India-Pakistan War Updates: ನಿನ್ನೆ ರಾತ್ರಿ ಭಾರತದ ಗಡಿ ರಾಜ್ಯಗಳಲ್ಲಿ ಏನೆಲ್ಲ ನಡೆಯಿತೆನ್ನುವುದರ ಮಾಹಿತಿ ಇಲ್ಲಿದೆ

Updated on: May 09, 2025 | 10:32 AM

ಭಾರತ ಆಪರೇಷನ್ ಸಿಂಧೂರ ನಡೆಸಿ ಉಗ್ರ ನೆಲೆಗಳನ್ನು ಧ್ವಂಸ ಮಾಡಿದ ನಂತರ ಪಾಕಿಸ್ತಾನಕ್ಕೆ ದಿಕ್ಕೆಟ್ಟಂತಾಗಿದೆ. ಪಾಕಿಸ್ತಾನ ಸೇನೆಯು ಜಮ್ಮು ಮತ್ತು ಕಾಶ್ಮೀರದ ಮೇಲೆ ಹಮಾಸ್ ಶೈಲಿಯ ಆಕ್ರಮಣ ನಡೆಸುತ್ತಿದೆ ಎಂದು ಪರಿಣಿತರು ಹೇಳುತ್ತಿದ್ದಾರೆ. ಇಸ್ರೇಲ್ ಮೇಲೆ ದಾಳಿ ನಡೆಸುತ್ತಿರುವ ಹಮಾಸ್ ಕೆಲ ನಾಯಕರು ಇತ್ತೀಚಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಾಣಿಸಿಕೊಂಡಿದ್ದರು. ಪಾಕ್ ಉಗ್ರರಿಗೆ ಮತ್ತು ಸೇನೆಗೆ ತರಬೇತಿ ನೀಡಿದ್ದು ಸ್ಪಷ್ಟವಾಗುತ್ತಿದೆ.

ದೆಹಲಿ, ಮೇ 9: ಭಾರತ ಪಾಕಿಸ್ತಾನದ ವಿರುದ್ಧ ನಡುವೆ ನಿನ್ನೆ ರಾತ್ರಿ ನಡೆಸಿದ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ನಮ್ಮ ದೆಹಲಿ ವರದಿಗಾರ ಸಮಗ್ರ ಮಾಹಿತಿಯನ್ನು ನೀಡಿದ್ದಾರೆ. ಗಡಿಭಾಗದ ನಾಲ್ಕು ರಾಜ್ಯಗಳಲ್ಲಿ ರಾತ್ರಿಯಿಡೀ ಶೆಲ್ಲಿಂಗ್ ನಡೆಯುತ್ತಿದ್ದ ಕಾರಣ ಅಲ್ಲಿ ಬ್ಲ್ಯಾಕ್ ಔಟ್ (black out) ಮಾಡಲಾಗಿತ್ತು ಮತ್ತು ಇಂದು ಬೆಳಗ್ಗೆ ವಿದ್ಯುತ್ ಪೂರೈಕೆಯನ್ನು ಪುನರ್​​ಸ್ಥಾಪಿಸಲಾಗಿದೆ. ಈ ರಾಜ್ಯಗಳಲ್ಲಿರುವ ಸೇನಾ ನೆಲೆಗಳು ಮತ್ತು ನಾಗರಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಜಮ್ಮು ಮತ್ತು ಕಾಶ್ಮೀರದ ಗಡಿ ಭಾಗದಲ್ಲಿ ಪಾಕಿಸ್ತಾನದ ಸೇನೆ ಅಪ್ರಚೋದಿತ ಗುಂಡಿನ ದಾಳಿಯನ್ನು ಮುಂದುವರಿಸಿದೆ ಮತ್ತು ಭಾರತೀಯ ಸೇನೆ ತಕ್ಕ ಉತ್ತರವನ್ನು ನೀಡಿದೆ. ಏತನ್ಮಧ್ಯೆ, ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್ ಶರೀಫ್ ಮತ್ತು ಸೇನೆಯ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ: ಭಾರತದಿಂದ ದಾಳಿಯ ಭಯ; ಆಹಾರ ಸಂಗ್ರಹಿಸಿಟ್ಟುಕೊಳ್ಳಲು ಗಡಿ ಭಾಗದ ಜನರಿಗೆ ಪಾಕಿಸ್ತಾನ ಸೂಚನೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ