ಮುಂದುವರಿದ ಮಿಷನ್ ಸಾಗರ್; ಜಕಾರ್ತ ಬಂದರು ತಲುಪಿದ ಐಎನ್ಎಸ್ ಐರಾವತ್
ಜಕಾರ್ತದ ತಂಜುಂಗ್ ಪ್ರಿಯಕ್ ಬಂದರಿನಲ್ಲಿ ನಿಂತಿರುವ ಐಎನ್ಎಸ್ ಐರಾವತ್ ಹಡಗಿನ ಫೋಟೋವನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಶೇರ್ ಮಾಡಿಕೊಂಡಿದ್ದಾರೆ
ದೆಹಲಿ: ಇಡೀ ಜಗತ್ತು ಕೊರೊನಾ ಸೋಂಕಿ (Covid 19)ನಿಂದ ಸಂಕಷ್ಟಕ್ಕೀಡಾಗಿದೆ. ಭಾರತವೂ ಸಹ ವೈರಸ್ ಭೀಕರತೆಯನ್ನು ಕಂಡಿದೆ. ಆದರೆ ನಮ್ಮ ದೇಶ ಈ ಹೋರಾಟದಲ್ಲಿ ಬೇರೆ ದೇಶಗಳಿಗೂ ತನ್ನ ಕೈಲಾದ ಸಹಾಯ ಮಾಡಿದೆ. ಪ್ರಾರಂಭದಲ್ಲಿ ಕೊರೊನಾ ಮಾತ್ರೆಗಳಿಂದ ಹಿಡಿದು, ಕೊವಿಡ್ 19 ಲಸಿಕೆಗಳು, ದ್ರವೀಕೃತ ವೈದ್ಯಕೀಯ ಆಕ್ಸಿಜನ್ (Liquid Medical Oxygen)ನ್ನು ಬೇರೆ ಅಗತ್ಯ ಇರುವ ದೇಶಗಳಿಗೆ ಕಳಿಸಿದೆ. ಹಾಗೇ, ಈಗ ಮತ್ತೆ ಇಂಡೋನೇಷ್ಯಾ (Indonesia) ದೇಶಕ್ಕೆ ದ್ರವೀಕೃತ ವೈದ್ಯಕೀಯ ಆಮ್ಲಜನಕ (Liquid Medical Oxygen)ದ 10 ಕಂಟೇನರ್ಗಳನ್ನು ಕಳಿಸಿಕೊಟ್ಟಿದೆ. ಈ ಕಂಟೇನರ್ಗಳನ್ನು ಹೊತ್ತ ಭಾರತೀಯ ನೌಕಾಪಡೆಯ ಲ್ಯಾಂಡಿಂಗ್ ಶಿಪ್ ಐಎನ್ಎಸ್ ಐರಾವತ್ ಇಂದು ಇಂಡೋನೇಷ್ಯಾದ ರಾಜಧಾನಿ ಜಕಾರ್ತಕ್ಕೆ ತಲುಪಿದೆ.
ಈ ಬಗ್ಗೆ ಟ್ವೀಟ್ ಮಾಡಿಕೊಂಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಜಕಾರ್ತದ ತಂಜುಂಗ್ ಪ್ರಿಯಕ್ ಬಂದರಿನಲ್ಲಿ ನಿಂತಿರುವ ಐಎನ್ಎಸ್ ಐರಾವತ್ ಹಡಗಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ ಮತ್ತು ಭಾರತೀಯ ನೌಕಾಪಡೆಯನ್ನು ಶ್ಲಾಘಿಸಿದ್ದಾರೆ.
INS Airavat arrives in Indonesia with Oxygen tanks.
Act East in action once again.
Applaud the actions of Indian Navy.#MissionSAGAR pic.twitter.com/ryLAemkAm8
— Dr. S. Jaishankar (@DrSJaishankar) August 24, 2021
ಭಾರತದ ನೌಕಾಪಡೆಯಲ್ಲಿರುವ ಈ ಐರಾವತ್ ಹಡಗುಗಳು ಉಭಯಚರ ಯುದ್ಧ ನೌಕೆಗಳಾಗಿವೆ. ಹಾಗೇ, ವಿಪತ್ತು ಪರಿಹಾರ ಕಾರ್ಯಾಚರಣೆ ಮತ್ತು ಮಾನವರಿಗೆ ನೆರವು ನೀಡುವ ಕಾರ್ಯಾಚರಣೆ ಎರಡಕ್ಕೂ ಬಳಕೆಯಾಗುತ್ತದೆ. ಅದರಲ್ಲೂ ಈ ಹಿಂದೆ ಹಿಂದೂ ಮಹಾಸಾಗರದಲ್ಲಿ ನಡೆದ ವಿವಿಧ ಕಾರ್ಯಾಚರಣೆಗಳಲ್ಲಿ ಈ ಐರಾವತ್ ಬಳಕೆಯಾಗಿದೆ. ಈ ಹಿಂದೆ ಕೂಡ ಐಎನ್ಎಸ್ ಐರಾವತ್ ಮೂಲಕವೇ ಇಂಡೋನೇಷ್ಯಾಕ್ಕೆ ವೈದ್ಯಕೀಯ ನೆರವು ನೀಡಲಾಗಿದೆ. ಆಗ 5 ದ್ರವೀಕೃತ ವೈದ್ಯಕೀಯ ಆಕ್ಸಿಜನ್ ಕಂಟೇನರ್ಗಳು ಮತ್ತು 300 ಆಕ್ಸಿಜನ್ ಸಾಂದ್ರಕಗಳನ್ನು ಸಾಗಿಸಲಾಗಿತ್ತು.
ಭಾರತ ಮತ್ತು ಇಂಡೋನೇಷ್ಯಾ ನಡುವೆ ಉತ್ತಮ ಬಾಂಧವ್ಯ ಇದ್ದು, ಕೊವಿಡ್ 19 ಕಾಲದಲ್ಲಿ ಆ ದೇಶಕ್ಕೆ ಭಾರತ ಸಹಾಯಕ್ಕೆ ನಿಂತಿದೆ. ಈಗ ಮಿಷನ್ ಸಾಗರ್ ಯೋಜನೆಯಡಿ ಮತ್ತೆ ನೆರವು ನೀಡಲಾಗಿದೆ. ಹಿಂದೂ ಮಹಾ ಸಾಗರದ ಸುತ್ತಲಿನ ದೇಶಗಳ ಭದ್ರತೆ ಮತ್ತು ಅಭಿವೃದ್ಧಿಗಾಗಿ ಪ್ರಧಾನಿ ಮೋದಿಯವರು ರೂಪಿಸಿದ SAGARನ ಭಾಗವಾಗಿ ಈ ಮಿಷನ್ ಸಾಗರ್ ರೂಪುಗೊಂಡಿದೆ.
ಇದನ್ನೂ ಓದಿ: ದಸರಾ ಜಂಬೂ ಸವಾರಿಗೆ ಆನೆಗಳ ಆಯ್ಕೆ; ವಿವಿಧ ಕ್ಯಾಂಪ್ಗಳಿಂದ 14 ಆನೆ ಪಟ್ಟಿ ಮಾಡಿದ ಅರಣ್ಯಾಧಿಕಾರಿಗಳು
Abhishek Bachchan: ಚಿತ್ರೀಕರಣದ ವೇಳೆ ಖ್ಯಾತ ನಟ ಅಭಿಷೇಕ್ ಬಚ್ಚನ್ಗೆ ಗಾಯ, ಆಸ್ಪತ್ರೆಗೆ ದಾಖಲು
(INS Airavat reached Indonesia with 10 liquid medical oxygen containers)