ಹೂಡಿಕೆ ಹಗರಣ: ಕ್ರಿಕೆಟಿಗ ಕ್ರಿಸ್ ಗೇಲ್ ಹೆಸರಿನಲ್ಲಿ ಮಹಿಳೆಗೆ 2.8 ಕೋಟಿ ರೂ. ವಂಚನೆ
ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಹೆಸರು ಬಳಸಿಕೊಂಡು ವ್ಯಕ್ತಿಯೊಬ್ಬ ತನ್ನ ಸಹೋದರಿಗೆ 2.8 ಕೋಟಿ ರೂ. ವಂಚನೆ ಮಾಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಇದೊಂದು ಹೂಡಿಕೆ ಹಗರಣವಾಗಿದ್ದು, 60 ವರ್ಷದ ಮಹಿಳಾ ಉದ್ಯಮಿಯೊಬ್ಬರು ತಮ್ಮ ಸಹೋದರ ಸೇರಿ 6 ಮಂದಿ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದಾರೆ. ಅವರು ನಕಲಿ ಕಾಫಿ ಪುಡಿ ತಯಾರಿಕಾ ಕಂಪನಿಯಲ್ಲಿ ಹೂಡಿಕೆ ಮಾಡುವಂತೆ ಹೇಳಿದ್ದರು,

ಹೈದರಾಬಾದ್, ಮಾರ್ಚ್ 16: ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಹೆಸರು ಬಳಸಿಕೊಂಡು ವ್ಯಕ್ತಿಯೊಬ್ಬ ತನ್ನ ಸಹೋದರಿಗೆ 2.8 ಕೋಟಿ ರೂ. ವಂಚನೆ ಮಾಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಇದೊಂದು ಹೂಡಿಕೆ ಹಗರಣವಾಗಿದ್ದು, 60 ವರ್ಷದ ಮಹಿಳಾ ಉದ್ಯಮಿಯೊಬ್ಬರು ತಮ್ಮ ಸಹೋದರ ಸೇರಿ 6 ಮಂದಿ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದಾರೆ. ಅವರು ನಕಲಿ ಕಾಫಿ ಪುಡಿ ತಯಾರಿಕಾ ಕಂಪನಿಯಲ್ಲಿ ಹೂಡಿಕೆ ಮಾಡುವಂತೆ ಹೇಳಿದ್ದರು, ಹೆಚ್ಚಿನ ಲಾಭವನ್ನು ನೀಡುವ ಭರವಸೆಯನ್ನು ನೀಡಿದ್ದರು, ಆದರೆ ಇದು ಹಗರಣವೆಂದು ತನಗೆ ತಿಳಿದಿರಲಿಲ್ಲ ಎಂದು ಮಹಿಳೆ ಹೇಳಿದ್ದಾಳೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, , 5.7 ಕೋಟಿ ರೂ.ಗಳ ಹೂಡಿಕೆ ಯೋಜನೆಯು 60 ವರ್ಷದ ಉದ್ಯಮಿಯನ್ನು ಹೆಚ್ಚಿನ ಆದಾಯದ ಆಮಿಷಕ್ಕೆ ಒಳಪಡಿಸಿತು. ಈ ಹಗರಣದಲ್ಲಿ ಅವರು ಮಾತ್ರ ಹಣ ಕಳೆದುಕೊಂಡಿಲ್ಲ, ಇತರೆ ಹಲವರು ಆರ್ಥಿಕ ನಷ್ಟವನ್ನು ಅನುಭವಿಸಿದರು.
ಇದೆಲ್ಲವೂ ಸುಮಾರು ಆರು ವರ್ಷಗಳ ಹಿಂದೆ 2019 ರಲ್ಲಿ ಪ್ರಾರಂಭವಾಯಿತು, ಆ ಮಹಿಳೆಯ ಸಹೋದರ ಮತ್ತು ಅವರ ಪತ್ನಿ ಕೀನ್ಯಾದಲ್ಲಿರುವ ಕಾಫಿ ಪುಡಿ ತಯಾರಿಸುವ ಕಂಪನಿಯಲ್ಲಿ ಹೂಡಿಕೆ ಮಾಡಲು ಅವರನ್ನು ಸಂಪರ್ಕಿಸಿದರು. ಅವರು ಅಮೆರಿಕದಲ್ಲಿ ಹೊಸ ಘಟಕದೊಂದಿಗೆ ಕಂಪನಿಯು ವಿಸ್ತರಿಸುತ್ತಿದೆ ಎಂದು ಹೇಳಿ ಹೂಡಿಕೆಯ ಮೇಲೆ ಶೇಕಡಾ 4 ರಷ್ಟು ಲಾಭವನ್ನು ನೀಡುವ ಭರವಸೆ ನೀಡಿದ್ದರು.
ಮತ್ತಷ್ಟು ಓದಿ: Cyber Scam: ಸೈಬರ್ ವಂಚನೆಯಿಂದ 9 ತಿಂಗಳಲ್ಲಿ ಜನರು 107 ಕೋಟಿ ಕಳೆದುಕೊಂಡಿದ್ದಾರೆ: ಶಾಕಿಂಗ್ ಮಾಹಿತಿ ಬಹಿರಂಗ
ತಮ್ಮ ಸಹೋದರಿಯ ವಿಶ್ವಾಸ ಗಳಿಸಲು, ಆ ವ್ಯಕ್ತಿ ಜನಪ್ರಿಯ ಕ್ರಿಕೆಟಿಗ ಕ್ರಿಸ್ ಗೇಲ್ ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ತೋರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಇದರ ಪ್ರೊಮೋಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಸುಳ್ಳು ಹೇಳಿದ್ದಾರೆ. ಆ ಉದ್ಯಮಿ ಕೊನೆಗೂ ತನ್ನ ಸಹೋದರನ ವ್ಯವಹಾರದಲ್ಲಿ 2.8 ಕೋಟಿ ರೂ. ಹೂಡಿಕೆ ಮಾಡಲು ನಿರ್ಧರಿಸಿದಳು.
ತನ್ನ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಂದ ಇನ್ನೂ 2.2 ಕೋಟಿ ರೂ. ಹೂಡಿಕೆ ಮಾಡಲು ಕೇಳಿದಳು. ಇತರರು 70 ಲಕ್ಷ ಹೂಡಿಕೆ ಮಾಡಿ ಒಟ್ಟು 5.7 ಕೋಟಿ ರೂ. ಹೂಡಿಕೆ ಮಾಡಿದರು. ಆರೋಪಿಗಳು ಆರಂಭದಲ್ಲಿ ಕೆಲವು ರಿಟರ್ನ್ಸ್ ಪಾವತಿಸಿದರೂ, ಸ್ವಲ್ಪ ಸಮಯದ ನಂತರ ಪಾವತಿಗಳು ನಿಂತುಹೋದವು. ಆಗ ಮಹಿಳೆ ತನ್ನ ಸಹೋದರನನ್ನು ಪ್ರಶ್ನಿಸಿದಾಗ ತನ್ನ ಮಕ್ಕಳು ಯುಎಸ್ ಘಟಕವನ್ನು ನಿರ್ವಹಿಸುತ್ತಿದ್ದಾರೆ ಎಂದು ಸುಳ್ಳು ಹೇಳಿದ್ದರು. ಈ ಹಗರಣದಲ್ಲಿ ಹಣ ಕಳೆದುಕೊಂಡವರು 5.7 ಕೋಟಿ ರೂ. ಬದಲು ಕೇವಲ 90 ಲಕ್ಷ ರೂ.ವನ್ನು ಹಿಂಪಡೆದಿದ್ದಾರೆ.
ಇದೇ ರೀತಿಯ ಮತ್ತೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪುಣೆಯ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಮ್ಯಾಟ್ರಿಮೋನಿ ಸೈಟ್ನಲ್ಲಿ ಪರಿಚಯವಾದವನು 4.16 ಕೋಟಿ ರೂ. ವಂಚಿಸಿದ್ದ. ಪಿಂಪ್ರಿ ಚಿಂಚ್‌ವಾಡ್‌ನಲ್ಲಿರುವ ಸೈಬರ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಎಫ್‌ಐಆರ್ ದಾಖಲಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ