ಉರಿ ಸೆಕ್ಟರ್ನಲ್ಲಿ ಭಯೋತ್ಪಾದಕರಿಂದ ಭಾರತದೊಳಗೆ ನುಸುಳುವ ಪ್ರಯತ್ನ; ಪ್ರದೇಶದಲ್ಲಿ ಇಂಟರ್ನೆಟ್ ಮತ್ತು ಪೋನ್ ಸೇವೆ ಸ್ಥಗಿತ
ಈ ವರ್ಷದಲ್ಲಿ ನಡೆದಿರುವ ಎರಡನೇ ನುಸುಳು ಪ್ರಯತ್ನ ಇದಾಗಿದೆ ಅಂತಲೂ ಸೇನೆ ತಿಳಿಸಿದೆ. ಅದರೆ, ಬಾರತೀಯ ಸೇನೆಯ ಹಿರಿಯ ಕಮಾಂಡರ್ ಒಬ್ಬರು ನೀಡಿರುವ ಮಾಹಿತಿ ಪ್ರಕಾರ ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಈ ವರ್ಷ ಒಮ್ಮೆಯೂ ಕದನ ವಿರಾಮ ಉಲ್ಲಂಘಿಸುವ ಘಟನೆ ನಡೆದಿಲ್ಲ
ಶ್ರೀನಗರ: ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಭಯೋತ್ಪಾದಕರು ಉರಿ ಸೆಕ್ಟರ್ನ ಗಡಿ ನಿಯಂತ್ರಣ ರೇಖೆಯ ಬಳಿ ಭಾರತದೊಳಗೆ ನುಸುಳಲು ಮಾಡಿರುವ ಪ್ರಯತ್ನದ ಬಳಿಕ ಆ ಪ್ರದೇಶದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಪೋನ್ಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಉನ್ನತ ಮೂಲಗಳು ಸೋಮವಾರ ತಿಳಿಸಿವೆ. ಕಳೆದ 30 ಗಂಟೆಗಳಿಂದ ನುಸುಳುವಿಕೆ-ತಡೆ ಕಾರ್ಯಾಚರಣೆ ಸದರಿ ಪ್ರದೇಶದಲ್ಲಿ ಜಾರಿಯಲ್ಲಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಹೆಚ್ಚಿನ ಸೇನೆಯ ಅವಶ್ಯಕತೆಯನ್ನು ಮನಗಂಡಿರುವುದರಿಂದ ಪಡೆಗಳನ್ನು ರವಾನಿಸುವಂತೆ ಮನವಿ ಮಾಡಲಾಗಿದೆ ಎಂದು ಸೇನೆಯ ಮೂಲಗಳು ಹೇಳಿವೆ.
ಈ ವರ್ಷದಲ್ಲಿ ನಡೆದಿರುವ ಎರಡನೇ ನುಸುಳು ಪ್ರಯತ್ನ ಇದಾಗಿದೆ ಅಂತಲೂ ಸೇನೆ ತಿಳಿಸಿದೆ. ಅದರೆ, ಬಾರತೀಯ ಸೇನೆಯ ಹಿರಿಯ ಕಮಾಂಡರ್ ಒಬ್ಬರು ನೀಡಿರುವ ಮಾಹಿತಿ ಪ್ರಕಾರ ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಈ ವರ್ಷ ಒಮ್ಮೆಯೂ ಕದನ ವಿರಾಮ ಉಲ್ಲಂಘಿಸುವ ಘಟನೆ ನಡೆದಿಲ್ಲ ಮತ್ತು ಗಡಿಯಾಚೆಯಿಂದ ಯಾವುದೇ ಪ್ರಚೋದನಕಾರಿ ಪ್ರಯತ್ನ ಸಂಭವಿಸಿಲ್ಲ.
‘ಈ ವರ್ಷ ಒಮ್ಮೆಯೂ ಕದನ ವಿರಾಮದ ಉಲ್ಲಂಘನೆಯಾಗಿಲ್ಲ. ಕದನ ವಿರಾಮದ ಯಾವುದೇ ಉಲ್ಲಂಘನೆ ಎದುರಿಸಲು ನಾವು ಸನ್ನದ್ಧರಾಗಿದ್ದೇವೆ. ಆದರೆ ವಾಸ್ತವ ಸಂಗತಿ ಎಂದರೆ ಗಡಿಯಾಚೆಯಿಂದ ಅಂಥ ಪ್ರಯತ್ನಗಳು ನಡೆದೇ ಇಲ್ಲ,’ ಎಂದು 15 ಕಾರ್ಪ್ಸ್ನ ಕಮಾಂಡಿಂಗ್ ಜನರಲ್ ಅಧಿಕಾರಿ ಲೆಫ್ಟಿನಂಟ್ ಜನರಲ್ ಡಿಪಿ ಪಾಂಡ್ಯ ಹೇಳಿದ್ದಾರೆ.
‘ನುಸುಳುವಿಕೆ ಬಗ್ಗೆ ಹೇಳುವುದಾದರೆ, ಹಿಂದೆ ನಡೆಯುತ್ತಿದ್ದ ಹಾಗೆ ಈಗ ಆಗುತ್ತಿಲ್ಲ. ಆದರೂ ಕೆಲ ಪ್ರಯತ್ನಗಳು ನಡೆದಿವೆ, ಆದರೆ ಯಶ ಕಂಡಿದ್ದು ಮಾತ್ರ ಕೇವಲ ಎರಡು. ಅದರಲ್ಲಿ ಒಬ್ಬನನ್ನು ನಾವು ಬಂಡಿಪೋರ್ನಲ್ಲಿ ಕೊಂದು ಹಾಕಿದ್ದೇವೆ ಮತ್ತು ಎರಡನೇಯವನ ತಲಾಶ್ ಜಾರಿಯಲ್ಲಿದೆ,’ ಎಂದು ಅಧಿಕಾರಿ ಹೇಳಿದ್ದಾರೆ.
‘ಉರಿ ಸೆಕ್ಟರ್ನಲ್ಲಿ ಕಳೆದ 24 ಗಂಟೆಗಳಿಂದ ಕಾರ್ಯಾಚರಣೆಯೊಂದು ಜಾರಿಯಲ್ಲಿದೆ. ಭಾರತದೊಳಕ್ಕೆ ನುಸುಳುವ ಪ್ರಯತ್ನ ನಡೆದಿದೆ ಅಂತ ನಾವು ಅಂದುಕೊಳ್ಳುತ್ತಿದ್ದೇವೆ. ಅವರನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಅವರು ಗಡಿ ದಾಟಿ ಒಳಗೆ ಬಂದಿದ್ದಾರೋ ಅಥವಾ ಪ್ರಯತ್ನ ನಡೆಸಿ ವಾಪಸ್ಸು ಹೋಗಿದ್ದಾರೋ ಅನ್ನೋದು ಇನ್ನೂ ಖಚಿತವಾಗಿಲ್ಲ. ಆದರೆ ನಾವು ಅಲರ್ಟ್ ಆಗಿದ್ದೇವೆ. ಭಯೋತ್ಪಾದಕರು ನುಸುಳಿದ್ದರೂ ಅವರನ್ನು ಮಟ್ಟ ಹಾಕದೆ ಬಿಡುವುದಿಲ್ಲ,’ ಎಂದು ಪಾಂಡ್ಯ ಹೇಳಿದರು.
ಇದನ್ನೂ ಓದಿ: ಭಯೋತ್ಪಾದಕರ ಗುಂಡಿಗೆ ಜಮ್ಮು ಮತ್ತು ಕಾಶ್ಮೀರ ಅಪ್ನಿ ಪಕ್ಷದ ಕಾರ್ಯಕರ್ತ ಬಲಿ, ಹೆಚ್ಚುತ್ತಿವೆ ಉಗ್ರರ ದಾಳಿಗಳು