AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bihar Governor Convoy Vehicle Accident: ಬಿಹಾರ ರಾಜ್ಯಪಾಲರ ಬೆಂಗಾವಲು ವಾಹನ ಅಪಘಾತ, ಹಲವರಿಗೆ ಗಾಯ

ಬಿಹಾರ ರಾಜ್ಯಪಾಲ (Bihar Governor) ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ. ಹಾಜಿಪುರದ ಭಗವಾನ್‌ಪುರದ ರತನ್‌ಪುರ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.

Bihar Governor Convoy Vehicle  Accident: ಬಿಹಾರ ರಾಜ್ಯಪಾಲರ ಬೆಂಗಾವಲು ವಾಹನ ಅಪಘಾತ, ಹಲವರಿಗೆ ಗಾಯ
ಬಿಹಾರ ಅಪಘಾತ
ನಯನಾ ರಾಜೀವ್
|

Updated on: Apr 17, 2023 | 2:56 PM

Share

ಬಿಹಾರ ರಾಜ್ಯಪಾಲ (Bihar Governor) ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ. ಹಾಜಿಪುರದ ಭಗವಾನ್‌ಪುರದ ರತನ್‌ಪುರ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಪಾಟ್ನಾದಿಂದ ಮುಜಾಫರ್‌ಪುರಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಅಪಘಾತದಲ್ಲಿ ಅಗ್ನಿಶಾಮಕ ವಾಹನ ಪಲ್ಟಿಯಾಗಿದೆ. ರಸ್ತೆ ಅಪಘಾತದಲ್ಲಿ ಒಟ್ಟು 9 ಮಂದಿ ಗಾಯಗೊಂಡಿದ್ದಾರೆ. ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಪಾಟ್ನಾದಿಂದ ಮುಜಾಫರ್‌ಪುರಕ್ಕೆ ತೆರಳುತ್ತಿದ್ದರು.

ಚಾಲಕನ ನಿಯಂತ್ರಣ ತಪ್ಪಿ ಅಗ್ನಿಶಾಮಕ ವಾಹನ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ, ಬಳಿಕ ರಾಂಗ್ ಸೈಡ್ ನಲ್ಲಿ ಹೋಗಿ ಪ್ರಯಾಣಿಕರು ತುಂಬಿದ್ದ ಆಟೋಗೆ ಡಿಕ್ಕಿ ಹೊಡೆದಿದೆ. ಬಳಿಕ ರಾಜ್ಯಪಾಲರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಗ್ನಿಶಾಮಕ ವಾಹನ, ಆಟೋ ಚಾಲಕ ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ. ಸವಾರರ ಸ್ಥಿತಿ ಗಂಭೀರವಾಗಿದೆ.

ಘಟನೆಯ ನಂತರ ಸುತ್ತಮುತ್ತ ಜನರ ಗುಂಪು ನೆರೆದಿತ್ತು. ಸ್ಥಳೀಯರು ರಕ್ಷಣಾ ಕಾರ್ಯ ಆರಂಭಿಸಿ, ಗಾಯಾಳುಗಳನ್ನು ತರಾತುರಿಯಲ್ಲಿ ಹಾಜಿಪುರ ಸದರ್ ಆಸ್ಪತ್ರೆಗೆ ದಾಖಲಿಸಲಾಯಿತು. ಎಲ್ಲರಿಗೂ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ನಂತರ ಅಗ್ನಿಶಾಮಕ ವಾಹನ ಪಲ್ಟಿಯಾಗಿದೆ. ಡಿಕ್ಕಿಯ ರಭಸಕ್ಕೆ ಆಟೋದ ಗಾಜು ಪುಡಿಪುಡಿಯಾಗಿದೆ.

ಮತ್ತಷ್ಟು ಓದಿ: Telangana: ಟೈರ್ ಸ್ಫೋಟ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು ಬಿಜೆಪಿ ನಾಯಕಿ ನೀರಜಾ ರೆಡ್ಡಿ ನಿಧನ

ರಾಜ್ಯಪಾಲರು ಅಥವಾ ಇತರ ಯಾವುದೇ ಭದ್ರತಾ ಸಿಬ್ಬಂದಿಗೆ ಏನೂ ಆಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಕೆಲ ಗಾಯಾಳುಗಳ ಮಾಹಿತಿ ಲಭ್ಯವಾಗಿದೆ, ಇವರಲ್ಲಿ ರಾಜೇಶ್ವರ್ ದಾಸ್, ಸಂಜಯ್ ಸಾಹ್ನಿ, ಲಾಲ್ ಸಾಹ್ನಿ, ವಂದನಾ ಕುಮಾರಿ, ಸಂತೋಷ್ ಕುಮಾರ್, ಸತ್ನಾರಾಯಣ ಪಾಸ್ವಾನ್ ಮುಂತಾದವರು ಸೇರಿದ್ದಾರೆ. ಅಗ್ನಿಶಾಮಕ ವಾಹನದಲ್ಲಿ ಒಟ್ಟು ಮೂವರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More