Global Investors Summit 2023: ಇಂದಿನಿಂದ 2 ದಿನ ಇಂದೋರ್‌ನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ

| Updated By: ಆಯೇಷಾ ಬಾನು

Updated on: Jan 11, 2023 | 8:30 AM

ಮಧ್ಯಪ್ರದೇಶದ ಇಂದೋರ್‌ನಲ್ಲಿ ಎರಡು ದಿನಗಳ ಜಾಗತಿಕ ಹೂಡಿಕೆದಾರರ ಶೃಂಗಸಭೆ (ಜಿಐಎಸ್) ಆಯೋಜಿಸಲಾಗಿದ್ದು ಅದು ಇಂದಿನಿಂದ ಆರಂಭವಾಗಲಿದೆ.

Global Investors Summit 2023: ಇಂದಿನಿಂದ 2 ದಿನ ಇಂದೋರ್‌ನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ
ಜಾಗತಿಕ ಹೂಡಿಕೆದಾರರ ಶೃಂಗಸಭೆ
Follow us on

ಮಧ್ಯಪ್ರದೇಶದ ಇಂದೋರ್‌ನ ಬ್ರಿಲಿಯಂಟ್ ಕನ್ವೆನ್ಷನ್ ಸೆಂಟರ್‌ನಲ್ಲಿ ಎರಡು ದಿನಗಳ ಜಾಗತಿಕ ಹೂಡಿಕೆದಾರರ ಶೃಂಗಸಭೆ (ಜಿಐಎಸ್)(Global Investors Summit 2023 in Indore) ಆಯೋಜಿಸಲಾಗಿದ್ದು ಅದು ಇಂದಿನಿಂದ ಆರಂಭವಾಗಲಿದೆ. ಬುಧವಾರದಿಂದ ಪ್ರಾರಂಭವಾಗಲಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ ಭಾರತ ಮತ್ತು ವಿದೇಶದ ಹೂಡಿಕೆದಾರರು ಆಗಮಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನವರಿ 11 ಮತ್ತು 12ರಂದು ನಡೆಯಲಿರುವ ಶೃಂಗಸಭೆಯಲ್ಲಿ ವಿವಿಧ ವಿಷಯಗಳ ಕುರಿತು 19 ಪ್ಯಾರಲಲ್ ಸೆಕ್ಷನ್​ಗಳಲ್ಲಿ ಚರ್ಚಿಸಲಾಗುವುದು. ಕಳೆದ ವರ್ಷ ನವೆಂಬರ್‌ನಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ನಿವಾಸದಲ್ಲಿ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸಿ ಇಂದೋರ್‌ನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ ಭಾಗವಹಿಸಲು ಆಹ್ವಾನಿಸಿದ್ದರು.

“ನಾನು ಮಧ್ಯಪ್ರದೇಶಕ್ಕೆ ಸಾಧ್ಯವಾದಷ್ಟು ಹೂಡಿಕೆಯನ್ನು ತರಲು ಹೂಡಿಕೆದಾರರೊಂದಿಗೆ ಪ್ರತಿದಿನ 18 ಗಂಟೆಗಳ ಕಾಲ ಕಳೆಯುತ್ತೇನೆ. 314 ಕಂಪನಿಗಳ ಪ್ರತಿನಿಧಿಗಳನ್ನು ಭೇಟಿ ಮಾಡುತ್ತೇನೆ. ಅನೇಕ ಕೈಗಾರಿಕೋದ್ಯಮಿಗಳು ಚೀನಾದಿಂದ ಹಿಂತಿರುಗಲು ಬಯಸುತ್ತಾರೆ, ಆದ್ದರಿಂದ ನಾವು ಅವರನ್ನು ಮಧ್ಯಪ್ರದೇಶದ ಕಡೆಗೆ ಆಕರ್ಷಿಸಲು ಬಯಸುತ್ತೇವೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ:ಕಮ್ ಡೈನ್ ವಿತ್ ಮಿ ರಿಯಾಲಿಟಿ ಶೋದ ಸ್ಟಾರ್ ಪ್ರತಿಸ್ಪರ್ಧಿ ನಿಕೊಲಾಸ್ ಪೌಲ್ ಆತ್ಮಹತ್ಯೆ ಮೂಲಕ ಸತ್ತಿದ್ದು ಅಂತ ಖಚಿತಪಟ್ಟಿದೆ: ಪೊಲೀಸ್ 

ಅಧಿಕೃತ ಹೇಳಿಕೆಯ ಪ್ರಕಾರ, ಕೃಷಿ, ಜವಳಿ ಮತ್ತು ಗಾರ್ಮೆಂಟ್ಸ್, ಆಹಾರ ಮತ್ತು ಡೈರಿ ಸಂಸ್ಕರಣೆ, ಔಷಧೀಯ ಮತ್ತು ಆರೋಗ್ಯ ರಕ್ಷಣೆ, ನೈಸರ್ಗಿಕ ಅನಿಲ ಮತ್ತು ಪೆಟ್ರೋಕೆಮಿಕಲ್ಸ್ ವಲಯ, ನವೀಕರಿಸಬಹುದಾದ ಇಂಧನ, ಐಟಿ, ಪ್ರವಾಸೋದ್ಯಮ, ಲಾಜಿಸ್ಟಿಕ್ ಮತ್ತು ವೇರ್ ಹೌಸಿಂಗ್, ನಗರ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಅನೇಕ ವಿಷಯಗಳ ಕುರಿತು ವಿಶೇಷ ಅಧಿವೇಶನಗಳು ಶೃಂಗಸಭೆಯ ಸಮಯದಲ್ಲಿ ಚರ್ಚೆ ನಡೆಯಲಿದೆ. ಇನ್ನು ವಿಶೇಷವೆಂದರೆ ಜವಳಿ ಮತ್ತು ಗಾರ್ಮೆಂಟ್‌ಗೆ ಹೆಚ್ಚಿನ ಗಮನ ನೀಡಲಾಗುವುದು ಏಕೆಂದರೆ ಇದು ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ತರುತ್ತದೆ ಎಂದು ಸಿಎಂ ಹೇಳಿದರು. ಇದಲ್ಲದೆ, ನಾವು ಫಾರ್ಮಾ, ಐಟಿ, ಪ್ರವಾಸೋದ್ಯಮ, ಆಟೋಮೊಬೈಲ್, ಕೃಷಿ-ಕಂಪನಿಗಳು ಮತ್ತು ಇತರರ ಹೂಡಿಕೆಯತ್ತ ಗಮನ ಹರಿಸುತ್ತೇವೆ ಎಂದರು.

ಕೈಗಾರಿಕಾ ಇಲಾಖೆಯ ಅಧಿಕಾರಿಗಳ ಪ್ರಕಾರ, ಶೃಂಗಸಭೆಯ ಎರಡನೇ ದಿನ, ಮಧ್ಯಪ್ರದೇಶದಲ್ಲಿ ಹೂಡಿಕೆ ತರಲು ವಿಷಯಗಳ ಕುರಿತು ಅಧಿವೇಶನಗಳು ನಡೆಯಲಿವೆ. ಮಧ್ಯಪ್ರದೇಶದಿಂದ ರಫ್ತು ಸಾಧ್ಯತೆಗಳು, ಸಾಮಾಜಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ಆರ್ಥಿಕ ನೆರವು, ಭಾರತ ಮತ್ತು ಇಸ್ರೇಲ್, ಯುಎಸ್ಎ ಮತ್ತು ಯುಎಇ ಗುಂಪಿನ ನಡುವೆ ಜಂಟಿ ಹೂಡಿಕೆ ಕುರಿತು ಚರ್ಚೆಗಳು ನಡೆಯಲಿವೆ ಎಂದು ಸಿಎಂ ಶಿವರಾಜ್ ಸಿಂಗ್ ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:30 am, Wed, 11 January 23