಿಆರ್‌ಎಸ್ ಕಾರ್ಯಕರ್ತರು ಹೈದರಾಬಾದ್ನಲ್ಲಿ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ (TRS) ಶಾಸಕಿ ಕೆ. ಕವಿತಾ ಶುಕ್ರವಾರ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಧರ್ಮಪುರಿ ಅರವಿಂದ್ (Dharmapuri Arvind) ತಮ್ಮ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ನಾನು ಆತನನ್ನು ಸೋಲಿಸುತ್ತೇನೆ ಎಂದಿರುವ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಮಗಳು ಕವಿತಾ (Kavitha), ಅರವಿಂದ್ ಅವರು ಇದೇ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದರೆ ನಾನು ಅವರಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮತ್ತು ಅವರ ಮಗಳು, ಸಂಸದೆ ಕವಿತಾ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಟಿಆರ್‌ಎಸ್ ಕಾರ್ಯಕರ್ತರು ಹೈದರಾಬಾದ್ನಲ್ಲಿ ಶುಕ್ರವಾರ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ಅವರ ಮನೆ ಮೇಲೆ ಕಲ್ಲು ತೂರಾಟ ಮಾಡಿ, ದಾಳಿ ನಡೆಸಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕವಿತಾ ಅವರನ್ನು ಧರ್ಮಪುರಿ ಅರವಿಂದ್ ಸೋಲಿಸಿದ್ದರು.
#WATCH | Telangana: BJP MP Arvind Dharmapuri’s residence in Hyderabad attacked and vandalised allegedly by TRS supporters. Details awaited. pic.twitter.com/MYokgY6HGr
— ANI (@ANI) November 18, 2022
ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕವಿತಾ ಕುರಿತು ಮಾತನಾಡಿದ್ದ ಧರ್ಮಪುರಿ ಅರವಿಂದ್, ಕವಿತಾ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಅವರು ಟಿಆರ್‌ಎಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗದಿದ್ದರೆ ಅವರ ಮೇಲೆ ಇಡಿ ದಾಳಿ ನಡೆಸಲಾಗುತ್ತದೆ ಎಂಬ ವರದಿಯನ್ನು ಉಲ್ಲೇಖಿಸಿ ಮಾತನಾಡಿದ್ದರು. ಇದಾದ ಬಳಿಕ ಕವಿತಾರನ್ನು ಬಿಜೆಪಿ ಖರೀದಿ ಮಾಡುತ್ತಿದೆ ಎಂದು ಸುದ್ದಿಗಳು ಪ್ರಸಾರವಾಗಿದ್ದವು. ಅಲ್ಲದೆ, ಅದೇ ಸುದ್ದಿಗೋಷ್ಠಿಯಲ್ಲಿ ಕೆಸಿಆರ್ ಅವರು ಅತ್ಯಂತ ಮೂರ್ಖ ಮುಖ್ಯಮಂತ್ರಿ ಎಂದು ಅರವಿಂದ್ ಟೀಕಿಸಿದ್ದರು. ಇದಕ್ಕೆ ಟಿಆರ್‌ಎಸ್ ಕಾರ್ಯಕರ್ತರು ಮತ್ತು ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ: Breaking News: ತೆಲಂಗಾಣದಲ್ಲಿ ತಾರಕಕ್ಕೇರಿದ ಬಿಜೆಪಿ- ಟಿಆರ್‌ಎಸ್ ಸಂಘರ್ಷ; ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಬಂಧನ
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಕವಿತಾ, ನನಗೆ ಬಿಜೆಪಿಯಿಂದ ಆಫರ್ ಬಂದಿದ್ದು ನಿಜ. ಆದರೆ, ನಾನು ಆ ಆಫರ್ ಅನ್ನು ತಿರಸ್ಕರಿಸಿದ್ದೆ ಎಂದಿದ್ದರು. ಅಲ್ಲದೆ, ಧರ್ಮಪುರಿ ಅರವಿಂದ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, ಇದೇ ರೀತಿ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದರೆ ಅವರಿಗೆ ಚಪ್ಪಲಿಯಿಂದ ಹೊಡೆಯುತ್ತೇನೆ ಎಂದಿದ್ದರು. ಇದಾದ ಬಳಿಕ, ಅರವಿಂದ್ ಅವರ ನಿವಾಸದ ಮೇಲೆ ಟಿಆರ್‌ಎಸ್ ಕಾರ್ಯಕರ್ತರು ದಾಳಿ ನಡೆಸಿದ್ದರು.
This was among many other comments made by BJP MP Dharmapuri Arvind. TRS workers today vandalized his house protesting against his comments. #DharmapuriArvind pic.twitter.com/9ACmebYLeP
— Paul Oommen (@Paul_Oommen) November 18, 2022
ಈ ಬಗ್ಗೆ ಟ್ವೀಟ್ ಮಾಡಿದ್ದ ಸಂಸದ ಧರ್ಮಪುರಿ ಅರವಿಂದ್, “ಟಿಆರ್‌ಎಸ್ ಗೂಂಡಾಗಳು ನನ್ನ ನಿವಾಸದ ಮೇಲೆ ದಾಳಿ ಮಾಡಿದರು. ನನ್ನ ಮನೆಯನ್ನು ಧ್ವಂಸಗೊಳಿಸಿದರು. ಅವರು ನನ್ನ ತಾಯಿಯನ್ನು ಹೆದರಿಸಿ, ಗಲಭೆ ಸೃಷ್ಟಿಸಿದರು” ಎಂದು ಹೇಳಿದ್ದರು.
ಇದನ್ನೂ ಓದಿ: ಬಿಜೆಪಿ ಸೇರಲು ಟಿಆರ್‌ಎಸ್ ಶಾಸಕರಿಗೆ ಹಣದ ಆಮಿಷ ಪ್ರಕರಣ: ಬಿ.ಎಲ್.ಸಂತೋಷ್‌ಗೆ ನೋಟಿಸ್
ಕವಿತಾ ತಮಗೆ ಚಪ್ಪಲಿಯಿಂದ ಹೊಡೆಯುತ್ತೇನೆ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅರವಿಂದ್, ಈ ಬಗ್ಗೆ ಪೊಲೀಸರಿಗೆ ದೂರು ದಾಖಲಿಸಿರುವುದಾಗಿ ಘೋಷಿಸಿದರು. ಕವಿತಾ ಅವರ ತಂದೆ ಕೆಸಿಆರ್ ಅವರಿಗೆ ನಾನು ಚಪ್ಪಲಿಯಿಂದ ಹೊಡೆಯುತ್ತೇನೆ. ಬಿಜೆಪಿ ಪಕ್ಷದ ಮಹಿಳಾ ಘಟಕ ಕವಿತಾಳನ್ನು ನೋಡಿಕೊಳ್ಳುತ್ತದೆ ಎಂದು ಹೇಳಿದ್ದರು.
#WATCH | Arvind ji is like ‘Keechar’, we don’t throw stones at him. He is a ‘Chhichora’ kind of person. He has made an allegation today & that is why I’m here to talk to people. It’s unfortunate that such a person is in BJP: TRS MLC K Kavitha pic.twitter.com/2ZJySs8OON
— ANI (@ANI) November 18, 2022
ಈ ಘಟನೆಗೆ ಸಂಬಂಧಿಸಿದಂತೆ ಸುಮಾರು 50 ಅನಾಮಧೇಯ ವ್ಯಕ್ತಿಗಳ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ. 8 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.