IPL 2021: ಯುಎಇ ತಲುಪಿದ ಡೆಲಿ ಕ್ಯಾಪಿಟಲ್ಸ್ ತಂಡ; 1 ತಿಂಗಳ ನಂತರ ಮೊದಲ ಪಂದ್ಯ
IPL 2021: ಡೆಲ್ಲಿ ಕ್ಯಾಪಿಟಲ್ಸ್ ಎಂಟು ಪಂದ್ಯಗಳಿಂದ 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಅವರು ಸೆಪ್ಟೆಂಬರ್ 22 ರಂದು ದುಬೈನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದ್ದಾರೆ.
Updated on: Aug 21, 2021 | 4:54 PM

ಡೆಲ್ಲಿ ಕ್ಯಾಪಿಟಲ್ಸ್

ತಂಡವು ದುಬೈಗೆ ಹೊರಟಿದೆ ಎಂದು ತಿಳಿಸಲು ಫ್ರ್ಯಾಂಚೈಸ್ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದೆ. ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ತಂಡದ ಸದಸ್ಯರನ್ನು ತೋರಿಸುತ್ತಾ, ತಂಡವು 'ಫಿರ್ ಸೇ ಉದ್ ಚಾಲ 2.0, ನಾವು ಯುಎಇಗೆ ಹೊರಟಿದ್ದೇವೆ' ಎಂದು ಬರೆದಿದೆ.

ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರು ಏರ್‌ಪೋರ್ಟ್‌ನಲ್ಲಿ ಪಿಪಿಇ ಕಿಟ್‌ನಲ್ಲಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಎನ್ರೂಟ್ ದುಬೈ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ. ತಂಡದ ವಿದೇಶಿ ಆಟಗಾರರು ಇನ್ನೂ ದುಬೈ ತಲುಪಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ಎಂಟು ಪಂದ್ಯಗಳಿಂದ 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಅವರು ಸೆಪ್ಟೆಂಬರ್ 22 ರಂದು ದುಬೈನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದ್ದಾರೆ.

ದೆಹಲಿ ಬ್ಯಾಟ್ಸ್ ಮನ್ ಶ್ರೇಯಸ್ ಅಯ್ಯರ್ ಈಗಾಗಲೇ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಜೊತೆ ದುಬೈ ತಲುಪಿದ್ದಾರೆ. ಐಸಿಸಿ ಅಕಾಡೆಮಿಯಲ್ಲಿ ಅವರು ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋವನ್ನು ಫ್ರಾಂಚೈಸ್ ಪೋಸ್ಟ್ ಮಾಡಿತ್ತು. ಭುಜದ ಗಾಯದಿಂದಾಗಿ ಅಯ್ಯರ್ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ.



















