Bay of Bengal Earthquake: ಬಂಗಾಳ ಕೊಲ್ಲಿಯಲ್ಲಿ ಭೂಕಂಪ; ಚೆನ್ನೈ ಭಾಗದಲ್ಲಿ ಕಂಪಿಸಿದ ನೆಲ
Chennai: ಆಂಧ್ರಪ್ರದೇಶ ಹಾಗೂ ತಮಿಳುನಾಡಿಗೆ ಹೊಂದಿಕೊಂಡಿರುವ ಬಂಗಾಳ ಕೊಲ್ಲಿ ಸಮುದ್ರ ಭಾಗದಲ್ಲಿ, 10 ಕಿಲೋ ಮೀಟರ್ ಆಳದಲ್ಲಿ ಭೂಕಂಪ ಉಂಟಾಗಿರುವ ಬಗ್ಗೆ ರಾಷ್ಟ್ರೀಯ ಭೂಕಂಪಶಾಸ್ತ್ರದ ಕೇಂದ್ರ ಮಾಹಿತಿ ನೀಡಿದೆ.
ಚೆನ್ನೈ: ತಮಿಳುನಾಡು ರಾಜ್ಯ ರಾಜಧಾನಿ ಸಹಿತ ರಾಜ್ಯದ ವಿವಿಧ ಭಾಗಗಳಲ್ಲಿ ಮಂಗಳವಾರ (ಆಗಸ್ಟ್ 24) ಮಧ್ಯಾಹ್ನ ವೇಳೆಗೆ ಲಘು ಭೂಕಂಪನ ಉಂಟಾಗಿದೆ. ರಿಕ್ಟರ್ ಮಾಪನದಲ್ಲಿ 5.1 ರಷ್ಟು ತೀವ್ರತೆ ದಾಖಲಾಗಿದೆ. ಆಂಧ್ರಪ್ರದೇಶ ಹಾಗೂ ತಮಿಳುನಾಡಿಗೆ ಹೊಂದಿಕೊಂಡಿರುವ ಬಂಗಾಳ ಕೊಲ್ಲಿ ಸಮುದ್ರ ಭಾಗದಲ್ಲಿ, 10 ಕಿಲೋ ಮೀಟರ್ ಆಳದಲ್ಲಿ ಭೂಕಂಪ ಉಂಟಾಗಿರುವ ಬಗ್ಗೆ ರಾಷ್ಟ್ರೀಯ ಭೂಕಂಪಶಾಸ್ತ್ರದ ಕೇಂದ್ರ ಮಾಹಿತಿ ನೀಡಿದೆ.
ಈ ಭೂಕಂಪನವು ಮಧ್ಯಾಹ್ನ 12.35 ರ ಸುಮಾರಿಗೆ ಸಂಭವಿಸಿದ್ದು. ಆರನೇ ಕ್ಯಾಟಗರಿ ಅಂದರೆ ‘Very Strong’ ಎಂದು ಪರಿಗಣಿತವಾಗಿದೆ. ಭೂಕಂಪದ ಕೇಂದ್ರ ಬಿಂದು ಆಂಧ್ರಪ್ರದೇಶದ ಕಾಕಿನಾಡ ಪ್ರದೇಶದಿಂದ ದಕ್ಷಿಣಕ್ಕೆ 296 ಕಿಲೋ ಮೀಟರ್ ಹಾಗೂ ಚೆನ್ನೈ, ತಮಿಳುನಾಡು ಭಾಗದಿಂದ ದಕ್ಷಿಣಕ್ಕೆ 320 ಕಿಲೋ ಮೀಟರ್ ಅಂತರದಲ್ಲಿ ಇದೆ ಎಂದು ತಿಳಿಸಲಾಗಿದೆ.
Earthquake of Magnitude:5.1, Occurred on 24-08-2021, 12:35:50 IST, Lat: 14.40 & Long: 82.91, Depth: 10 Km ,Location: 296km SSE of kakinada, Andhra Pradesh, India for more information download the BhooKamp App https://t.co/6qwi4D40KO @ndmaindia @Indiametdept pic.twitter.com/dLB55CDm36
— National Center for Seismology (@NCS_Earthquake) August 24, 2021
ಚೆನ್ನೈನ ದಕ್ಷಿಣ ಭಾಗದಲ್ಲಿ ಭೂಕಂಪದ ಅನುಭವ ಆಗಿದೆ. ಕೆಲಸದಲ್ಲಿ ನಿರತರಾಗಿದ್ದವರು ಕಚೇರಿ, ಕಾರ್ಖಾನೆ ಬಿಟ್ಟು ಹೊರಗೆ ಬಂದಿದ್ದಾರೆ. ಹಲವರು ಸಾಮಾಜಿಕ ಜಾಲತಾಣದಲ್ಲಿ ಇತರರಿಗೂ ಹೀಗೆ ಅನುಭವ ಆಗಿರುವ ಬಗ್ಗೆ ಕೇಳಿದ್ದಾರೆ. ಮಾಹಿತಿ ಹಂಚಿಕೊಂಡಿದ್ದಾರೆ. ಭೂಕಂಪ ಆಗಿರುವುದಾಗಿ ಖಚಿತವಾಗಿದೆ. ಆದರೆ, ಯಾವುದೇ ಸುನಾಮಿ ಅಲರ್ಟ್ ಇಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Haiti Earthquake: ಹುಡುಕಿದಷ್ಟೂ ಸಿಗುತ್ತಿವೆ ಶವಗಳು; ಹೈಟಿ ಭೂಕಂಪ ಭೀಕರತೆ, ಸಾವಿನ ಸಂಖ್ಯೆ 2207ಕ್ಕೆ ಏರಿಕೆ
Gujarat Earthquake: ಕಚ್ನಲ್ಲಿ ಮತ್ತೆ ಭೂಕಂಪ; ಈ ಬಾರಿ 4.1ರಷ್ಟು ತೀವ್ರತೆ ದಾಖಲು
Published On - 2:33 pm, Tue, 24 August 21