Bank Strike Postponed: ಇಂದು ನಡೆಯಬೇಕಿದ್ದ ಬ್ಯಾಂಕ್ ಬಂದ್ ರದ್ದು; ಬ್ಯಾಂಕಿಂಗ್ ವಹಿವಾಟಿಗೆ ತೊಂದರೆಯಿಲ್ಲ

ಈ ತಿಂಗಳ ಮೂರನೇ ಶನಿವಾರವಾದ ಇಂದು (ನವೆಂಬರ್ 19) ಬ್ಯಾಂಕುಗಳು ತೆರೆದಿರುತ್ತವೆ. ಎರಡನೇ ಮತ್ತು ನಾಲ್ಕನೇ ಶನಿವಾರದಂದು ಎಲ್ಲಾ ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತದೆ.

Bank Strike Postponed: ಇಂದು ನಡೆಯಬೇಕಿದ್ದ ಬ್ಯಾಂಕ್ ಬಂದ್ ರದ್ದು; ಬ್ಯಾಂಕಿಂಗ್ ವಹಿವಾಟಿಗೆ ತೊಂದರೆಯಿಲ್ಲ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Nov 19, 2022 | 11:31 AM

ನವದೆಹಲಿ: ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘವು (All India Bank Employees’ Association) ಇಂದು ರಾಷ್ಟ್ರವ್ಯಾಪಿ ಬ್ಯಾಂಕ್ (Bank Bandh) ಮುಷ್ಕರವನ್ನು ಆಯೋಜಿಸಿತ್ತು. ಆದರೆ, ಇಂದು ನಡೆಯಬೇಕಿದ್ದ ಬ್ಯಾಂಕ್ ಬಂದ್ ಅನ್ನು ಹಿಂತೆಗೆದುಕೊಂಡಿದೆ. ಹೀಗಾಗಿ, ಭಾರತದಾದ್ಯಂತ ಬ್ಯಾಂಕ್‌ಗಳು ಇಂದು ಕಾರ್ಯನಿರ್ವಹಿಸಲಿವೆ. ಭಾರತೀಯ ಬ್ಯಾಂಕ್‌ಗಳ ಸಂಘವು ಬ್ಯಾಂಕ್ ಉದ್ಯೋಗಿಗಳ ಹೆಚ್ಚಿನ ಬೇಡಿಕೆಗಳಿಗೆ ಒಪ್ಪಿಗೆ ನೀಡಿದ ನಂತರ ಈ ಮುಷ್ಕರವನ್ನು ವಾಪಾಸ್ ಪಡೆಯಲಾಗಿದೆ.

ಹೀಗಾಗಿ, ಯಾವುದೇ ರೀತಿಯ ಅಡಚಣೆಯಿಲ್ಲದೆ ಎಲ್ಲಾ ಬ್ಯಾಂಕ್ ವಹಿವಾಟುಗಳನ್ನು ನಡೆಸಲಾಗುತ್ತದೆ. ಈ ಬಗ್ಗೆ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸಿಎಚ್ ವೆಂಕಟಾಚಲಂ ಮಾತನಾಡಿ, ಐಬಿಎ ಮತ್ತು ಬ್ಯಾಂಕ್‌ಗಳು ದ್ವಿಪಕ್ಷೀಯವಾಗಿ ಸಮಸ್ಯೆಗಳನ್ನು ಪರಿಹರಿಸಲು ಒಪ್ಪಿಕೊಂಡಿವೆ. ಹೀಗಾಗಿ, ಈ ಮುಷ್ಕರವನ್ನು ಮುಂದೂಡಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: Bank Strike: ಬ್ಯಾಂಕ್ ಕೆಲಸಗಳಿದ್ದರೆ ಇಂದೇ ಮಾಡಿಕೊಳ್ಳಿ; ನಾಳೆ ಮುಷ್ಕರ

ಈ ತಿಂಗಳ ಮೂರನೇ ಶನಿವಾರವಾದ ಇಂದು (ನವೆಂಬರ್ 19) ಬ್ಯಾಂಕುಗಳು ತೆರೆದಿರುತ್ತವೆ. ಎರಡನೇ ಮತ್ತು ನಾಲ್ಕನೇ ಶನಿವಾರದಂದು ಎಲ್ಲಾ ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತದೆ. ಕೈಗಾರಿಕಾ ವಿವಾದ ಕಾಯ್ದೆ ಉಲ್ಲಂಘನೆ, ವರ್ಗಾವಣೆ ಮೂಲಕ ನೌಕರರಿಗೆ ಕಿರುಕುಳ, ಕಾರ್ಮಿಕ ಸಂಘಟನೆಗಳ ಮೇಲೆ ದಾಳಿ ಹೆಚ್ಚಳ ಮತ್ತು ಸಿಎಸ್‌ಬಿ ಬ್ಯಾಂಕ್‌ನಲ್ಲಿ ವೇತನ ಪರಿಷ್ಕರಣೆ ನಿರಾಕರಣೆ ಸೇರಿದಂತೆ ಹಲವು ವಿಷಯಗಳ ಕುರಿತು ಬ್ಯಾಂಕ್ ನೌಕರರು ಇಂದು ಮುಷ್ಕರ ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ, ಅದೀಗ ರದ್ದಾಗಿದೆ.

ಸಮಸ್ಯೆ ಬಗೆಹರಿಸಲು ಐಬಿಎ ಮತ್ತು ಎಐಬಿಇಎ ನಡುವೆ ಬುಧವಾರ ಸಭೆ ನಡೆದಿದ್ದರೂ ಯಾವುದೇ ಪರಿಹಾರ ಸಿಕ್ಕಿರಲಿಲ್ಲ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಕೂಡ ಬ್ಯಾಂಕ್ ಮುಷ್ಕರಕ್ಕೆ ತನ್ನ ಬೆಂಬಲವನ್ನು ನೀಡಿತ್ತು. ದ್ವಿಪಕ್ಷೀಯತೆ ಮತ್ತು ಪರಸ್ಪರ ಚರ್ಚೆಯ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಬದ್ಧವಾಗಿದೆ ಎಂದು ಸಂಸ್ಥೆ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ