Gujarat Earthquake: ಕಚ್​​ನಲ್ಲಿ ಮತ್ತೆ ಭೂಕಂಪ; ಈ ಬಾರಿ 4.1ರಷ್ಟು ತೀವ್ರತೆ ದಾಖಲು

ಇಂದು ಭೂಮಿಯಿಂದ 6.1 ಕಿಮೀ ಆಳದಲ್ಲಿ ಭೂಮಿ ಕಂಪನವಾಗಿದ್ದು, ಯಾವುದೇ ಮನೆ, ಕಟ್ಟಡಗಳು ಕುಸಿದ ವರದಿಯಾಗಿಲ್ಲ. ಹಾಗೇ, ಯಾರಿಗೂ ಗಾಯವಾಗಿಲ್ಲ ಎಂದು ಕಚ್​ ಜಿಲ್ಲಾಡಳಿತ ತಿಳಿಸಿದೆ.

Gujarat Earthquake: ಕಚ್​​ನಲ್ಲಿ ಮತ್ತೆ ಭೂಕಂಪ; ಈ ಬಾರಿ 4.1ರಷ್ಟು ತೀವ್ರತೆ ದಾಖಲು
ಪ್ರಾತಿನಿಧಿಕ ಚಿತ್ರ

ಗುಜರಾತ್​​ನ ಕಚ್​ ಜಿಲ್ಲೆಯಲ್ಲಿ ಇಂದು ಭೂಕಂಪ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 4.1ರಷ್ಟು ತೀವ್ರತೆ ದಾಖಲಾಗಿದೆ. ಇಂದು ಸಂಭವಿಸಿದ ಭೂಕಂಪದ ಕೇಂದ್ರಬಿಂದು ಧೋಲಾವಿರಾ ಎಂದು ಭೂಕಂಪನ ಸಂಶೋಧನಾ ಸಂಸ್ಥೆ (Seismological Research (ISR) ತಿಳಿಸಿದೆ. ಕಚ್​​ನಲ್ಲಿ ಆಗಸ್ಟ್​ 4ರಂದು ಕೂಡ ಭೂಮಿ ನಡುಗಿತ್ತು. ಅಂದು 4.0ರಷ್ಟು ತೀವ್ರತೆ ದಾಖಲಾಗಿತ್ತು.

ಇಂದು ಭೂಮಿಯಿಂದ 6.1 ಕಿಮೀ ಆಳದಲ್ಲಿ ಭೂಮಿ ಕಂಪನವಾಗಿದ್ದು, ಯಾವುದೇ ಮನೆ, ಕಟ್ಟಡಗಳು ಕುಸಿದ ವರದಿಯಾಗಿಲ್ಲ. ಹಾಗೇ, ಯಾರಿಗೂ ಗಾಯವಾಗಿಲ್ಲ. ಪ್ರಾಣ ಹಾನಿಯೂ ಉಂಟಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಹಾಗೇ, ಗುಜರಾತ್​ನ ಕಚ್​ ಜಿಲ್ಲೆ ಭೂಕಂಪ ವಲಯದಲ್ಲಿದ್ದು, ಇಲ್ಲಿ ಆಗಾಗ ಭೂಮಿ ಕಂಪನವಾಗುತ್ತದೆ.  ಅದರಲ್ಲೂ 2001ರ ಜನವರಿ 26ರಂದು ಅಂದರೆ ದೇಶದ 52ನೇ ಗಣರಾಜ್ಯೋತ್ಸವದ ದಿನದಂದು ಬೆಳಗ್ಗೆ 8.46ರಹೊತ್ತಿಗೆ ಕಚ್​ ಜಿಲ್ಲೆಯ ಭಚೌ ತಾಲೂಕಿನ ಚೋಬರಿಯ ಲ್ಲಿ ಭಯಂಕರ ಪ್ರಮಾಣದಲ್ಲಿ ಭೂಕಂಪ ಆಗಿತ್ತು.

2001ರಲ್ಲಿ ಘಟಿಸಿದ ಆ ಭೂಕಂಪದ ತೀವ್ರತೆ 7.7ರಷ್ಟು ದಾಖಲಾಗಿತ್ತು. ಮೆರ್ಕಲ್ಲಿ ಭೂಕಂಪ ಮಾಕದಲ್ಲಿ ‘ಎಕ್ಸ್​’ ಅಂದರೆ ಎಕ್ಸ್​ಟ್ರೀಮ್​ ತೀವ್ರತೆ ತೋರಿಸುತ್ತಿತ್ತು. ಅಂದು ಸುಮಾರು 3,40,000 ಕಟ್ಟಡಗಳು ಕುಸಿದಿದ್ದವು.  ಆಗ್ನೇಯ ಪಾಕಿಸ್ತಾನದ 18 ಮಂದಿ ಸೇರಿ, 13,805- 20,023 ಜನರು ಸಾವನ್ನಪ್ಪಿದ್ದರು. 167,000 ಮಂದಿ ಗಾಯಗೊಂಡಿದ್ದರು.

ಇದನ್ನೂ ಓದಿ: Tim David: Rcb ತಂಡ ಸಿಂಗಾಪೂರ್ ಕ್ರಿಕೆಟಿಗನನ್ನು ಆಯ್ಕೆ ಮಾಡಿದ್ದು ಯಾಕೆ? ಇಲ್ಲಿದೆ ಉತ್ತರ

IPL 2021: ಯುಎಇ ತಲುಪಿದ ಡೆಲಿ ಕ್ಯಾಪಿಟಲ್ಸ್ ತಂಡ; 1 ತಿಂಗಳ ನಂತರ ಮೊದಲ ಪಂದ್ಯ

Read Full Article

Click on your DTH Provider to Add TV9 Kannada