Food Poisoning: ವಿಷಪೂರಿತ ಆಹಾರ ಸೇವಿಸಿ ಇಂದೋರ್ ವಿಶ್ವವಿದ್ಯಾಲಯದ 20 ವಿದ್ಯಾರ್ಥಿಗಳು ಅಸ್ವಸ್ಥ

|

Updated on: Apr 17, 2023 | 3:52 PM

ವಿಷಪೂರಿತ ಆಹಾರ ಸೇವಿಸಿ ಮಧ್ಯಪ್ರದೇಶದ ಇಂದೋರ್ ವಿಶ್ವವಿದ್ಯಾಲಯದ ಹಾಸ್ಟೆಲ್​ನ 20 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಕುರಿತು ಮಾಹಿತಿ ಲಭ್ಯವಾಗಿದೆ.

Food Poisoning: ವಿಷಪೂರಿತ ಆಹಾರ ಸೇವಿಸಿ ಇಂದೋರ್ ವಿಶ್ವವಿದ್ಯಾಲಯದ 20 ವಿದ್ಯಾರ್ಥಿಗಳು ಅಸ್ವಸ್ಥ
ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ
Image Credit source: NDTV
Follow us on

ವಿಷಪೂರಿತ ಆಹಾರ ಸೇವಿಸಿ ಮಧ್ಯಪ್ರದೇಶದ ಇಂದೋರ್ ವಿಶ್ವವಿದ್ಯಾಲಯದ ಹಾಸ್ಟೆಲ್​ನ 20 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಭಾನುವಾರ ತಡರಾತ್ರಿ ವಿದ್ಯಾರ್ಥಿಗಳು ವಾಂತಿ, ಭೇದಿ ಮತ್ತು ಹೊಟ್ಟೆನೋವಿನ ಬಗ್ಗೆ ಮಾಹಿತಿ ನೀಡಿದ್ದರು ಎಂದು ಎಸ್​ಎಜಿ ರಿಜಿಸ್ಟ್ರಾರ್ ಮನೀಶ್ ಚೌಧರಿ ಪಿಟಿಐಗೆ ತಿಳಿಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿಗಳಲ್ಲಿ ಎಂಟು ಜನರ ಸ್ಥಿತಿ ಉತ್ತಮವಾಗಿದೆ, 10 ರಿಂದ 12 ವಿದ್ಯಾರ್ಥಿಗಳು ರಾವು ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳ ಕೆಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ, ಅದರಲ್ಲಿ ಒಬ್ಬರು ಭಾನುವಾರ ಸಂಜೆ ಹಾಸ್ಟೆಲ್ ಮೆಸ್‌ನಲ್ಲಿ ಊಟ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ.

ಆದರೆ ಹಾಸ್ಟೆಲ್‌ನ ಕ್ಯಾಂಟೀನ್‌ನಲ್ಲಿ ತಯಾರಿಸಿದ ಆಹಾರವು ಕಲುಷಿತವಾಗಿದೆ ಎಂಬುದನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನಿರಾಕರಿಸಿದೆ.
ನಮ್ಮ ಹಾಸ್ಟೆಲ್‌ನ ಅನೇಕ ವಿದ್ಯಾರ್ಥಿಗಳು ಹಗಲಿನಲ್ಲಿ ಪಟ್ಟಣಕ್ಕೆ ಹೋಗಿದ್ದರು ಮತ್ತು ಹೊರಗಿನಿಂದ ಆಹಾರವನ್ನು ಸೇವಿಸಿ ಹಿಂತಿರುಗಿರಬಹುದು.

ಮತ್ತಷ್ಟು ಓದಿ: Same food every day: ದಿನಾ ಒಂದೇ ರೀತಿಯ ಆಹಾರ ಸೇವಿಸುತ್ತಿದ್ದೀರಾ? ಸದಾ ಒಂದೇ ರೀತಿಯ ಆಹಾರ ತಿನ್ನುತ್ತಿದ್ದರೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ, ಜಾಗ್ರತೆ!

ಕೆಲವು ವಿದ್ಯಾರ್ಥಿಗಳು ಭಾನುವಾರ ಹಾಸ್ಟೆಲ್ ಆವರಣದ ಹೊರಗೆ ಮಾಂಸಾಹಾರವನ್ನು ಬೇಯಿಸಿ ತಿಂದಿರುವುದನ್ನು ಕಂಡಿದ್ದೇನೆ ಎಂದು ಚೌಧರಿ ಹೇಳಿದರು.

ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ಸುಮಾರು 290 ವಿದ್ಯಾರ್ಥಿಗಳು ಇದ್ದಾರೆ, ಆದರೆ ಭಾನುವಾರದಂದು ಮೆಸ್‌ನಲ್ಲಿ ಆಹಾರ ಸೇವಿಸಿದ ಇತರ ವಿದ್ಯಾರ್ಥಿಗಳು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ